Darshan: ದರ್ಶನ್​ ಅಭಿನಯದ ರಾಬರ್ಟ್​ ಚಿತ್ರದ ಹಿಂದಿ ಡಬ್ಬಿಂಗ್​ ರೈಟ್ಸ್​ಗೆ ಭಾರೀ ಬೇಡಿಕೆ..!

Roberrt Hindi Dubbing Rights: ಇನ್ನು ದಕ್ಷಿಣ ಭಾರತದ ಸಿನಿಮಾಗಳ ಹಿಂದಿ ಡಬ್ಬಿಂಗ್​ ಹಕ್ಕಿಗೆ ಬೇಡಿಕೆ ಹೆಚ್ಚುತ್ತಿದೆ. ಕಿರುತೆರೆಯಲ್ಲಿ ಈಗಾಗಲೇ ಹಿಂದಿ ಮೂವಿ ಚಾನಲ್​ಗಳಲ್ಲಿ ಕನ್ನಡ, ತೆಲುಗು ಹಾಗೂ ತಮಿಳಿನ ಸಿನಿಮಾಗಳು ರಾಜ್ಯಭಾರ ಮಾಡುತ್ತಿವೆ. ದಿನೇ ದಿನೇ ದಕ್ಷಿಣ ಭಾರತೀಯ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇನ್ನು ದರ್ಶನ್​ ಅವರ ಯಜಮಾನ ಸೇರಿದಂತೆ ಹಲವಾರು ಸಿನಿಮಾಗಳು ಹಿಂದಿ ಕಿರುತೆರೆಯಲ್ಲಿ ನಿತ್ಯ ಪ್ರದರ್ಶನ ಕಾಣುತ್ತಿವೆ.

ರಾಬರ್ಟ್​ ಸಿನಿಮಾಲ್ಲಿ ದರ್ಶನ್​

ರಾಬರ್ಟ್​ ಸಿನಿಮಾಲ್ಲಿ ದರ್ಶನ್​

  • Share this:
ಅಭಿಮಾನಿಗಳ ನೆಚ್ಚಿನ ನಟ ಡಿಬಾಸ್​​ ದರ್ಶನ್​ ಯಾವಾಗಲೂ ಚಾಲೆಂಜಿಂಗ್​ ಪಾತ್ರಗಳಲ್ಲೇ ನಟಿಸುತ್ತಾರೆ. ಅದರಂತೆ ಅವರ ಬಹುನಿರೀಕ್ಷಿತ ‘ರಾಬರ್ಟ್’​ ಸಿನಿಮಾದಲ್ಲೂ ಕೂಡ ಮೂರು ಶೇಡ್​ಗಳಲ್ಲಿ ದರ್ಶನ್​ ಮಿಂಚಲಿದ್ದಾರೆ. ತರುಣ್​ ಸುಧೀರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರಾಬರ್ಟ್​ ಸಿನಿಮಾ ಶೂಟಿಂಗ್​​ ಎಂದಿನಿಂದ ಪ್ರಾರಂಭವಾಯಿತೋ ಅಂದಿನಿಂದಲೇ ಸ್ಯಾಂಡಲ್​ವುಡ್​ನಲ್ಲಿ ರಾಬರ್ಟ್​ ಸಿನಿಮಾದ ಬಗ್ಗೆ ಸದ್ದು ಜೋರಾಗಿ ಕೇಳಿ ಬರುತ್ತಿದೆ. ಇನ್ನು ಈ ಸಿನಿಮಾದ ಶೂಟಿಂಗ್​ ಪೂರ್ಣಗೊಂಡಿದ್ದು, ಸಿನಿಮಾ ಬಿಡುಗಡೆಯಾಗುವುದು ಮಾತ್ರ ಬಾಕಿ ಇದೆ. ಲಾಕ್​ಡೌನ್​ನಲ್ಲಿ ತಮ್ಮ ನೆಚ್ಚಿನ ನಟ ಸಿನಿಮಾ ನೋಡದೆ ಬೇಸರಗೊಂಡಿರುವ ಅಭಿಮಾನಿಗಳು ರಾಬರ್ಟ್​ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆಸಿದ್ದರೆ ಸಿನಿಮಾ ಈಗಾಗಲೇ ತೆರೆಕಾಣಬೇಕಿತ್ತು.ಆದರೆ ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಸಿನಿಮಾ ಮುಂದೂಡಲ್ಪಟ್ಟಿತ್ತು. ಕೊರೋನಾ ಹಾವಳಿ ಪೂರ್ಣಗೊಂಡ ನಂತರವೇ ಸಿನಿಮಾ ತೆರೆಗೆ ಬರಲಿದೆ.

ಇನ್ನು ದಕ್ಷಿಣ ಭಾರತದ ಸಿನಿಮಾಗಳ ಹಿಂದಿ ಡಬ್ಬಿಂಗ್​ ಹಕ್ಕಿಗೆ ಬೇಡಿಕೆ ಹೆಚ್ಚುತ್ತಿದೆ. ಕಿರುತೆರೆಯಲ್ಲಿ ಈಗಾಗಲೇ ಹಿಂದಿ ಮೂವಿ ಚಾನಲ್​ಗಳಲ್ಲಿ ಕನ್ನಡ, ತೆಲುಗು ಹಾಗೂ ತಮಿಳಿನ ಸಿನಿಮಾಗಳು ರಾಜ್ಯಭಾರ ಮಾಡುತ್ತಿವೆ. ದಿನೇ ದಿನೇ ದಕ್ಷಿಣ ಭಾರತೀಯ ಸಿನಿಮಾಗಳಿಗೆ ಉತ್ತರ ಭಾರತದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಇನ್ನು ದರ್ಶನ್​ ಅವರ ಯಜಮಾನ ಸೇರಿದಂತೆ ಹಲವಾರು ಸಿನಿಮಾಗಳು ಹಿಂದಿ ಕಿರುತೆರೆಯಲ್ಲಿ ನಿತ್ಯ ಪ್ರದರ್ಶನ ಕಾಣುತ್ತಿವೆ. ಹೀಗಿರುವಾಗಲೇ ಇನ್ನೂ ರಿಲೀಸ್​ ಆಗ ರಾಬರ್ಟ್​ ಚಿತ್ರದ ಹಿಂದಿ ಡಬ್ಬಿಂಗ್​ ಹಕ್ಕು ಕೊಳ್ಳಲು ಸಂಸ್ಥೆಗಳು ಸಾಲುಗಟ್ಟಿ ನಿಂತಿವೆಯಂತೆ.

Roberrt Movie hindi dubbing, Darshan, Roberrt, Darshan's Roberrt Movie Hindi Dubbing Rights , Roberrt Hindi Dubbing Rights, Big Demand for Roberrt Hindi Dubbing Rights, ನಟ ದರ್ಶನ್, ರಾಬರ್ಟ್ ಸಿನಿಮಾ, ರಾಬರ್ಟ್ ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ ಬೇಡಿಕೆ, ರಾಬರ್ಟ್ ಡಬ್ಬಿಂಗ್ ರೈಟ್ಸ್ ಗೆ ಹೆಚ್ಚಿದ ಬೇಡಿಕೆ, Roberrt Poster, Roberrt Poster release, Darshan Twitter, Roberrt Movie, Roberrt Release, Roberrt News, Roberrt latest, Roberrt shooting, Roberrt release date, Darshan, D Boss darshan, Upamathi, Umapathi S Gowda, Roberrt producer, Tharun Sudhir, Roberrt Trailer, Roberrt Songs, Roberrt release date, ರಾಬರ್ಟ್, ದರ್ಶನ್, ಉಮಾಪತಿ, ತರುಣ್ ಸಧೀರ್
ರಾಬರ್ಟ್​ ಸಿನಿಮಾಲ್ಲಿ ದರ್ಶನ್​


ರಾಬರ್ಟ್​ ಸಿನಿಮಾದ ಹಿಂದಿ ಡಬ್ಬಿಂಗ್​ ರೈಟ್ಸ್​ ಕೊಳ್ಳಲು ಈಗಾಗಲೇ ದೊಡ್ಡ ಮೊತ್ತದ ಆಫರ್​ ಒಂದು ಬಂದಿದೆಯಂತೆ. ಆದರೆ ನಿರ್ಮಾಪಕ ಉಮಾಪತಿ ಅವರು ಈ ಬಗ್ಗೆ ಇನ್ನು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

ಡಿ.3ಕ್ಕೆ ರಾಬರ್ಟ್​​ ಚಿತ್ರತಂಡ ವಿಶೇಷ ಪೋಸ್ಟರ್​ವೊಂದನ್ನು ಬಿಡುಗಡೆ ಮಾಡಲು ಮುಂದಾಗಿದೆ. ನಿರ್ದೇಶಕ ತರುಣ್​ ಸುಧೀರ್​ ಈ ಬಗ್ಗೆ ಟ್ವಿಟ್ಟರ್​ನಲ್ಲಿ ಪೋಸ್ಟ್​​ ಮಾಡಿದ್ದಾರೆ. ಅದು ಸಿನಿಮಾದಲ್ಲಿ ದರ್ಶನ್​ ಜೊತೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ವಿನೋದ್​ ಪ್ರಭಾಕರ್​ ಅವರ ಫಸ್ಟ್​ಲುಕ್​ ಪೋಸ್ಟರ್​. ಡಿ.3ಕ್ಕೆ ಅವರ ಹುಟ್ಟುಹಬ್ಬವಾಗಿದ್ದು, ಅವರಿಗೆ ಉಡುಗೊರೆಯಾಗಿ ಈ ಪೋಸ್ಟರ್​ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ.

ಅಮೆಜಾನ್ ಕಡೆಯಿಂದ ರಾಬರ್ಟ್​ ಚಿತ್ರಕ್ಕೆ 70 ಕೋಟಿ ರೂ. ಬೇಡಿಕೆ ಬಂದಿದ್ದು ನಿಜ. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವವರೆಗೂ ಓಟಿಟಿ ಫ್ಲಾಟ್‍ಫಾರ್ಮ್‍ಗಳಲ್ಲಿ ರಿಲೀಸ್ ಮಾಡಲ್ಲ. ಲೇಟಾದರೂ ಪರವಾಗಿಲ್ಲ. ಥೀಯೇಟರ್​​ನಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ನಿರ್ಮಾಪಕರ ಉಮಾಪತಿ ಶ್ರೀನಿವಾಸ್ ಹೇಳಿದ್ದರು.
Published by:Anitha E
First published: