HOME » NEWS » Entertainment » DARSHAN STARRER ROBERRT MOVIE EARNED 78 CRORE IN SANDALWOOD BOX OFFICE IN 8 DAYS AE

Roberrt Collection: 8 ದಿನಗಳಲ್ಲಿ 78 ಕೋಟಿ ಗಳಿಸಿದ ರಾಬರ್ಟ್​ ಸಿನಿಮಾ..!

ಸ್ಯಾಂಡಲ್​ವುಡ್​ನಲ್ಲಿ 8 ದಿನಗಳಲ್ಲಿ ಒಟ್ಟಾರೆ 78.36 ಕೋಟಿ ಬಾಚಿಕೊಂಡಿದೆ ರಾಬರ್ಟ್​. ಇದು ನಿಜಕ್ಕೂ ಕನ್ನಡ ಸಿನಿಮಾಗಳ ಮಟ್ಟಿಗೆ ದೊಡ್ಡ ದಾಖಲೆ. ಲಾಕ್​ಡೌನ್​ ತೆರೆವುಗೊಳಿಸದ ಬಳಿಕ ಸಿನಿಮಾಗಳಿಗೆ ಬಾರದ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆ ತಂದಿದೆ ಈ ಸಿನಿಮಾ.

Anitha E | news18-kannada
Updated:March 19, 2021, 2:06 PM IST
Roberrt Collection: 8 ದಿನಗಳಲ್ಲಿ 78 ಕೋಟಿ ಗಳಿಸಿದ ರಾಬರ್ಟ್​ ಸಿನಿಮಾ..!
ರಾಬರ್ಟ್ ಸಿನಿಮಾದ ಬಾಕ್ಸಾಫಿಸ್​ ಕಲೆಕ್ಷನ್​
  • Share this:
ರಾಬರ್ಟ್​ ಸಿನಿಮಾ ಶಿವರಾತ್ರಿ ಹಬ್ಬದಂದು ರಿಲೀಸ್ ಆಗಿದ್ದು, ವಾರ ಕಳೆದರೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕನ್ನಡ ಹಾಗೂ ತೆಲುಗಿನಲ್ಲಿ ರಾಬರ್ಟ್​ ಕೋಟಿ ಕೋಟಿ ಕಲೆಕ್ಷನ್​ ಮಾಡುತ್ತಿದೆ. ವಿಜಯಯಾತ್ರೆ ಮುಂದುವರೆಸಿರುವ ರಾಬರ್ಟ್​ ಪ್ರೇಕ್ಷಕರಿಗೆ  ತುಂಬಾ ಇಷ್ಟವಾಗುತ್ತಿದ್ದು, ಭರ್ಜರಿ ಕಲೆಕ್ಷನ್ ಸಹ ಆಗುತ್ತಿದೆ. ತರುಣ್​ ಸುಧೀರ್ ನಿರ್ದೇಶನದ ಚಿತ್ರಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿವರಾತ್ರಿ ಹಬ್ಬದಿಂದ ಆರಂಭವಾಗಿರುವ ರಾಬರ್ಟ್​ ಚಿತ್ರದ ಓಟ ಇನ್ನೂ ಮುಂದುವರೆಯುತ್ತಿದೆ. ಮೊದಲ ದಿನವೇ ಬೆಳಗಿನ ಮೊದಲ ಶೋ ಹಾಗೂ ಸಂಜೆಯ ಬಹುತೇಕ ಶೋಗಳು ಹೌಸ್​ ಫುಲ್​ ಆಗಿದ್ದವು. ಇನ್ನು ವೀಕೆಂಡ್​ನಲ್ಲೂ ರಾಬರ್ಟ್​ ಅಬ್ಬರ ಮುಂದುವರೆದಿದೆ. ಈ ಸಿನಿಮಾಗೆ ಈಗಾಗಲೇ ಸಿಕ್ಕಿರುವ ಪ್ರತಿಕ್ರಿಯೆಯಿಂದಲೇ ಬಾಕ್ಸಾಫಿಸ್​ನಲ್ಲಿ ದರ್ಶನ್ ಓಡುವ ಕುದುರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಅಷ್ಟೇ ಅಲ್ಲ ಕೇಲವ ನಾಲ್ಕು ದಿನಗಳಲ್ಲಿ ರಾಬರ್ಟ್​ 50 ಕೋಟಿ ಕ್ಲಬ್​ ಸೇರಿತು. ಇನ್ನು ಇತ್ತೀಚೆಗಷ್ಟೆ ರಾಬರ್ಟ್​ ಚಿತ್ರತಂಡ ಸಕ್ಸಸ್​ ಮೀಟ್​ ಸಹ ಆಯೋಜಿಸಿತ್ತು. 

ಸಿನಿಮಾದಲ್ಲಿ ರಾಬರ್ಟ್​ನಿಂದ ರಾಘವನವರೆಗೆ ದರ್ಶನ್​ ಅಭಿನಯದ ಅಭಿಮಾನಿಗಳನ್ನು ಪದೇ ಪದೇ ಚಿತ್ರಮಂದಿರಗಳತ್ತ ಬರುವಂತೆ ಮಾಡುತ್ತಿದೆ. ಮೊದಲ ದಿನ ರಾಬರ್ಟ್​ ಚಿತ್ರದ ಕನ್ನಡ ವರ್ಷನ್​ 17.24 ಕೋಟಿ ಕಲೆಕ್ಷನ್ ಮಾಡಿದರೆ, ಆಂಧ್ರ ಮತ್ತು ತೆಲಂಗಾಣದಲ್ಲಿ 3.12 ಕೋಟಿ ಲೂಟಿ ಮಾಡಿದ್ದಾನೆ ಈ ರಾಬರ್ಟ್​​. ಎರಡನೇ ದಿನ ಕನ್ನಡದಲ್ಲಿ 12. 78, ಮೂರನೇ ದಿನ 14.10 ಲಕ್ಷ ಗಳಿಕೆ ಮಾಡಿದೆ ಇನ್ನು ನಾಲ್ಕನೇ ದಿನ ಅಂದರೆ ಭಾನುವಾರ 15.68 ಕೋಟಿ ಕಲೆಕ್ಷನ್​ ಆಗಿದೆ. ಅಂತೆಯೇ ನಾಲ್ಕನೇ ದಿನ ತೆಲುಗಿನಲ್ಲಿ 6.17 ಕೋಟಿ ಬಾಚಿಕೊಂಡಿದೆ ರಾಬರ್ಟ್​.





ಸ್ಯಾಂಡಲ್​ವುಡ್​ನಲ್ಲಿ 8 ದಿನಗಳಲ್ಲಿ ಒಟ್ಟಾರೆ 78.36 ಕೋಟಿ ಬಾಚಿಕೊಂಡಿದೆ ರಾಬರ್ಟ್​. ಇದು ನಿಜಕ್ಕೂ ಕನ್ನಡ ಸಿನಿಮಾಗಳ ಮಟ್ಟಿಗೆ ದೊಡ್ಡ ದಾಖಲೆ. ಲಾಕ್​ಡೌನ್​ ತೆರೆವುಗೊಳಿಸದ ಬಳಿಕ ಸಿನಿಮಾಗಳಿಗೆ ಬಾರದ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆ ತಂದಿದೆ ಈ ಸಿನಿಮಾ.




ಇನ್ನು ಟಾಲಿವುಡ್​ನಲ್ಲಿ ಅಂದರೆ ಆಂಧ್ರ ಹಾಗೂ ತೆಲಂಗಾಣದಲ್ಲೂ ಸಹ ರಾಬರ್ಟ್​ ಉತ್ತಮ ಗಳಿಕೆ ಮಾಡುತ್ತಿದೆ. ರಿಲೀಸ್​ ಆದ 7 ದಿನಗಳಲ್ಲಿ 7.61 ಕೋಟಿ ಕಲೆಕ್ಷನ್​ ಮಾಡಿದೆ.




ಪೈರಸಿ ಕಾಟ ನಡುವೆಯೂ ರಾಬರ್ಟ್​ ಮಾಡುತ್ತಿರುವ ಗಳಿಕೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇನ್ನು ಚಿತ್ರತಂಡ ಸಹ ಪ್ರೇಕ್ಷಕರ ಪ್ರತಿಕ್ರಿಯೆ ಕಂಡು ತುಂಬಾ ಖುಷಿಯಲ್ಲಿದೆ. ಸಿನಿಮಾದ ಸಕ್ಸಸ್ ಮೀಟ್​ ನಂತರ ದರ್ಶನ್​ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿದ್ದಾರೆ.






ಇನ್ನು, ರಾಬರ್ಟ್​ ಸಿನಿಮಾ ರಿಲೀಸ್ ಆಗುವ ಮುನ್ನ ಅಂದರೆ ಹೈದರಾಬಾದಿನಲ್ಲಿ ಪ್ರೀ-ರಿಲೀಸ್ ಇವೆಂಟ್​ಗೂ ಮುನ್ನ ದರ್ಶನ್ ಹಾಗೂ ಅವರ ತಂಡದವರು ತಿರುಪತಿಗೆ ಹೋಗಿ ಪೂಜೆ ಸಲ್ಲಿಸಿದ್ದರು. ನಂತರ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಡುವ ಮುನ್ನ ದೇವರ ಆಶೀರ್ವಾದ ಪಡೆಯಲೆಂದು ಹೋಗಿದ್ದಾಗಿಯೂ ತಿಳಿಸಿದ್ದರು.
Published by: Anitha E
First published: March 19, 2021, 2:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories