Kurukshetra: ತಮಿಳಿನಲ್ಲೇ ತಮ್ಮ ಪರಿಚಯ ಮಾಡಿಕೊಂಡ ದರ್ಶನ್​ : ಕಾಲಿವುಡ್‍ನಲ್ಲೂ ಕೌರವೇಶ್ವರನ ಆರ್ಭಟ

Kurukshetra: ದರ್ಶನ್ ಅಂದರೆ ಗುಡ್ ಬ್ಯಾಡ್ ಎಲ್ಲ ಇದೆ. ನನ್ನ ಇತಿಹಾಸ ಕೂಡ ನಿಮಗೇ ತಿಳಿಯದೇ ಏನಿಲ್ಲ. ಎಂದು ಹೇಳುವ ಮೂಲಕ ತಮಿಳರ ಮುಂದೆ ತಮ್ಮ ಇತಿಹಾಸ ಬಿಚ್ಚಿಟ್ಟಿದ್ದಾರೆ ದಾಸ ದರ್ಶನ್.

Anitha E | news18
Updated:August 14, 2019, 10:38 PM IST
Kurukshetra: ತಮಿಳಿನಲ್ಲೇ ತಮ್ಮ ಪರಿಚಯ ಮಾಡಿಕೊಂಡ ದರ್ಶನ್​ : ಕಾಲಿವುಡ್‍ನಲ್ಲೂ ಕೌರವೇಶ್ವರನ ಆರ್ಭಟ
ದರ್ಶನ್​ ಹಾಗೂ ಶ್ರೀನಿವಾಸ್​ (ಸಾಂದರ್ಭಿಕ ಚಿತ್ರ)
  • News18
  • Last Updated: August 14, 2019, 10:38 PM IST
  • Share this:
ತೂಗುದೀಪ ಪುತ್ರನ ಘರ್ಜನೆ ಇನ್ನು ಮುಂದೆ ಕಾಲಿವುಡ್-ಟಾಲಿವುಡ್‍ನಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ. ಅದಕ್ಕೆ ಉದಾಹರಣೆ ಎಂಬಂತೆ ತೆಲುಗರ ನಾಡಲ್ಲಿ ದುರ್ಯೋಧನನ ಹವಾ ಜೋರಾಗಿದೆ. ಆಂಧ್ರ-ತೆಲಂಗಾಣದಲ್ಲಿ ಕೌರವೇಶ್ವರ ಸಖತ್ತಾಗಿಯೇ ಆರ್ಭಟಿಸುತ್ತಿದ್ದಾನೆ.

'ಕುರುಕ್ಷೇತ್ರ' ಕನ್ನಡದ ಜೊತೆ ತೆಲುಗಲ್ಲೂ ರಿಲೀಸಾಗಿದ್ದು, ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ತಮಿಳು ಮಲಯಾಳಂನಲ್ಲೂ 'ಕುರುಕ್ಷೇತ್ರ' ಸಿನಿಮಾ ರಿಲೀಸ್ ಮಾಡೋಕೆ ಚಿತ್ರತಂಡ ರೆಡಿಯಾಗಿದೆ. ಸದ್ಯ ಪ್ರಚಾರದ ಕೆಲಸ ಜೋರಾಗಿ ನಡೆಯುತ್ತಿದ್ದು, ಚೆನೈನಲ್ಲಿ ಚಿತ್ರತಂಡ ಸುದ್ದಿಗೋಷ್ಠಿ ಕೂಡ ಮಾಡಿದೆ. ಇದರಲ್ಲಿ ಚಿತ್ರದ ನಾಯಕ ದರ್ಶನ್ ಅವರೇ ಪ್ರಮುಖ ಆಕರ್ಷಣೆ.

kurukshetra
'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನನಾಗಿ ದರ್ಶನ್​


ಇನ್ನು ಆಗಲೇ ಹೇಳಿದಂತೆ, ಕನ್ನಡಿಗರು ದರ್ಶನ್ ಅನ್ನೋ ಹೆಸರಿಗೆ ದೊಡ್ಡ ಸ್ಥಾನಮಾನವನ್ನೇ ಕೊಟ್ಟಿದ್ದಾರೆ. ಆದರೆ ತಮಿಳು ಪ್ರೇಕ್ಷಕರಿಗೆ ದರ್ಶನ್ ಅನ್ನೋ ಕನ್ನಡದ ಸೂಪರ್​ಸ್ಟಾರ್​ ಬಗ್ಗೆ ಅಷ್ಟಾಗಿ ಗೊತ್ತಿರಲಿಕ್ಕಿಲ್ಲ. ಹೀಗಾಗಿ ದರ್ಶನ್ ಅವರು ತಮ್ಮನ್ನ ತಾವು ತಮಿಳರ ಮುಂದೆ ಪರಿಚಯ ಮಾಡಿಕೊಂಡರು. ನಾನು ಇಲ್ಲೇ ಅಭಿನಯ ಕಲಿತಿದ್ದು, ಇಲ್ಲಿಂದಲೇ ನನ್ನ ಸಿನಿ ಜೀವನ ಶುರುವಾಗಿದ್ದು ಅಂತ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Sudeep: ಕಿಚ್ಚ ಸುದೀಪ್​ ಖಾರವಾಗಿ ಬರೆದ ಟ್ವೀಟ್​ ಯಾವ ಸ್ಟಾರ್​ ನಟನಿಗೆ ಗೊತ್ತಾ..?

ಲೈಟ್‍ಬಾಯ್ ಆಗಿ ವೃತ್ತಿ ಜೀವನ ಶುರು ಮಾಡಿ, ಇದುವರೆಗೂ ನಾನು 50 ಸಿನಿಮಾಗಳಲ್ಲಿ ನಟಿಸಿದ್ದೇನೆ ಅಂತೇಳಿರೋ ದರ್ಶನ್, ಜೊತೆಗೆ ನನ್ನ ವೃತ್ತಿ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ದರ್ಶನ್ ಅಂದರೆ ಗುಡ್ ಬ್ಯಾಡ್ ಎಲ್ಲ ಇದೆ. ನನ್ನ ಇತಿಹಾಸ ಕೂಡ ನಿಮಗೇ ತಿಳಿಯದೇ ಏನಿಲ್ಲ. ಎಂದು ಹೇಳುವ ಮೂಲಕ ತಮಿಳರ ಮುಂದೆ ತಮ್ಮ ಇತಿಹಾಸ ಬಿಚ್ಚಿಟ್ಟಿದ್ದಾರೆ ದಾಸ ದರ್ಶನ್.


Loading...

ತಮಿಳು-ಮಲಯಾಳಂ ಟ್ರೈಲರ್​ಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ.  24 ಗಂಟೆಯಲ್ಲೇ ಸಿಕ್ತು 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ !

ಇನ್ನು ತಮಿಳು ಹಾಗೂ ಮಲಯಾಳಂನಲ್ಲಿ 'ಕುರುಕ್ಷೇತ್ರ' ಟ್ರೈಲರ್ ಬಿಡುಗಡೆಯಾಗಿದೆ. ತಮಿಳಿನಲ್ಲಿ ಕುರುಕ್ಷೇತ್ರ ಟ್ರೈಲರ್​ಗೆ ಸಿಕ್ಕಾಪಟ್ಟೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, 24 ಗಂಟೆಯೊಳಗೆ ನಾಲ್ಕು ಲಕ್ಷ ವೀಕ್ಷಣೆ ಸಿಕ್ಕಿರೋದು ನಿಜಕ್ಕೂ ಸಂತಸದ ವಿಷಯವೇ ಸರಿ.

ಹಾಗೆ ಮಲಯಾಳಂನಲ್ಲೂ ಕನ್ನಡದ ದುರ್ಯೋಧನನಿಗೆ ಅದ್ಧೂರಿಯ ಸ್ವಾಗತ ಸಿಗುವ ಸೂಚನೆ ಸಿಕ್ಕಿದೆ. ಅದಕ್ಕೆ ತಕ್ಕಂತೆ ಟ್ರೈಲರ್​ನ ವೀಕ್ಷಣೆ 2 ಲಕ್ಷ ದಾಟಿದೆ. ಅಂದಹಾಗೆ ತಮಿಳು ಹಾಗೂ ಮಲಯಾಳಂ ವರ್ಷನ್‍ನ ಸಿನಿಮಾಗಳು ಆಗಸ್ಟ್ 15ರಂದು ಬಿಡುಗಡೆಯಾಗಲಿವೆ.

ಇದನ್ನೂ ಓದಿ: ಕೋಟಿ ಕೋಟಿ ಬಾಚಿಕೊಂಡ 'ಕುರುಕ್ಷೇತ್ರ': ಒಟ್ಟಾರೆ ದುರ್ಯೋಧನ ಗಳಿಸಿದೆಷ್ಟು ಗೊತ್ತಾ..!

ಈಗಾಗಲೇ ಕನ್ನಡ - ತೆಲುಗು ಭಾಷೆಗಳಲ್ಲಿ 'ಕುರುಕ್ಷೇತ್ರ' ಯಶಸ್ವಿಯಾಗಿದೆ. ಮೊದಲ 5 ದಿನಗಳಲ್ಲಿ 'ಕುರುಕ್ಷೇತ್ರ' ಗಳಿಕೆ 40 ಕೋಟಿ ಮುಟ್ಟಿದೆ. ಈಗ ತಮಿಳು ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿರವುದರಿಂದ, ಇದು 2ನೇ ವಾರದ ಹೊತ್ತಿಗೆ 50 ಕೋಟಿ ದಾಟುವುದರಲ್ಲಿ ಅನುಮಾನವೇ ಇಲ್ಲ ಅಂತ ಹೇಳಲಾಗುತ್ತಿದೆ.

(ಆನಂದ್​ ಸಾಲುಂಡಿ)

 

Ileana Dcruz: ಸೂರ್ಯನ ಕಣ್ಣನ್ನೇ ಕುಕ್ಕಿದ ಬಳುಕುವ ಬಳ್ಳಿ ಇಲಿಯಾನಾರ ಬಿಕಿನಿ ಪೋಸ್​

First published:August 14, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...