• Home
 • »
 • News
 • »
 • entertainment
 • »
 • Odeya Trailer: ಯೂಟ್ಯೂಬ್​​​ನಲ್ಲಿ ‘ಒಡೆಯ‘ನ ಆರ್ಭಟ; ಟ್ರೇಲರ್ ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಎಷ್ಟು ವೀಕ್ಷಣೆ ಗೊತ್ತಾ?

Odeya Trailer: ಯೂಟ್ಯೂಬ್​​​ನಲ್ಲಿ ‘ಒಡೆಯ‘ನ ಆರ್ಭಟ; ಟ್ರೇಲರ್ ರಿಲೀಸ್ ಆದ ಕೆಲವೇ ನಿಮಿಷದಲ್ಲಿ ಎಷ್ಟು ವೀಕ್ಷಣೆ ಗೊತ್ತಾ?

 ದರ್ಶನ್​

ದರ್ಶನ್​

Odeya Trailer: ‘ಯಜಮಾನ‘, ‘ಮುನಿರತ್ನ ಕುರುಕ್ಷೇತ್ರ‘ ಸಿನಿಮಾದ ಗೆಲುವಿನ ಅಲೆಯ ಮೇಲೆ ಈ ವರ್ಷ ಬಿಡುಗಡೆಯಾಗುತ್ತಿರುವ ಮೂರನೇ ಚಿತ್ರ ‘ಒಡೆಯ‘. ಇದು ತಮಿಳಿನ ವೀರಂ ಚಿತ್ರದ ರಿಮೇಕ್​ ಆಗಿದೆ

 • Share this:

  ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ‘ಒಡೆಯ‘ ಸಿನಿಮಾದ ಟ್ರೈಲರ್​ ಇಂದು ಬಿಡುಗಡೆಯಾಗಿದೆ. ಬಿಡುಗಡೆಯಾದ 97 ನಿಮಿಷಗಳಲ್ಲೇ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

  ತುದಿಗಾಳಿನಲ್ಲಿ ಕಾಯುತ್ತಿದ್ದ ಅಭಿಮಾನಿಗಳಿಗಂತೂ ‘ಒಡೆಯ‘ ಟ್ರೈಲರ್​ ಮೂಲಕ ದರ್ಶನ ಭಾಗ್ಯ ಸಿಕ್ಕಿದೆ. ಇದೇ ತಿಂಗಳ ಡಿಸೆಂಬರ್​ 12 ರಂದು ರಾಜ್ಯಾದ್ಯಂತ ಬೆಳ್ಳಿತೆರೆಯ ಮೇಲೆ  ‘ಒಡೆಯ‘ ಚಿತ್ರ ರಾರಾಜಿಸಲಿದೆ.

  ‘ಯಜಮಾನ‘, ‘ಮುನಿರತ್ನ ಕುರುಕ್ಷೇತ್ರ‘ ಸಿನಿಮಾದ ಗೆಲುವಿನ ಅಲೆಯ ಮೇಲೆ ಈ ವರ್ಷ ಬಿಡುಗಡೆಯಾಗುತ್ತಿರುವ ಮೂರನೇ ಚಿತ್ರ ‘ಒಡೆಯ‘. ಇದು ತಮಿಳಿನ ವೀರಂ ಚಿತ್ರದ ರಿಮೇಕ್​ ಆಗಿದೆ. ಈ ಹಿಂದೆ ‘ಪೊರ್ಕಿ‘ ಮತ್ತು ‘ಬುಲ್​ಬುಲ್​‘ ಚಿತ್ರ ನಿರ್ದೇಶಿಸಿದ ಎಂ.ಡಿ ಶ್ರೀಧರ್​​ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ.  ಈ ಸಿನಿಮಾವು ಐವರು ಸಹೋದರರ ಪ್ರೀತಿಯ ಅಣ್ಣನ ಕಥೆಯಾಗಿದೆ. ದರ್ಶನ್ ಅವರ ಪಾತ್ರದ ಹೆಸರು ಗಜೇಂದ್ರ. ತಮಿಳಿನಲ್ಲಿ ಅಜಿತ್ ನಿರ್ವಹಿಸಿದ್ದ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ದರ್ಶನ್​ ಅವರಿಗೆ ನಾಯಕಿಯಾಗಿ ಸನಾ ತಿಮ್ಮಯ್ಯ ನಟಿಸಿದ್ದಾರೆ.  ಇನ್ನು ಈ ಚಿತ್ರದಲ್ಲಿ ದೇವರಾಜ್​, ಆರುಮುಗಂ ರವಿಶಂಕರ್​, ಸಾಧುಕೋಕಿಲ, ಚಿಕ್ಕಣ್ಣ, ತಬಲ ನಾನಿ ಸೇರಿದಂತೆ ಅನೇಕ ತಾರಾ ಬಳಗವನ್ನು ಹೊಂದಿದೆ.

  ಒಡೆಯ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ U/A ಸರ್ಟಿಫಿಕೇಟ್ ದೊರಕಿದೆ. ಡಿಸೆಂಬರ್ ತಿಂಗಳಿನ 2ನೇ ವಾರದಂದು ಒಡೆಯ ಅಬ್ಬರಿಸಲು ಸಿದ್ಧವಾಗಿದ್ದು, ಬಾಕ್ಸ್​​ ಆಫೀಸಿನಲ್ಲಿ ಧೂಳೆಬ್ಬಿಸುವ ನಿರೀಕ್ಷೆಯಿದೆ.

  ಇದನ್ನೂ ಓದಿ: ಬಾಲಿವುಡ್​​ನಲ್ಲಿ ವೈರಲ್​ ಆಗುತ್ತಿದೆ ‘ಧೀಮ್​ ಧೀಮ್‘​ ಚಾಲೆಂಜ್​; ​ನಟನ ಸಹಾಯ ಕೇಳಿದ ದೀಪಿಕಾ ಪಡುಕೋಣೆ

  ಇದನ್ನೂ ಓದಿ: Bigg Boss Kannada 7: ಈ ವಾರ ಮನೆಯಿಂದ ಹೊರ ಹೋಗುವ 7ನೇ ಸ್ಪರ್ಧಿ ಇವರೇ!?

   

  First published: