Asha Bhat: ರಾಬರ್ಟ್ ಬೆಡಗಿಗೆ ಶಾಕ್ ಕೊಟ್ಟ ಹ್ಯಾಕರ್ಸ್; ಆಶಾ ಭಟ್ ಟ್ವಿಟ್ಟರ್ ಖಾತೆಗೆ ಕನ್ನ

ಕನ್ನಡದ ಮೊದಲ ಸಿನಿಮಾದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಅಚ್ಚರಿ ಎಂದರೆ, ಆಶಾ ಭಟ್​ಗೆ ಸೈಬರ್​ ಕಳ್ಳರು ಶಾಕ್​ ನೀಡಿದ್ದಾರೆ

Rajesh Duggumane | news18-kannada
Updated:October 9, 2019, 9:32 AM IST
Asha Bhat: ರಾಬರ್ಟ್ ಬೆಡಗಿಗೆ ಶಾಕ್ ಕೊಟ್ಟ ಹ್ಯಾಕರ್ಸ್; ಆಶಾ ಭಟ್ ಟ್ವಿಟ್ಟರ್ ಖಾತೆಗೆ ಕನ್ನ
ದರ್ಶನ್​-ಆಶಾ ಭಟ್​
  • Share this:
ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣ ಖಾತೆಗಳಿಗೆ ಆಗಾಗ ಹ್ಯಾಕರ್ಸ್​ಗಳು ಕನ್ನ ಹಾಕುತ್ತಲೇ ಇರುತ್ತಾರೆ. ಬಾಲಿವುಡ್​ ಸ್ಟಾರ್​ ನಟ ಅಮಿತಾಭ್​ ಬಚ್ಚನ್​ ಅವರಿಂದ ಹಿಡಿದು ಸಾಕಷ್ಟು ಗಣ್ಯರು ಇದರ ಸಂತ್ರಸ್ತರಾಗಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ನಟಿ ಆಶಾ ಭಟ್​!

ಇತ್ತೀಚೆಗಷ್ಟೇ ಕನ್ನಡತಿ ಆಶಾ ಭಟ್​ ‘ರಾಬರ್ಟ್​​’ ಸಿನಿಮಾ ಚಿತ್ರದ ಸೆಟ್​ ಸೇರಿಕೊಂಡಿದ್ದರು. ಈ ಮೂಲಕ ಕನ್ನಡದ ಮೊದಲ ಸಿನಿಮಾದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಅಚ್ಚರಿ ಎಂದರೆ, ಆಶಾ ಭಟ್​ಗೆ ಸೈಬರ್​ ಕಳ್ಳರು ಶಾಕ್​ ನೀಡಿದ್ದಾರೆ. ಅವರ ಟ್ವಿಟ್ಟರ್​​ ಹಾಗೂ ಇನ್​ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎನ್ನಲಾಗಿದೆ.

ನಿನ್ನೆ, ಟರ್ಕಿ ಭಾಷೆಯಲ್ಲಿ ಆಶಾ ಭಟ್​ ಟ್ವಿಟ್ಟರ್​ ಖಾತೆಯಿಂದ ಟ್ವೀಟ್​ ಒಂದು ಹೊರ ಬಂದಿದೆ. ಅದರಲ್ಲಿ, ‘ದೆವ್ವ ಕೂಡ ಸಹಿ ಕೇಳುತ್ತದೆ’ ಎಂದು ಬರೆಯಲಾಗಿದೆ. ಅಲ್ಲದೆ ಟ್ವಿಟ್ಟರ್​ ಹ್ಯಾಕ್​ ಆಗಿದೆ ಎನ್ನುವ ಅರ್ಥ ಬರುವಂತೆಯೂ ಬರೆಯಲಾಗಿದೆ.


ಇದನ್ನೂ ಓದಿ: ರಾಬರ್ಟ್​ ನಾಯಕಿ ಆಶಾ ಭಟ್​ ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತಾ?

ಭದ್ರಾವತಿ ಮೂಲದವರಾದ ಆಶಾ ಭಟ್​ ಇತ್ತೀಚೆಗೆ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದರು. ಮಿಸ್​ ಸುಪ್ರಾ ನ್ಯಾಷನಲ್​ ಆಗಿ ಹೊರ ಹೊಮ್ಮಿದ್ದ ಅವರು, ಜಂಗ್ಲಿ ಮೂಲಕ ಬಾಲಿವುಡ್​ಗೆ ಕಾಲಿಟ್ಟಿದ್ದರು. ಈಗ ರಾಬರ್ಟ್​​ ಮೂಲಕ ಸ್ಯಾಂಡಲ್​ವುಡ್​ಗೂ ಕಾಲಿಡುತ್ತಿದ್ದಾರೆ.'ರಾಬರ್ಟ್​​' ಚಿತ್ರಕ್ಕೆ ದರ್ಶನ್​ ಹೀರೋ. 'ಚೌಕ' ಸಿನಿಮಾ ನಿರ್ದೇಶನ ಮಾಡಿದ್ದ ತರುಣ್​ ಸುಧೀರ್​ ಈ ಸಿನಿಮಾಗೆ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ. 'ಚೌಕ'ದಲ್ಲಿ ದರ್ಶನ್​ ರಾಬರ್ಟ್​ ಹೆಸರಿನ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಅದೇ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿರುವುದು ವಿಶೇಷ.

First published: October 9, 2019, 8:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading