Roberrt: ರಾಬರ್ಟ್​ ಅಭಿಮಾನಿಗಳಿಗೆ ಡಿ.3ಕ್ಕೆ ಸಿಗಲಿದೆ ದೊಡ್ಡ ಸರ್ಪ್ರೈಸ್​..!

Darshan: ಅಭಿಮಾನಿಗಳಿಗೆ ಆಗಾಗ ಪೋಸ್ಟರ್​, ಹಾಡು ಹಾಗೂ ಟೀಸರ್​ ರಿಲೀಸ್​ ಮಾಡುವ ಮೂಲಕ ರಾಬರ್ಟ್​ ಚಿತ್ರತಂಡ ಸಮಾಧಾನ ಮಾಡುತ್ತಿದೆ. ಆದರೂ ಅಭಿಮಾನಿಗಳಿಗೆ ನೆಚ್ಚಿನ ನಟನನ್ನು ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳುವ ಆಸೆ. ಹೀಗಿರುವಾಗಲೇ ಚಿತ್ರತಂಡ ಡಿ.3ಕ್ಕೆ ದೊಡ್ಡ ಸರ್ಪ್ರೈಸ್​ ಪ್ಲಾನ್​ ಮಾಡಿದೆ.

ರಾಬರ್ಟ್​ ಸಿನಿಮಾದಲ್ಲಿ ದರ್ಶನ್​

ರಾಬರ್ಟ್​ ಸಿನಿಮಾದಲ್ಲಿ ದರ್ಶನ್​

  • Share this:
ಡಿಬಾಸ್​ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್​ ಕೊರೋನಾ ಲಾಕ್​ಡೌನ್​ ಇಲ್ಲದೇ ಹೋಗಿದ್ದರೆ, ಈಗಾಗಲೇ ರಿಲೀಸ್​ ಆಗಿ ಬಾಕ್ಸಾಫಿಸ್​ ಅನ್ನು ಕೊಳ್ಳೆ ಹೊಡೆಯುತ್ತಿತ್ತು. ಆದರೆ ಕೊರೋನಾ ಲಾಕ್​ಡೌನ್​ ಎಲ್ಲದಕ್ಕೂ ಬ್ರೇಕ್​ ಹಾಕಿತು. ಲಾಕ್​ಡೌನ್​ ಸಡಿಲಗೊಂಡು ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಆದರೆ ಸಿನಿಪ್ರಿಯರು ಮಾತ್ರ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಎರಡು ಹೊಸ ಸಿನಿಮಾಗಳು ಅಂದರೆ ಆ್ಯಕ್ಟ್ 1978 ಹಾಗೂ ಅರಿಷಡ್​ವರ್ಗ ರಿಲೀಸ್​ ಆಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿವೆ. ಆದರೂ ಸಿನಿಮಾ ನೋಡಲು ಜನರು ನಿರೀಕ್ಷಿಸಿದ ಮಟ್ಟದಲ್ಲಿ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಇದೇ ಕಾರಣದಿಂದ ಯಾವ ಸ್ಟಾರ್​ ನಟರ ಸಿನಿಮಾಗಳೂ ರಿಲೀಸ್​ ಆಗುತ್ತಿಲ್ಲ. ತೆರೆಗೆ ಬರಲು ಕನ್ನಡದ ದೊಡ್ಡ ನಟರ ಚಿತ್ರಗಳು ರೆಡಿ ಇದ್ದರೂ ನಿರ್ಮಾಪಕರು ಮಾತ್ರ ದೈರ್ಯ ಮಾಡುತ್ತಿಲ್ಲ. ದರ್ಶನ್​ ಅವರ ರಾಬರ್ಟ್​ ಸಹ ತೆರೆಗೆ ಬರಲು ಸಜ್ಜಾಗಿದೆ. ಆದರೂ ಚಿತ್ರತಂಡ ಇನ್ನು ರಿಲೀಸ್​ ಮಾಡುವ ಮನಸ್ಸು ಮಾಡಿಲ್ಲ. ಅಭಿಮಾನಿಗಳು ಮಾತ್ರ ಸಿನಿಮಾ ರಿಲೀಸ್​ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. 

ಅಭಿಮಾನಿಗಳಿಗೆ ಆಗಾಗ ಪೋಸ್ಟರ್​, ಹಾಡು ಹಾಗೂ ಟೀಸರ್​ ರಿಲೀಸ್​ ಮಾಡುವ ಮೂಲಕ ರಾಬರ್ಟ್​ ಚಿತ್ರತಂಡ ಸಮಾಧಾನ ಮಾಡುತ್ತಿದೆ. ಆದರೂ ಅಭಿಮಾನಿಗಳಿಗೆ ನೆಚ್ಚಿನ ನಟನನ್ನು ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳುವ ಆಸೆ. ಹೀಗಿರುವಾಗಲೇ ಚಿತ್ರತಂಡ ಡಿ.3ಕ್ಕೆ ದೊಡ್ಡ ಸರ್ಪ್ರೈಸ್​ ಪ್ಲಾನ್​ ಮಾಡಿದೆ.ಹೌದು, ಡಿ.3ಕ್ಕೆ ರಾಬರ್ಟ್​ ಚಿತ್ರದ ಮತ್ತೊಂದು ಪ್ರಮುಖ ಪಾತ್ರದ ಪೋಸ್ಟರ್​ ರಿಲೀಸ್​ ಮಾಡಲಾಗುತ್ತಿದೆ. ಅದು ದರ್ಶನ್​ ಅವರ ಜಿಗರಿ ದೋಸ್ತ್​ ವಿನೋದ್​ ಪ್ರಭಾಕರ್​ ಅವರದ್ದು. ಈ ಹಬ್ಬೆ ನಿರ್ದೇಶಕ ತರುಣ್​ ಸುಧೀರ್​ ಟ್ವೀಟ್​ ಮಾಡಿದ್ದಾರೆ.

ವಿನೋದ್ ಪ್ರಭಾಕರ್ ರವರ 1st look ಪೋಸ್ಟರ್ 03.12.2020 ರಂದು ಬೆಳೆಗೆ 10 ಗಂಟೆಗೆ ಬಿಡುಗಡೆ ಮಾಡಲಾಗುವುದು.ಡಿಸೆಂಬರ್ 3ಕ್ಕೆ ಬೆಳಿಗ್ಗೆ 10 ಗಂಟೆಗೆ ವಿನೋದ್​ ಪ್ರಭಾಕರ್​ ಅವರ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಆಗಲಿದೆ. ಇನ್ನು ಈ ಹಿಂದೆಯೇ ದರ್ಶನ್​ ಅವರ ಜೊತೆ ವಿನೋದ್​ ಪ್ರಭಾಕರ್​ ಇರುವ ಫೋಟೋವೊಂದು ವೈರಲ್​ ಆಗಿತ್ತು. ಅದು ಸಹ ಈ ಸಿನಿಮಾದ ಸೆಟ್​ನಿಂದಲೇ ಲೀಕ್​ ಆಗಿದ್ದು.

A grand gift from Darshan starrer Roberrt movie for the Ramadan festival
ರಾಬರ್ಟ್​ ಸಿನಿಮಾದಲ್ಲಿ ದರ್ಶನ್ ಹಾಗೂ ವಿನೋದ್​ ಪ್ರಭಾಕರ್​


ಡಿಸೆಂಬರ್​ 3ರಂದು ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬವಿದ್ದು, ಉಡುಗೊರೆಯಾಗಿ ಈ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಮಾಡಲಾಗುತ್ತಿದೆ. ಇನ್ನು ಈ ಸಿನಿಮಾ ಕನ್ನಡದ ಜೊತೆ ತೆಲುಗಿನಲ್ಲೂ ರಿಲೀಸ್​ ಆಗಲಿದೆ. ಇದೇ ಕಾರಣದಿಂದ ತೆಲುಗಿನ ನಟ ಜಗಪತಿ ಬಾಬು ಅವರನ್ನೂ ಈ ಚಿತ್ರಕ್ಕೆ ತೆಗೆದುಕೊಳ್ಳಲಾಗಿದೆ. ಕನ್ನಡದಲ್ಲಿ ಮೊದಲ ಬಾರಿಗೆ ಜಗಪತಿ ಬಾಬು ಅವರೇ ತಮ್ಮ ಪಾತ್ರಕ್ಕೆ ಡಬ್​ ಮಾಡಿದ್ದಾರೆ.
Published by:Anitha E
First published: