Kurukshetra Collections: ಕೋಟಿ ಕೋಟಿ ಬಾಚಿಕೊಂಡ ಕುರುಕ್ಷೇತ್ರ: ಬಾಕ್ಸಾಫಿಸ್​-ಡಿಜಿಟಲ್​ ಹಕ್ಕಿನಿಂದ ದುರ್ಯೋಧನ ಗಳಿಸಿದೆಷ್ಟು ಗೊತ್ತಾ..!

Kurukshetra Collections: ಗಾಂಧಿನಗರದ ಮೂಲಗಳ ಪ್ರಕಾರ ದರ್ಶನ್ ನಟನೆಯ ಚಿತ್ರಗಳಲ್ಲೇ ಅತಿಹೆಚ್ಚು ಹಣವನ್ನ ಗಳಿಸೋ ಸಿನಿಮಾವಾಗಿ ಕುರುಕ್ಷೇತ್ರ ನಿಲ್ಲಲಿದೆ ಎನ್ನಲಾಗುತ್ತಿದೆ. ಅದರ ಸೂಚನೆ ಮೊದಲ ನಾಲ್ಕು ದಿನಗಳ ಕಲೆಕ್ಷನ್ ಕೊಡುತ್ತಿದೆ. ಈಗಾಗಲೇ ಕುರುಕ್ಷೇತ್ರ ನಾಲ್ಕು ದಿನಗಳಲ್ಲಿ 35 ಕೋಟಿ ದಾಟಿದೆ ಅನ್ನೋದು ಚಿತ್ರೋದ್ಯಮದ ಮೂಲಗಳಿಂದ ತಿಳಿದ ಮಾಹಿತಿಯಾಗಿದೆ.

Anitha E | news18
Updated:August 14, 2019, 12:17 PM IST
Kurukshetra Collections: ಕೋಟಿ ಕೋಟಿ ಬಾಚಿಕೊಂಡ ಕುರುಕ್ಷೇತ್ರ: ಬಾಕ್ಸಾಫಿಸ್​-ಡಿಜಿಟಲ್​ ಹಕ್ಕಿನಿಂದ ದುರ್ಯೋಧನ ಗಳಿಸಿದೆಷ್ಟು ಗೊತ್ತಾ..!
ಕುರುಕ್ಷೇತ್ರದಲ್ಲಿ ದರ್ಶನ್​
Anitha E | news18
Updated: August 14, 2019, 12:17 PM IST
`ಕೌರವೇಶ್ವರ' ಬಾಕ್ಸಾಫಿಸ್‍ನಲ್ಲಿ ಅಬ್ಬರಿಸಿ, ಬೊಬ್ಬಿರಿಯುತ್ತಿದ್ದಾನೆ. 'ಕುರುಕ್ಷೇತ್ರ' ಸಿನಿಮಾ ಮೊದಲ ನಾಲ್ಕು ದಿನಗಳಲ್ಲಿ ಅದ್ಭುತ ಗಳಿಕೆ ಕಂಡಿದೆ ಎನ್ನಲಾಗ್ತಿದೆ. ಬಿಡುಗಡೆಯಾದ ದಿನ ವರಮಹಾಲಕ್ಷ್ಮಿ ಹಬ್ಬದ ರಜೆ, ಶನಿವಾರ, ಭಾನುವಾರದ ವೀಕೆಂಡ್ ಬಳಿಕ ಸೋಮವಾರ ಬಕ್ರೀದ್... ಹೀಗೆ ಸತತ ನಾಲ್ಕು ರಜಾ ದಿನಗಳು 'ಕುರುಕ್ಷೇತ್ರ'ದ ಅಮೋಘ ಗಳಿಕೆಗೆ ಸಹಕಾರವಾಗಿವೆ.

ಗಾಂಧಿನಗರದ ಮೂಲಗಳ ಪ್ರಕಾರ ದರ್ಶನ್ ನಟನೆಯ ಚಿತ್ರಗಳಲ್ಲೇ ಅತಿಹೆಚ್ಚು ಹಣವನ್ನ ಗಳಿಸೋ ಸಿನಿಮಾವಾಗಿ 'ಕುರುಕ್ಷೇತ್ರ' ನಿಲ್ಲಲಿದೆ ಎನ್ನಲಾಗುತ್ತಿದೆ. ಅದರ ಸೂಚನೆ ಮೊದಲ ನಾಲ್ಕು ದಿನಗಳ ಕಲೆಕ್ಷನ್ ಕೊಡುತ್ತಿದೆ. ಈಗಾಗಲೇ 'ಕುರುಕ್ಷೇತ್ರ' ನಾಲ್ಕು ದಿನಗಳಲ್ಲಿ 35 ಕೋಟಿ ದಾಟಿದೆ ಅನ್ನೋದು ಚಿತ್ರೋದ್ಯಮದ ಮೂಲಗಳಿಂದ ತಿಳಿದ ಮಾಹಿತಿಯಾಗಿದೆ.

Darshan's 50th Movie Kurukshetra review, Kurukshetra review
'ಕುರುಕ್ಷೇತ್ರ' ಸಿನಿಮಾದಲ್ಲಿ ದರ್ಶನ್​


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯವೇ ಚಿತ್ರದ ಹೈಲೈಟ್ ಆಗಿದ್ದು, ತಮ್ಮ ನೆಚ್ಚಿನ ನಟನನ್ನ ದುರ್ಯೋಧನನ ಅವತಾರದಲ್ಲಿ ನೋಡಲು ಮುಗಿ ಬೀಳುತ್ತಿದ್ದಾರೆ ಅಭಿಮಾನಿಗಳು.

ಆಡಿಯೋ, ವಿಡಿಯೋ, ಡಿಜಿಟಲ್‍ನಿಂದ ಬಂದಿದ್ದೆಷ್ಟು ?

'ಕುರುಕ್ಷೇತ್ರ' ಥಿಯೇಟರ್ ಗಳಿಕೆಯನ್ನ ಹೊರತು ಪಡಿಸಿ, 30 ಕೋಟಿಗೂ ಹೆಚ್ಚು ವ್ಯವಹಾರ ಮಾಡಿದೆ. ಚಿತ್ರತಂಡವೇ ಹೇಳಿಕೊಂಡಿರೋ ಪ್ರಕಾರ, ಹಿಂದಿ ಡಬ್ಬಿಂಗ್ 9.5 ಕೋಟಿಗೆ, ಕನ್ನಡ ಸ್ಯಾಟ್‍ಲೈಟ್ ಸಹ 9 ಕೋಟಿಗೆ, ಆಡಿಯೋ ಹಕ್ಕು 2 ಕೋಟಿಗೆ ಮಾರಾಟವಾಗಿದೆ. ಇನ್ನು ಡಿಜಿಟಲ್ ರೈಟ್ಸ್ ಹಾಗೆಯೇ ಉಳಿದಿದ್ದು, 20 ಕೋಟಿಗೂ ಹೆಚ್ಚು ಮೊತ್ತಕ್ಕೆ ಬೇಡಿಕೆ ಬಂದಿದೆಯಂತೆ.

ಇದನ್ನೂ ಓದಿ: ಸುದೀಪ್​ ಖಾರವಾಗಿ ಬರೆದ ಟ್ವೀಟ್​ ಯಾವ ಸ್ಟಾರ್​ ನಟನಿಗೆ ಗೊತ್ತಾ..?

ಇವೆಲ್ಲ ಲೆಕ್ಕಚಾರಗಳ ಪ್ರಕಾರ 'ಕುರುಕ್ಷೇತ್ರ' ಸಿನಿಮಾ, ಕೇವಲ ಆಡಿಯೋ, ವಿಡಿಯೋ ಡಬ್ಬಿಂಗ್ ರೈಟ್ಸ್‍ಗಳಿಂದಲೇ 40 ಕೋಟಿ ತನಕ ವ್ಯವಹಾರ ಮಾಡಿದೆ. ಚಿತ್ರಮಂದಿರಗಳಲ್ಲಿ ಎಲ್ಲ ಭಾಷೆಗಳೂ ಸೇರಿ ಕಡಿಮೆ ಅಂದರೂ 50 ಕೋಟಿಗಳಿಸುವುದರಲ್ಲಿ ಅನುಮಾನವೇ ಇಲ್ಲ. ಅಲ್ಲಿಗೆ 'ಕುರುಕ್ಷೇತ್ರ' ಒಟ್ಟಾರೆ ಬ್ಯುಸಿನೆಸ್ 90 ಕೋಟಿ ಆಗುತ್ತೆ ಅನ್ನೋದು ಗಾಂಧಿನಗರದ ಪರಿಣಿತರ ಲೆಕ್ಕಚಾರ.

Audions are enjoying Kurukshetra movie in Andra, Telangana, Canada and Australia
ಕೆನಡಾದಲ್ಲಿ 'ಕುರುಕ್ಷೇತ್ರ' ವೀಕ್ಷಿಸಿದ ಪ್ರೇಕ್ಷಕರು


ಕಳೆದ ವರ್ಷ ಪ್ರಶಾಂತ್ ನೀಲ್ ನಿರ್ದೇಶನದ 'ಕೆ.ಜಿ.ಎಫ್' ಸಿನಿಮಾ 300 ಕೋಟಿಗೂ ಅಧಿಕ ಹಣ ಮಾಡಿದ್ದು ಎಲ್ಲರಿಗೂ ಗೊತ್ತಿರೋ ವಿಚಾರ. ಈಗ ಅದರ ಮುಂದುವರೆದ ಭಾಗವಾಗಿ 'ಕುರುಕ್ಷೇತ್ರ' ಸಹ ದೊಡ್ಡ ಮಟ್ಟದ ವ್ಯವಹಾರ ಮಾಡ್ತಿರೋದು ಕನ್ನಡ ಚಿತ್ರರಂಗಕ್ಕೆ ಆಶಾದಾಯಕ ಬೆಳವಣಿಗೆ.

Kim Kardashian: ಪಡ್ಡೆಗಳ ನಿದ್ದೆಗೆಡಿಸಿದೆ ಅಮೆರಿಕದ ಟಾಪ್​ ರಿಯಾಲಿಟಿ ಸ್ಟಾರ್​ ಕಿಮ್​ ಕರ್ದಾಷಿಯನ್​ರ ಹಾಟ್​ ಚಿತ್ರಗಳು..!


 
First published:August 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...