HOME » NEWS » Entertainment » DARSHAN SHARED SELFIE TAKEN WITH FANS IN HUBBALLI AND BABY DANCE FLOOR READY SONG IS GETTING GOOD RESPONSE AE

Darshan: ಅಭಿಮಾನಿಗಳ ಜೊತೆಗಿನ ಸೆಲ್ಫಿ ಹಂಚಿಕೊಂಡ ದರ್ಶನ್​: ಧೂಳೆಬ್ಬಿಸುತ್ತಿದೆ ಬೇಬಿ ಡ್ಯಾನ್ಸ್​ ಫ್ಲೋರ್​ ರೆಡಿ ಹಾಡು..!

Roberrt: ಈ ಕಾರ್ಯಕ್ರಮದಲ್ಲಿ ರಾಬರ್ಟ್​ ಚಿತ್ರತಂಡದೊಂದಿಗೆ ಸಚಿವ ಬಿ.ಸಿ. ಪಾಟೀಲ್​ ಸಹ ಭಾಗವಹಿಸಿದ್ದರು. ವೇದಿಕೆ ಬಂದ ಡಿಬಾಸ್​ ದರ್ಶನ್ ಚಪ್ಪಲಿ ಕಳಚಿ ಬರಿಗಾಲಿನಲ್ಲಿ ಹುಬ್ಬಳ್ಳಿಯ ಜನರಿಗೆ ನಮಸ್ಕಾರ ಮಾಡುವ ಮೂಲಕ ಗಮನಸೆಳೆದರು. ಇನ್ನು ಇಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ ಅಭಿಮಾನಿಗಳಿಗೆ ವಿಶೇಷವಾದ ಸೆಲ್ಫಿ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

Anitha E | news18-kannada
Updated:March 1, 2021, 4:31 PM IST
Darshan: ಅಭಿಮಾನಿಗಳ ಜೊತೆಗಿನ ಸೆಲ್ಫಿ ಹಂಚಿಕೊಂಡ ದರ್ಶನ್​: ಧೂಳೆಬ್ಬಿಸುತ್ತಿದೆ ಬೇಬಿ ಡ್ಯಾನ್ಸ್​ ಫ್ಲೋರ್​ ರೆಡಿ ಹಾಡು..!
ನಟ ದರ್ಶನ್​
  • Share this:
ರಾಬರ್ಟ್​ ಸಿನಿಮಾ ಇದೇ ತಿಂಗಳು  ಅಂದರೆ ಮಾ.11ರಂದು ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗಲಿದೆ. ತರುಣ್​ ಸುಧೀರ್​ ನಿರ್ದೇಶನದ ಈ ಸಿನಿಮಾಗಾಗಿ ಡಿಬಾಸ್​ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಯಜಮಾನ ಹಾಗೂ ಕುರುಕ್ಷೇತ್ರ ಸಿನಿಮಾಗಳ ನಂತರ ಡಿಬಾಸ್​ ಅಭಿಮಾನಿಗಳು ರಾಬರ್ಟ್​ ಅನ್ನು ಕಣ್ತುಂಬಿಕೊಳ್ಳಲು ಎದುರು ನೋಡುತ್ತಿದ್ದಾರೆ. ಈ ಹಿಂದೆಯೇ ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಿದಾಗ ದರ್ಶನ್​ ಸಿನಿಮಾ ಮಂದಿರಗಳಲ್ಲಿ ಶೇ 50ರಷ್ಟು ಅಲ್ಲ ಶೇ 25ರಷ್ಟು ಪ್ರೇಕ್ಷಕರ ವೀಕ್ಷಣೆಗೆ ಅವಕಾಶ ಇದ್ದರೂ ಸಿನಿಮಾ ಹೇಳಿದ ದಿನಾಂಕದಂದೇ ರಿಲೀಸ್ ಮಾಡುತ್ತೇವೆ ಎಂದಿದ್ದರು. ಈಗ ಈ ಸಿನಿಮಾದ ರಿಲೀಸ್​ ದಿನಾಂಕ ಹತ್ತಿರ ಬರುತ್ತಿದೆ. ಜೊತೆಗೆ ರಾಬರ್ಟ್​ ಸಿನಿಮಾದ ಪ್ರಚಾರ ಕಾರ್ಯ ಸಹ ಆರಂಭವಾಗಿದೆ. ಮೊದಲು ಹೈದರಾಬಾದಿನಲ್ಲಿ ಪ್ರಿ-ರಿಲೀಸ್​ ಇವೆಂಟ್​ ಮಾಡಿದ್ದ ರಾಬರ್ಟ್​ ಚಿತ್ರತಂಡ ನಿನ್ನೆ ಅಂದರೆ ಫೆ. 28ರಂದು ಗಂಡು ಮೆಟ್ಟಿನ ನಾಡು ಹುಬ್ಬಳ್ಳಿಯಲ್ಲಿ ಪ್ರಿ-ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ರಾಬರ್ಟ್​ ಚಿತ್ರತಂಡದೊಂದಿಗೆ ಸಚಿವ ಬಿ.ಸಿ. ಪಾಟೀಲ್​ ಸಹ ಭಾಗವಹಿಸಿದ್ದರು. ವೇದಿಕೆ ಬಂದ ಡಿಬಾಸ್​ ದರ್ಶನ್ ಚಪ್ಪಲಿ ಕಳಚಿ ಬರಿಗಾಲಿನಲ್ಲಿ ಹುಬ್ಬಳ್ಳಿಯ ಜನರಿಗೆ ನಮಸ್ಕಾರ ಮಾಡುವ ಮೂಲಕ ಗಮನಸೆಳೆದರು. ಇನ್ನು ಇಂದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ ಅಭಿಮಾನಿಗಳಿಗೆ ವಿಶೇಷವಾದ ಸೆಲ್ಫಿ ಹಂಚಿಕೊಳ್ಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಅಭಿಮಾನಿಗಳೇ ತನ್ನ ಸೆಲೆಬ್ರಿಟಿಗಳು ಎನ್ನುವ ದರ್ಶನ್​ ತಾವು ಹೇಳುವ ಮಾತು ನಿಜ ಎಂದು ಆಗಾಗ ಸಾಬೀತು ಮಾಡುತ್ತಲೇ ಇರುತ್ತಾರೆ. ನಿನ್ನೆ ಸಹ ತಮ್ಮ ಸೆಲೆಬ್ರಿಟಿಗಳೊಂದಿಗೆ ದರ್ಶನ್ ಇಷ್ಟಪಟ್ಟು ತೆಗೆದುಕೊಂಡ ಸೆಲ್ಫಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಮಕ್ಕಳ ಜೊತೆ ಮಗುವಾದ ನಟಿ ಸಮೀರಾ ರೆಡ್ಡಿ: ಇಲ್ಲಿವೆ ಕ್ಯೂಟ್​ ಫೋಟೋಗಳು

ಇನ್ನು ಈ ಸಿನಿಮಾ ಒಂದೊಂದೇ ಹಾಡುಗಳು ರಿಲೀಸ್ ಆಗುತ್ತಿದ್ದು, ಎಲ್ಲ ಹಾಡುಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಕಣ್ಣು ಹೊಡಿಯಾಕಾ ಹಾಡು ರಿಲೀಸ್ ಆಗಿತ್ತು. ನಿನ್ನೆ ಸಂಜೆ ಬೇಬಿ ಡ್ಯಾನ್ಸ್​ ಫ್ಲೋರ್​ ರೆಡಿ ಅನ್ನೋ ವಿಡಿಯೋ ಹಾಡು ಬಿಡುಗಡೆಯಾಗಿದೆ.ಬೇಬಿ ಡ್ಯಾನ್ಸ್ ಫ್ಲೋರ್​ ರೆಡಿ ಹಾಡಿಗೆ ಸಖತ್​ ರೆಸ್ಪಾನ್ಸ್​ ಸಿಗುತ್ತಿದ್ದು, ಇದು ರಿಲೀಸ್​ ಆದ ಐದು ಗಂಟೆಗಳಲ್ಲೇ 10 ಲಕ್ಷ ವೀಕ್ಷಣೆ ಕಂಡಿದೆ. 20 ಗಂಟೆಯೊಳಗೆ 40 ಲಕ್ಷ ವೀಕ್ಷಣೆ ಸಿಕ್ಕಿದೆ. ಇನ್ನು ಭದ್ರಾವತಿ ಹುಡುಗಿ ಆಶಾ ಭಟ್​ ಜತೆ ದರ್ಶನ್​ ಸಖತ್​ ಸ್ಟೆಪ್​ ಹಾಕಿದ್ದಾರೆ. ದರ್ಶನ್​ ಅವರ ಡ್ಯಾನ್ಸ್​ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ.


View this post on Instagram


A post shared by Anand Audio (@aanandaaudio)View this post on Instagram


A post shared by Anand Audio (@aanandaaudio)


ಬೇಬಿ ಡ್ಯಾನ್ಸ್​ ಫ್ಲೋರ್​ ರೆಡಿ ಹಾಡಿಗೆ ಅರ್ಜುನ್​ ಜನ್ಯ ಸಂಗೀತ ನೀಡಿದರೆ, ಭರ್ಜರಿ ಚೇತನ್​ ಕುಮಾರ್​ ಸಾಹಿತ್ಯ ನೀಡಿರುವ ಈ ಹಾಡಿದೆ ನಕಾಶ್​ ಅಜೀಜ್​ ಹಾಗೂ ಐಶ್ವರ್ಯಾ ರಂಗರಾಜನ್​ ದನಿಯಾಗಿದ್ದಾರೆ.  ಇನ್ನು ಉಮಾಪತಿ ಹಣ ಹೂಡಿರುವ ಈ ಸಿನಿಮಾದಲ್ಲಿ ಜಗಪತಿ ಬಾಬು, ಭೋಜ್​ಪುರಿ ನಟ ರವಿ ಕಿಶನ್​, ರವಿಶಂಕರ್​ ಹಾಗೂ ಇತರರು ನಟಿಸಿದ್ದಾರೆ.
Published by: Anitha E
First published: March 1, 2021, 4:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories