Anitha EAnitha E
|
news18-kannada Updated:December 1, 2020, 10:06 AM IST
ಕುಮಟಾದಲ್ಲಿ ರಾಜವೀರ ಮದಕರಿ ನಾಯಕ ಚಿತ್ರತಂಡ
ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾ 'ರಾಜವೀರ ಮದಕರಿ ನಾಯಕ'. ಈ ಸಿನಿಮಾ ಹೆಸರು ಪ್ರಕಟವಾಗುತ್ತಿದ್ದಂತೆಯೇ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಈ ಸಿನಿಮಾವನ್ನು ಸುದೀಪ್ ಅವರೇ ಮಾಡಬೇಕೆಂಬ ಒಂದು ವರ್ಗದವರು ಒತ್ತಡ ಹೇರಲಾರಂಭಿಸಿದ್ದರು. ಇದು ಡಿಬಾಸ್ ಹಾಗೂ ಕಿಚ್ಚನ ಅಭಿಮಾನಿಗಳ ನಡುವೆ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವಾರ್ ನಡೆಯುವಂತೆ ಮಾಡಿತ್ತು. ನಂತರ ಸುದೀಪ್ ತಾವೇ ಈ ವಿವಾದಕ್ಕೆ ತೆರೆ ಎಳೆದರು. ಇನ್ನು, ದರ್ಶನ್ 'ರಾಬರ್ಟ್' ಚಿತ್ರೀಕರಣ ಮುಗಿದ ನಂತರ ಸ್ವಲ್ಪ ಬ್ರೇಕ್ ಪಡೆದು ಪಕ್ಷಿಗಳ ಛಾಯಾಗ್ರಹಣಕ್ಕೆಂದು ಹೋಗಿದ್ದರು. ಅಂದರೆ ಲಾಕ್ಡೌನ್ಗೂ ಮೊದಲು ಫೆಬ್ರವರಿಯಲ್ಲಿ ತಮ್ಮ ಹೊಸ ಸಿನಿಮಾ 'ರಾಜವೀರ ಮದಕರಿ ನಾಯಕ' ಚಿತ್ರೀಕರಣಕ್ಕೆ ಹಾಜರಾಗಿದ್ದರು ಡಿಬಾಸ್. ಆಗಲೇ ಚಿತ್ರದ ಚಿತ್ರೀಕರಣಕ್ಕೆ ಕಿಕ್ ಸ್ಟಾರ್ಟ್ ಸಿಕ್ಕಿತ್ತು. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ವೀರ ಮದಕರಿನಾಯಕ ಶೂಟಿಂಗ್ ಕೇರಳದ ಕೊಚ್ಚಿಯಲ್ಲಿ ನಡೆದಿತ್ತು. ಅದಕ್ಕಾಗಿ ದರ್ಶನ್ ಕೊಚ್ಚಿಗೆ ಹಾರಿದ್ದರು. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬರ ಜೊತೆ ಸೆಲ್ಫಿ ತೆಗೆದುಕೊಂಡಿದ್ದರು. ಅಭಿಮಾನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಚಿತ್ರ ಆಗ ವೈರಲ್ ಆಗಿತ್ತು.
ಕೊರೋನಾ ಲಾಕ್ಡೌನ್ನಿಂದಾಗಿ ರಾಜವೀರ ಮದಕರಿ ನಾಯಕ ಸಿನಿಮಾ ಚಿತ್ರೀಕರಣವನ್ನು ಅರ್ಧಕ್ಕೆ ಮುಗಿಸಬೇಕಾಯಿತು. ಇದಾದ ನಂತರ ಮತ್ತೆ ಲಾಕ್ಡೌನ್ ಸಡಿಲಗೊಂಡ ನಂತರವೇ ಮೊದಲ ಹಂತದ ಶೂಟಿಂಗ್ ಮುಗಿಸಲಾಯಿತು. ಈಗ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ರಾಜವೀರ ಮದಕರಿ ನಾಯಕನಾಗಿ ದರ್ಶನ್
ಹೌದು, ರಾಜವೀರ ಮದಕರಿ ನಾಯಕ ಸಿನಿಮಾದ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು ಹಾಗೂ ನಟ ದೊಡ್ಡಣ್ಣ ಅವರು ಈ ಸಿನಿಮಾದ ಎರಡನೇ ಹಂತದ ಚಿತ್ರೀಕರಣದ ಲೊಕೇಷನ್ ಹಂಟಿಂಗ್ನಲ್ಲಿದ್ದಾರೆ. ಅದಕ್ಕಾಗಿ ಈ ತಂಡ ಕುಮಟಾದಲ್ಲಿ ಸುತ್ತಾಡುತ್ತಿದ್ದಾರೆ.
ಕುಮಟಾದ ಮಿರ್ಜಾನ್ ಕೋಟೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ರಾಜವೀರ ಮದಕರಿ ನಾಯಕ ಚಿತ್ರತಂಡ ಅಡ್ಡಾಡಿದೆ. ಈ ವೇಳೆ ತೆಗೆದ ಅವರ ಗ್ರೂಪ್ ಫೋಟೋ ಸದ್ಯ ದರ್ಶನ್ ಅವರ ಅಭಿಮಾನಿಗಳ ಟ್ವಿಟರ್ ಖಾತೆಯಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: Darshan: ದರ್ಶನ್ ಅಭಿನಯದ ರಾಬರ್ಟ್ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ಗೆ ಭಾರೀ ಬೇಡಿಕೆ..!
ಇನ್ನು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಆದರೆ ನಿರ್ಮಾಪಕ ಉಮಾಪತಿ ಅವರು ಇನ್ನೂ ಚಿತ್ರದ ರಿಲೀಸ್ಗೆ ಮನಸ್ಸು ಮಾಡಿಲ್ಲ. ಡಿ.3ಕ್ಕೆ ಚಿತ್ರತಂಡ ವಿನೋದ್ ಪ್ರಭಾಕರ್ ಅವರ ಫಸ್ಟ್ಲುಕ್ ಪೋಸ್ಟರ್ ರಿಲೀಸ್ ಮಾಡುತ್ತಿದೆ.
Published by:
Anitha E
First published:
December 1, 2020, 9:58 AM IST