Odeya Teaser: ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ 'ಒಡೆಯ' ಟೀಸರ್​..!

'ಒಡೆಯ' ಚಿತ್ರದಲ್ಲಿನ ತಮ್ಮ ಫಸ್ಟ್​ಲುಕ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಸೋಷಿಯಲ್​ ಮೀಡಿಯಾದ ಡಿಪಿ ಬದಲಾಯಿಸಿದ ದರ್ಶನ್​

'ಒಡೆಯ' ಚಿತ್ರದಲ್ಲಿನ ತಮ್ಮ ಫಸ್ಟ್​ಲುಕ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಸೋಷಿಯಲ್​ ಮೀಡಿಯಾದ ಡಿಪಿ ಬದಲಾಯಿಸಿದ ದರ್ಶನ್​

Darshan's odeya teaser: ಎಂ.ಡಿ. ಶ್ರೀಧರ್ ನಿರ್ದೇಶನದ, ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ 'ಒಡೆಯ' ಸಿನಿಮಾದ ಟ್ರೈಲರ್​ ಬಿಡುಗಡೆಯಾಗುತ್ತಿದ್ದಂತೆಯೇ ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ.  ಖಡಕ್ ಡೈಲಾಗ್ ಹಾಗೂ ಆ್ಯಕ್ಷನ್​ಗಳಿಂದ ಕೂಡಿರುವ ಈ ಒಂದು ನಿಮಿಷ 4 ಸೆಕೆಂಡ್​ನ ಟೀಸರ್ ಯೂಟ್ಯೂಬ್​ನಲ್ಲಿ ರಿಲೀಸ್ ಆದ ಒಂದು ತಾಸಿನಲ್ಲೇ 5 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.

ಮುಂದೆ ಓದಿ ...
  • Share this:

    ಈ ಸಲ ಕನ್ನಡ ರಾಜ್ಯೋತ್ಸವದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಬಂಪರ್ ಉಡುಗೊರೆ ನೀಡಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾದ 'ಒಡೆಯ' ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ.

    ಎಂ.ಡಿ. ಶ್ರೀಧರ್ ನಿರ್ದೇಶನದ, ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ 'ಒಡೆಯ' ಸಿನಿಮಾದ ಟ್ರೈಲರ್​ ಬಿಡುಗಡೆಯಾಗುತ್ತಿದ್ದಂತೆಯೇ ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ.  ಖಡಕ್ ಡೈಲಾಗ್ ಹಾಗೂ ಆ್ಯಕ್ಷನ್​ಗಳಿಂದ ಕೂಡಿರುವ ಈ ಒಂದು ನಿಮಿಷ 4 ಸೆಕೆಂಡ್​ನ ಟೀಸರ್ ಯೂಟ್ಯೂಬ್​ನಲ್ಲಿ ರಿಲೀಸ್ ಆದ ಒಂದು ತಾಸಿನಲ್ಲೇ 5 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.



    ಸದ್ಯ ಈ ಟ್ರೈಲರ್​ಗೆ ಯೂಟ್ಯೂಬ್​ನಲ್ಲಿ 7 ಲಕ್ಷ 79 ಸಾವಿರಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ. ಈ ಟೀಸರ್​ ಬಿಡುಗಡೆಯಾಗುತ್ತಿದ್ದಂತೆಯೇ ಅದನ್ನು ಟ್ರೆಂಡ್​ ಮಾಡುವ ಸಲುವಾಗಿ ಡಿಬಾಸ್​ ಅಭಿಮಾನಿಗಳು ಸಿಕ್ಕಾಪಟ್ಟೆ ಶ್ರಮಪಟ್ಟಿದ್ದಾರೆ.

    ಕಳೆದ ಕೆಲವು ದಿನಗಳಿಂದಲೇ ಈ ಬಗ್ಗೆ ಟ್ವಿಟರ್​, ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂನಲ್ಲಿ ಟೀಸರ್​ ಅನ್ನು ನೇರವಾಗಿ ಯೂಟ್ಯೂಬ್​ನಲ್ಲೇ ನೋಡುವಂತೆ, ಅದನ್ನೇ ಶೇರ್​ ಮಾಡುವಂತೆ ಪೋಸ್ಟ್​ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಬಿಡುಗಡೆಯಾಯ್ತು 'ಒಡೆಯ' ಟೀಸರ್: ​ಕನ್ನಡ ರಾಜ್ಯೋತ್ಸವದಂದೇ ಆಂಭವಾಯ್ತು ದರ್ಶನ್​ ದರ್ಬಾರು!

    ಅಭಿಮಾನಿಗಳನ್ನ ಸೆಲೆಬ್ರಿಟಿ ಎಂದಿದ್ದ ದರ್ಶನ್​ ಅವರಿಗೆ ಫ್ಯಾನ್ಸ್​ ತಮ್ಮ ಅಭಿಮಾನವನ್ನು ಸದಾ ಒಂದಲ್ಲ ಒಂದು ರೀತಿ ತೋರಿಸುತ್ತಲೇ ಇರುತ್ತಾರೆ. ಇಂದು ಅವರ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಅದನ್ನು ಟ್ರೆಂಡ್​ ಮಾಡಲು ಸೆಲೆಬ್ರಿಟಿ ಅಭಿಮಾನಿಗಳು ಪಣ ತೊಟ್ಟು ನಿಂತಿದ್ದಾರೆ.

    HBD Ileana DCruz: ಹುಟ್ಟುಹಬ್ಬಕ್ಕೂ ಹಾಟ್​ ಫೋಟೋ ಹಂಚಿಕೊಂಡ ಬಿಕಿನಿ ಸುಂದರಿ ಇಲಿಯಾನಾ..!



     

    First published: