Roberrt New Poster: ಮಾಸ್​ ಲುಕ್​ನಲ್ಲಿ ದರ್ಶನ ಕೊಟ್ಟ ರಾಬರ್ಟ್: ಸಿನಿಮಾ ರಿಲೀಸ್​ ಬಗ್ಗೆ ಸಿಹಿ ಸುದ್ದಿ ಕೊಟ್ಟ ಡಿಬಾಸ್​​..!

Darshans New Look From Roberrt: ಈ ಹಿಂದೆ ರಾಬರ್ಟ್​ ಚಿತ್ರತಂಡ ರಾಮನವಮಿಯಂದು ಹಾಡನ್ನು ಬಿಡುಗಡೆ ಮಾಡಿತ್ತು. ಹೀಗೆ ಪ್ರತಿ ಹಬ್ಬಕ್ಕೂ ಒಂದೊಂದು ಉಡುಗೊರೆ ಕೊಡುವ ಮೂಲಕ ಅಭಿಮಾನಿಗಳನ್ನು ಖುಷಿಪಡಿಸುತ್ತಿದ್ದಾರೆ ದರ್ಶನ್​.

Anitha E | news18-kannada
Updated:May 25, 2020, 3:08 PM IST
Roberrt New Poster: ಮಾಸ್​ ಲುಕ್​ನಲ್ಲಿ ದರ್ಶನ ಕೊಟ್ಟ ರಾಬರ್ಟ್: ಸಿನಿಮಾ ರಿಲೀಸ್​ ಬಗ್ಗೆ ಸಿಹಿ ಸುದ್ದಿ ಕೊಟ್ಟ ಡಿಬಾಸ್​​..!
Darshans New Look From Roberrt: ಈ ಹಿಂದೆ ರಾಬರ್ಟ್​ ಚಿತ್ರತಂಡ ರಾಮನವಮಿಯಂದು ಹಾಡನ್ನು ಬಿಡುಗಡೆ ಮಾಡಿತ್ತು. ಹೀಗೆ ಪ್ರತಿ ಹಬ್ಬಕ್ಕೂ ಒಂದೊಂದು ಉಡುಗೊರೆ ಕೊಡುವ ಮೂಲಕ ಅಭಿಮಾನಿಗಳನ್ನು ಖುಷಿಪಡಿಸುತ್ತಿದ್ದಾರೆ ದರ್ಶನ್​.
  • Share this:
ಕೊರೋನಾ ಲಾಕ್​ಡೌನ್​ನಿಂದಾಗಿ ಇಂದು ಎಲ್ಲೆಡೆ ರಂಜಾನ್​ ಹಬ್ಬವನ್ನು ಸರಳವಾಗಿ ಸಂಭ್ರಮದಿಂದ  ಆಚರಿಸಲಾಗುತ್ತಿದೆ. ರಂಜಾನ್​ ಹಬ್ಬದಂದು ಅಭಿಮಾನಿಗಳಿಗಾಗಿ ರಾಬರ್ಟ್​ ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. 

ಈ ಹಿಂದೆ ರಾಬರ್ಟ್​ ಚಿತ್ರತಂಡ ರಾಮನವಮಿಯಂದು ಜೈ ಶ್ರೀ ರಾಮ್​ ಹಾಡನ್ನು ಗಾಯಕ ಶಂಕರ್ ಮಹದೇವನ್ ಅವರಿಂದ ಹಾಡಿಸಿ ಬಿಡುಗಡೆ ಮಾಡಿತ್ತು. ಹೀಗೆ ಪ್ರತಿ ಹಬ್ಬಕ್ಕೂ ಒಂದೊಂದು ಉಡುಗೊರೆ ಕೊಡುವ ಮೂಲಕ ಅಭಿಮಾನಿಗಳನ್ನು ಖುಷಿಪಡಿಸುತ್ತಿದ್ದಾರೆ ದರ್ಶನ್​.




ತಲೆಗೆ ಸ್ಟೈಲಿಶ್​ ಹೇರ್ ಬ್ಯಾಂಡ್​, ಕೂಲಿಂಗ್​ ಗ್ಲಾಸ್​ ಜೊತೆ ದಚ್ಚು ವಿಭಿನ್ನ ಹೇರ್​ ಸ್ಟೈಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಲೈಟಾಗಿ ಗಡ್ಡ ಬಿಟ್ಟು ಸಖತ್​ ಮಾಸ್​ ಲುಕ್​ನಲ್ಲಿರುವ ದಚ್ಚು ಸ್ಟೈಲ್​ ​ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿದೆ. ದರ್ಶನ್​ ಅವರ ಈ ಸ್ಟೈಲ್​  ಲಾಕ್​ಡೌನ್​ನಲ್ಲಿ ಟ್ರೆಂಡ್​ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.ಇದನ್ನೂ ಓದಿ: ಲಾಕ್​ಡೌನ್​ ಮುಗಿದ ಕೂಡಲೇ ವಿದೇಶಕ್ಕೆ ಹೋಗಲೇಬೇಕಂತೆ ರಕ್ಷಿತ್​ ಶೆಟ್ಟಿ...!

ರಂಜಾನ್​​ ಹಬ್ಬ​ಕ್ಕೆ ಶುಭ ಕೋರುವುದರೊಂದಿಗೆ ಸಿನಿಮಾ ಬಿಡುಗಡೆಯಾಗಲಿದೆ ಅನ್ನೋ ಸಿಹಿ ಸುದ್ದಿಯನ್ನೂ ಕೊಟ್ಟಿದ್ದಾರೆ. ಜನರ ಬದುಕು ಸಹಜ ಸ್ಥಿತಿಯತ್ತ ಮರಳುತ್ತಿದ್ದಂತೆಯೇ ರಾಬರ್ಟ್​ ಸಿನಿಮಾ ನಿಮ್ಮ ಮಡಿಲು ಸೇರಲಿದೆ ಎಂದು ದರ್ಶನ್​ ಟ್ವೀಟ್​ ಮಾಡಿದ್ದಾರೆ.



ಅಭಿಮಾನಿಗಳೇ ನನ್ನ ಸೆಲೆಬ್ರಿಟಿಗಳು ಎಂದಿದ್ದ ದರ್ಶನ್​, ನಿಜಕ್ಕೂ ಅಭಿಮಾನಿಗಳನ್ನು ಸೆಲೆಬ್ರಿಟಿಗಳಂತೆಯೇ ನಡೆಸಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ಲಾಕ್​ಡೌನ್​ನಲ್ಲಿ ಮನೆಯಲ್ಲೇ ಲಾಕ್​ ಆಗಿರುವ ಅಭಿಮಾನಿಗಳಿಗಾಗಿ ಆಗಾಗ ಚಿತ್ರತಂಡ ಕಡೆಯಿಂದ ಒಂದಲ್ಲಾ ಒಂದು ಸರ್ಪ್ರೈಸ್​ ಕೊಡುತ್ತಾ ಸಂಭ್ರಮಿಸುವಂತೆ ಮಾಡುತ್ತಿದ್ದಾರೆ.

ಮೇಕಪ್​ ಇಲ್ಲದಾಗ ಸಿನಿಮಾ ನಟಿಯರು ಹೇಗೆ ಕಾಣ್ತಾರೆ ಗೊತ್ತಾ..?

First published: May 25, 2020, 2:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading