ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಗಂಡುಗಲಿ ಮದಕರಿ ನಾಯಕ' ಸಿನಿಮಾದ ಮುಹೂರ್ತಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ. ಈ ಹಿಂದೆ ಸಾಕಷ್ಟು ವಿವಾದಗಳಿಂದಾಗಿ ಸದ್ದು ಮಾಡಿದ್ದ ಈ ಸಿನಿಮಾದ ಚಿತ್ರೀಕರಣಕ್ಕೆ ಕಾಲ ಸನ್ನಿಹಿತವಾಗಿದೆ.
ಚಿತ್ರತಂಡ ಇಂದು ಚಿತ್ರದುರ್ಗಕ್ಕೆ ಬಂದಿದ್ದು, ಚಿತ್ರತಂಡ ನೀಲಕಂಠೇಶ್ವರ ದೇವಸ್ಥಾನ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಿತ್ತು. ಸಿನಿಮಾ ಚಿತ್ರೀಕರಣ ಆರಂಭಕ್ಕೆ ಆಶೀರ್ವಾದ ಪಡೆದಿದೆ.
![Gandugali Madakri Nayaka Movie Taeam at Chitradurga]()
ಚಿತ್ರದುರ್ಗದ ನೀಲಕಂಠೇಶ್ವರ ದೇವಾಲಯದಲ್ಲಿ ದರ್ಶನ್
ಈ ವೇಳೆ ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದಿದ್ದು, ಡಿಬಾಸ್ಗೆ ಜೈ ಎನ್ನುತ್ತಾ ಅಭಿಮಾನಿಗಳು ಸ್ವಾಗತ ಕೋರಿದ್ದಾರೆ. ಈ ವೇಳೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ ದೇವಾಲಯದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಲಾಗಿತ್ತು. ದರ್ಶನ್ ಅವರನ್ನು ನೋಡಲು ಬಂದಿದ್ದ ಅಭಿಮಾನಿಗಳನ್ನು ತೆಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಇದನ್ನೂ ಓದಿ: Sarileru Neekevvaru: ಪ್ರತಿ ಸೋಮವಾರ ಮಹೇಶ್ ಬಾಬು ಅಭಿಮಾನಿಗಳಿಗೆ ಹಬ್ಬ: ಬಿಡುಗಡೆಯಾಗಲಿದೆ ವಾರಕ್ಕೊಂದು ಹಾಡು..!
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಪೋಷಕ ನಟರಾದ ದೊಡ್ಡಣ್ಣ, ಶ್ರೀನಿವಾಸ್ ಮೂರ್ತಿ ಅವರೊಂದಿಗೆ ಚಿತ್ರತಂಡವೇ ಈ ಪೂಜೆಯಲ್ಲಿ ಭಾಗವಹಿಸಿತ್ತು.
ಬೆಂಗಳೂರಿನಲ್ಲಿ ಸಿನಿಮಾದ ಅಧಿಕೃತ ಲಾಂಚ್ ಕಾರ್ಯಕ್ರಮ
ಚಿತ್ರದುರ್ಗದಲ್ಲಿ ಈ ಚಿತ್ರದ ಮುಹೂರ್ತ ನೆರವೇರಿದ್ದರೂ, ಬೆಂಗಳೂರಿನಲ್ಲಿ ಅಧಿಕೃತವಾಗಿ ಲಾಂಚ್ ಮಾಡಲು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿಕೊಂಡಿದೆಯಂತೆ ಚಿತ್ರತಂಡ.
ಡಿ.6ಕ್ಕೆ ಈ ಸಿನಿಮಾದ ಅಧಿಕೃತ ಲಾಂಚ್ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸುವ ತಯಾರಿಯಲ್ಲಿದೆಯಂತೆ ಚಿತ್ರತಂಡ. ಬರಹಗಾರ ಬಿ.ಎಲ್ ವೇಣು ಅವರ ಕೃತಿ ಆಧಾರಿತ 'ಗಂಡುಗಲಿ ಮದಕರಿ ನಾಯಕ' ಸಿನಿಮಾಗೆ ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಇದನ್ನೂ ಓದಿ: ನಟಿ ಕಂಗನಾ ಬಳಸುವ ಒಂದು ಹ್ಯಾಂಡ್ ಬ್ಯಾಗ್ ಬೆಲೆ ಸಾಮಾನ್ಯನ ವಾರ್ಷಿಕ ಆದಾಯಕ್ಕಿಂತ ಹೆಚ್ಚು..!
ಈ ಹಿಂದೆ ಮದಕರಿ ನಾಯಕ ಸಿನಿಮಾವನ್ನು ಮಾಡುವುದಾಗಿ ದರ್ಶನ್ ಅವರು ಪ್ರಕಟಿಸಿದ ನಂತರ, ಸುದೀಪ್ ಅವರೂ ಇದೇ ಚಿತ್ರವನ್ನು ಮಾಡುವುದಾಗಿ ಪ್ರಕಟಿಸಿದ್ದರು. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿ ವಿವಾದಕ್ಕೆ ಕಾರಣವಾಗಿತ್ತು. ನಂತರದಲ್ಲಿ ಸುದೀಪ್ ತಾವು ಈ ಸಿನಿಮಾ ಮಾಡುವುದಿಲ್ಲ ಎಂದು ಈ ವಿವಾದಕ್ಕೆ ತೆರೆ ಎಳೆದರು.
Lakshmi Rai: ಬಿಕಿನಿ ತೊಟ್ಟು ಬೀಚ್ನಲ್ಲಿ ಸ್ನೇಹಿತೆಯರ ಜತೆ ಎಂಜಾಯ್ ಮಾಡುತ್ತಿರುವ ಕನ್ನಡದ ನಟಿ..!