ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ರಿಲೀಸ್ ಆಗಿದೆ. ಕಳೆದ ಕೆಲವು ದಿನಗಳಿಂದಲೇ ದರ್ಶನ್ ಅಭಿಮಾನಿಗಳು ಚಿತ್ರಮಂದಿರಗಳ ಬಳಿ ರಾಬರ್ಟ್ ಕಟೌಟ್ ನಿಲ್ಲಿಸು ಕೆಲಸದಲ್ಲಿ ನಿರತರಾಗಿದ್ದರು. ಇನ್ನು ನಿನ್ನೆಯಿಂದಲೇ ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಮಾಡಿಸಲಾರಂಭಿಸಿದ್ದಾರೆ. ಪದ್ಮನಾಭನಗರದ ಶ್ರೀನಿವಾಸ ಥಿಯೇಟರ್ನಲ್ಲಿ ವಿಶೇಷ ಪೂಜೆ ಮಾಡಿಸಲಾಯಿತು. ರಾಬರ್ಟ್ ತಂಡದಿಂದ ಥಿಯೇಟರ್ ಸ್ಕ್ರೀನ್ಗೆ ವಿಶೇಷ ಪೂಜೆ ಮಾಡಿಸಲಾಯಿತು. ಪೂಜೆಯಲ್ಲಿ ನಿರ್ದೇಶಕ ತರುಣ್ ಸುಧೀರ್, ನಾಯಕಿ ಆಶಾ ಭಟ್ ಹಾಗೂ ಚಿತ್ರತಂಡ ಭಾಗಿಯಾಗಿತ್ತು. ಸಿನಿಮಾಗೆ ಯಶಸ್ಸು ಸಿಗಲಿ, ಯಾವುದೇ ಸಮಸ್ಯೆ ಆಗದಿರಲಿ ಎಂದು ಪೂಜೆ ಮಾಡಿಸಲಾಯಿತು. ಇನ್ನು ಪೂಜೆ ಮಾಡಿಸಿದ ನಂತರ ಶ್ರೀನಿವಾಸ ಥಿಯೇಟರ್ನಲ್ಲಿ ಸಿನಿಮಾದ ಮೊದಲ ಟಿಕೆಟ್ ಅನ್ನು ನಿರ್ದೇಶಕ ನಂದ ಕಿಶೋರ್ ಅವರ ಮಗ ಶೌರ್ಯನಿಗೆ ನೀಡಲಾಯಿತು. ತನ್ನ ಮಗ ಲಕ್ಕಿ ಅಂತ ಮಗನ ಮೂಲಕ ಟಿಕೆಟ್ ಪಡೆದಿದ್ದಾರೆ ನಿರ್ದೇಶಕ ನಂದ ಕಿಶೋರ್. ಪೂಜೆಯಲ್ಲಿ ಮದಗಜ ನಿರ್ದೇಶಕ ಮಹೇಶ್ ಸಹ ಭಾಗಿಯಾಗಿದ್ದರು.
ಕಳೆದ ವಾರ ನಂದ ಕಿಶೋರ್ ನಿರ್ದೇಶನದ ಪೊಗರು ಸಿನಿಮಾ ರಿಲೀಸ್ ಆಗಿತ್ತು. ಇವತ್ತು ಸಹೋದರ ತರುಣ್ ಕಿಶೋರ್ ಸಿನಿಮಾ ರಾಬರ್ಟ್ ರಿಲೀಸ್ ಆಗಿದ್ದು, ಚಿತ್ರತಂಡ ಆಯೋಜಿಸಿದ್ದ ಪೂಜೆಗೆ ಬಂದಿದ್ದರು ನಂದ ಕಿಶೋರ್. ರಾಬರ್ಟ್ ಚಿತ್ರ ಬಿಡುಗಡೆ ಹಿನ್ನೆಲೆ ಪ್ರಸನ್ನ ಚಿತ್ರಮಂದಿರಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಬೆಳಗ್ಗೆ 6.30ಕ್ಕೆ ರಾಬರ್ಟ್ ಮೊದಲ ಪ್ರದರ್ಶನ ಆರಂಭವಾಗಿದೆ.
View this post on Instagram
View this post on Instagram
#Roberrt is creating rage at Box Office 🔥
Tickets are selling like Hot Cakes. Already 360+ Shows are Sold out/Fast filling on Blore+Mysuru BMS Alone 👌@dasadarshan @StarAshaBhat @tv9kannada @AsianetNewsSN @News18Kannada @TV5kannada @NewsFirstKan @TV9Telugu @TBO_Updates pic.twitter.com/nDf2Ky66oR
— Darshan Universe (R) Official (@DBossFc171) March 10, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ