ಪಾಕಿಸ್ತಾನದಲ್ಲಿ ಹಿಂದಿ ಸಿನಿಮಾಗಳು ತೆರೆ ಕಾಣುವುದು ಸಾಮಾನ್ಯ. ನಮ್ಮ ಬಾಲಿವುಡ್ ಸಿನಿಮಾಗಳಿಗೆ ಪಾಕಿಸ್ತಾನದಲ್ಲಿ ಬೇಡಿಕೆ ಇದೆ. ಅಲ್ಲದೆ ಬಾಲಿವುಡ್ ಸಿನಿಮಾಗಳು ಅಲ್ಲಿ ಕೋಟಿಗಟ್ಟಲೆ ಕಲೆಕ್ಷನ್ ಮಾಡುತ್ತವೆ. ಆದರೆ ಕನ್ನಡದ ಸಿನಿಮಾಗಳು ಅಲ್ಲಿ ತೆರೆ ಕಾಣುವುದು ಎಂದರೆ ನಿಜಕ್ಕೂ ಆಶ್ಚರ್ಯ. ಈ ಹಿಂದೆ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ ಒಂದು ತೆರೆ ಕಂಡಾಗ ಅದರ ಹಿಂದಿ ವರ್ಷನ್ ಪಾಕಿಸ್ತಾನದಲ್ಲಿ ರಿಲೀಸ್ ಆಗಿತ್ತು. ಇದರ ಜೊತೆಗೆ ಪಾಕಿಸ್ತಾನದಲ್ಲಿ ರಿಲೀಸ್ ಆದ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೂ ಪಾಕಿಸ್ತಾನದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಕನ್ನಡದ ಮತ್ತೊಂದು ಸಿನಿಮಾ ಪಾಕಿಸ್ತಾನದಲ್ಲಿ ಕಾರುಬಾರು ಆರಂಭಿಸಿದೆ. ಕನ್ನಡದ ಸಿನಿಮಾ ಊರ್ದುಗೆ ಡಬ್ ಆಗಿ ರಿಲೀಸ್ ಆಗಿದೆ. ಹೌದು, ಸ್ಯಾಂಡಲ್ವುಡ್ ಡಿಬಾಸ್ ದರ್ಶನ್ ಅಭಿನಯದ ಹಿಟ್ ಸಿನಿಮಾ ಐರಾವತ ಈಗ ಪಾಕಿಸ್ತಾನದಲ್ಲಿ ತೆರೆಕಂಡಿದೆಯಂತೆ.
ಪಾಕಿಸ್ತಾನದಲ್ಲೂ ಡಿಬಾಸ್ ದರ್ಶನ್ ಕಾರುಬಾರು ಆರಂಭವಾಗಿದೆ. 2015ರಲ್ಲಿ ರಿಲೀಸ್ ಆಗಿದ್ದ ಐರಾವತ ಸಿನಿಮಾ ಈಗ ಪಾಕಿಸ್ತಾನದಲ್ಲಿ ರಿಲೀಸ್ ಆಗಿದೆ. ಗ್ಯಾಂಗ್ಸ್ಟರ್ ಟೈಟಲ್ನಲ್ಲಿ ಉರ್ದುಗೆ ಡಬ್ ಆಗಿ ತೆರೆಕಂಡಿದೆ ಐರಾವತ ಚಿತ್ರ. ಈ ಸಿನಿಮಾ ರಿಲೀಸ್ ಬಗ್ಗೆ ನಿರ್ದೇಶಕ ಎಪಿ ಅರ್ಜುನ್ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನೋಡಿದ ಮೇಲೆಯೇ ನನಗೂ ಈ ವಿಷಯ ತಿಳಿದಿದ್ದು ಎನ್ನುತ್ತಾರೆ ಅರ್ಜುನ್.
Really 😍 , What A Craze To This Man Guys 👏👏👏🙌🙌🙌 #DBoss @DTEAM7999 @DBossFc171 @DBossFansGubbi pic.twitter.com/1mxukJ5tLp
ಐರಾವತ ಸಿನಿಮಾದಲ್ಲಿ ದರ್ಶನ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಡಿಬಾಸ್ಗೆ ನಾಯಕಿಯಾಗಿ ಬಾಲಿವುಡ್ ನಟಿ ಊರ್ವಶಿ ರೌಟೆಲ್ಲ ನಟಿಸಿದ್ದಾರೆ.
ಐರಾವತ ಸಿನಿಮಾ ಪಾಕಿಸ್ತಾನದಲ್ಲಿ ಯಾವಾಗ ರಿಲೀಸ್ ಆಗಿದೆ ಎಂಬುದರ ಕುರಿತಾಗಿ ನಿಖರ ಮಾಹಿತಿ ಇಲ್ಲ. ಆದರೆ ಥಿಯೇಟರ್ನಲ್ಲಿ ಇಟ್ಟಿರುವ ಕಟೌಟನ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ದರ್ಶನ್ ಸದ್ಯ ರಾಜವೀರ ಮದಕರಿ ನಾಯಕ ಸಿನಿಮಾದ ಚಿತ್ರೀಕರಣದಿಂದ ಬ್ರೇಕ್ ಪಡೆದು ಬೈಕ್ ಟ್ರಿಪ್ನಲ್ಲಿದ್ದಾರೆ. ಸ್ನೇಹಿತರಾದ ಪ್ರಜ್ವಲ್, ಪ್ರಣಬ್, ಪ್ರದೇಶ್, ಉಮಾಪತಿ ಸೇರಿದಂತೆ ಇತರರೊಂದಿಗೆ ಜಾಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ