ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆಯಾ ರಾಬರ್ಟ್? ಅಭಿಮಾನಿಗಳ ಪ್ರಶ್ನೆಗೆ ತರುಣ್​ ಸುಧೀರ್​ ಕೊಟ್ರು ಉತ್ತರ!

Dboss: ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕೆಲ ಸಿನಿಮಾಗಳು ಪ್ಯಾನ್ ಇಂಡಿಯಾ ರಿಲೀಸ್​ ಆಗುತ್ತಿವೆ. ಯಶ್​ ನಟನೆಯ  ಕೆಜಿಎಫ್,​  ರಕ್ಷಿತ್​ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ಪ್ಯಾನ್​ ಇಂಡಿಯಾ ಬಿಡುಗಡೆಯಾಗಿತ್ತು.  ಅದರಂತೆ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಕೂಡ ಪ್ಯಾನ್​ ಇಂಡಿಯಾ ಬಿಡುಗಡೆಯಾಗಲಿದೆಯ  ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.

ನಟ ದರ್ಶನ್​

ನಟ ದರ್ಶನ್​

 • Share this:
  ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಭಾರೀ ಸದ್ದು ಸುದ್ದಿ ಮಾಡುತ್ತಿದೆ. ಏಪ್ರಿಲ್​ ತಿಂಗಳಿನಲ್ಲಿ ಈ ಸಿನಿಮಾ  ತೆರೆಗೆ ಬರಲಿದೆ. ಅಭಿಮಾನಿಗಳು ಸಿನಿಮಾಗಾಗಿ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ದರ್ಶನ್​ ಹುಟ್ಟು ಹಬ್ಬದ ಪ್ರಯುಕ್ತ ಫೆ.16 ರಂದು ಈ ಸಿನಿಮಾದ ಟ್ರೈಲರ್​ ಅನ್ನು ಚಿತ್ರತಂಡ ರಿಲೀಸ್​ ಮಾಡಲಿದೆ. ಈ ಮಧ್ಯೆ ದರ್ಶನ್​ ಅಭಿಮಾನಿಗಳಲ್ಲಿ ರಾಬರ್ಟ್​ ಸಿನಿಮಾ ಪ್ಯಾನ್​ ಇಂಡಿಯಾ ಬಿಡುಗಡೆಯಾಗಲಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆಗೆ ನಿರ್ದೇಶಕ ತರುಣ್​ ಸುಧೀರ್​ ಉತ್ತರ ನೀಡಿದ್ದಾರೆ.

  ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕೆಲ ಸಿನಿಮಾಗಳು ಪ್ಯಾನ್ ಇಂಡಿಯಾ ರಿಲೀಸ್​ ಆಗುತ್ತಿವೆ. ಯಶ್​ ನಟನೆಯ  ಕೆಜಿಎಫ್,​  ರಕ್ಷಿತ್​ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ಪ್ಯಾನ್​ ಇಂಡಿಯಾ ಬಿಡುಗಡೆಯಾಗಿತ್ತು.  ಅದರಂತೆ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಕೂಡ ಪ್ಯಾನ್​ ಇಂಡಿಯಾ ಬಿಡುಗಡೆಯಾಗಲಿದೆಯ  ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.

  ದರ್ಶನ್​ ನಟನೆಯ ಸಾಕಷ್ಟು ಸಿನಿಮಾಗಳು ಹಿಂದಿ, ತಮಿಳು ಹಾಗೂ ತೆಲುಗಿಗೆ ಡಬ್​ ಆಗಿ ತೆರೆಕಂಡಿವೆ. ಈ ಸಿನಿಮಾಗಳು ಯೂಟ್ಯೂಬ್​ನಲ್ಲಿ ಭಾರೀ ವೀಕ್ಷಣೆ ಕಾಣುತ್ತಿವೆ. ಈ ಕಾರಣಕ್ಕೆ ದರ್ಶನ್​ಗೆ ಬೇರೆ ಭಾಷೆಗಳಲ್ಲೂ ದೊಡ್ಡ ಅಭಿಮಾನಿ ಬಳಗವಿದೆ. ಹೀಗಾಗಿ,  'ರಾಬರ್ಟ್' ಸಿನಿಮಾ ಮೇಲೆ ಪರ ಭಾಷಿಗರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  ಇದನ್ನೂ ಓದಿ: Happy Valentines Day 2020: ಕೇಳಿ ಪ್ರೇಮಿಗಳೇ… ವ್ಯಾಲೆಂಟೈನ್ಸ್ ಡೇಗೂ ಇದೆ ಒಂದು ಇತಿಹಾಸ

  ಹೀಗಾಗಿ ಚಿತ್ರತಂಡ 'ರಾಬರ್ಟ್​'ಅನ್ನು ಹಿಂದಿ, ತೆಲುಗು, ತಮಿಳಿಗೆ ರಿಲೀಸ್​ ಮಾಡಲು ನಿರ್ಧರಿಸಿದೆ ಎನ್ನುವ ಮಾತು ಕೇಳಿ ಬಂದಿತ್ತು. ಇದಕ್ಕೆ ಈಗ ಖುದ್ದು ನಿರ್ದೇಶಕ ತರುಣ್​ ಸುಧೀರ್​ ಉತ್ತರ ನೀಡಿದ್ದಾರೆ.  'ರಾಬರ್ಟ್​ ಪ್ಯಾನ್‌ ಇಂಡಿಯಾ ಸಿನಿಮಾ ಹೌದೋ ಅಲ್ಲವೋ ಎಂಬುದನ್ನು ನಾವು ಎಲ್ಲಿಯೂ ಹೇಳಿಕೊಂಡಿಲ್ಲ. ಈ ಬಗ್ಗೆ ನಮ್ಮಲ್ಲಿ ಚರ್ಚೆ ನಡೆಯುತ್ತಿದೆ. ಏನು ತೀರ್ಮಾನ ತೆಗೆದುಕೊಂಡಿದ್ದೇವೆ ಎಂಬುದು ನಮಗೆ ಮಾತ್ರ ತಿಳಿದಿದೆ. ಯಾರೋ ಏನೋ ಕಲ್ಪಿಸಿಕೊಂಡಿದ್ದಾರೆ ಎಂದಮಾತ್ರಕ್ಕೆ ಅದಕ್ಕೆ ತಕ್ಕಂತೆ ನಾವು ಸಿನಿಮಾ ಮಾಡಲು ಸಾಧ್ಯವಿಲ್ಲ. ಪ್ಯಾನ್‌ ಇಂಡಿಯಾ ಮಾಡುತ್ತೇವೆ ಅಥವಾ ಮಾಡುತ್ತಿಲ್ಲ ಎಂಬುದನ್ನೂ ನಾವು ಇದುವರೆಗೂ ಹೇಳಿಲ್ಲ. ಸೂಕ್ತ ಸಮಯದಲ್ಲಿ ಈ ಬಗ್ಗೆ ಅನೌನ್ಸ್‌ ಮಾಡುತ್ತೇವೆ' ಎಂದು ತರುಣ್‌ ಸುಧೀರ್‌ ಪ್ರತಿಕ್ರಿಯೆ ನೀಡಿದ್ದಾರೆ.

  ರಾಬರ್ಟ್​ ಸಿನಿಮಾ ಶೂಟಿಂಗ್​ ಪೂರ್ಣಗೊಳಿಸಿದ್ದು, ಸದ್ಯ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ತೊಡಗಿಸಿಕೊಂಡಿದೆ. ಈ ಸಿನಿಮಾದಲ್ಲಿ ದರ್ಶನ್​ಗೆ ನಾಯಕಿಯಾಗಿ ಬಾಲಿವುಡ್​ ಬೆಡಗಿ ಆಶಾ ಭಟ್​, ಕನ್ನಡತಿ ಸೊನಲ್​ ಮೊಂತೆರೋ ಮತ್ತೊರ್ವ ನಟಿ ಐಶ್ವರ್ಯಾ ಪ್ರಸಾದ್​ ಅಭಿನಯಿಸಿದ್ದಾರೆ.   
  First published: