ನಿಜ ಜೀವನದಲ್ಲಿ ಕರ್ಣನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್​ !

ತೆರೆ ಮೇಲೆ ದರ್ಶನ್​ ಅವರನ್ನು ದುರ್ಯೋಧನನಾಗಿ ನೋಡಿದವರು ನಿಜ ಜೀವನದಲ್ಲಿ ಕರ್ಣನ ಅವತಾರದಲ್ಲಿ ಕಾಣುತ್ತಿದ್ದಾರೆ. ಅಂದು ಅಂಬಿಯನ್ನ ಕರ್ಣನಾಗಿ ಕಂಡವರೇ, ಇಂದು ಅವರ ದೊಡ್ಡ ಮಗ ಎಂದೇ ಕರೆಸಿಕೊಳ್ಳುವ ದರ್ಶನ್‍ರಲ್ಲಿ ಕರ್ಣನ ಗುಣ ಇದೆ ಎಂದು ಹಾಡಿ ಹೊಗಳುತ್ತಿದ್ದಾರೆ. 

Anitha E | news18-kannada
Updated:September 9, 2019, 11:00 AM IST
ನಿಜ ಜೀವನದಲ್ಲಿ ಕರ್ಣನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್​ !
ತೆರೆ ಮೇಲೆ ದರ್ಶನ್​ ಅವರನ್ನು ದುರ್ಯೋಧನನಾಗಿ ನೋಡಿದವರು ನಿಜ ಜೀವನದಲ್ಲಿ ಕರ್ಣನ ಅವತಾರದಲ್ಲಿ ಕಾಣುತ್ತಿದ್ದಾರೆ. ಅಂದು ಅಂಬಿಯನ್ನ ಕರ್ಣನಾಗಿ ಕಂಡವರೇ, ಇಂದು ಅವರ ದೊಡ್ಡ ಮಗ ಎಂದೇ ಕರೆಸಿಕೊಳ್ಳುವ ದರ್ಶನ್‍ರಲ್ಲಿ ಕರ್ಣನ ಗುಣ ಇದೆ ಎಂದು ಹಾಡಿ ಹೊಗಳುತ್ತಿದ್ದಾರೆ. 
  • Share this:
ಮಂಡ್ಯದ ಗಂಡು, ರೆಬೆಲ್ ಅಂಬರೀಷ್ ಕನ್ನಡ ಚಿತ್ರರಂಗದ ಕರ್ಣನಂತಿದ್ದರು. ಚಿತ್ರರಂಗದ ಹಿರಿಯಣ್ಣನಾಗಿ ಎಲ್ಲರಿಗೂ ಬೆಂಬಲವಾಗಿ ನಿಲ್ಲುತ್ತಿದ್ದರು. ಆದರೆ ಅವರು ದೂರಾದ ನಂತರ, ಆ ಸ್ಥಾನ ತುಂಬೋದು ಯಾರು ಅನ್ನೋ ಪ್ರಶ್ನೆ ಕನ್ನಡ ಚಿತ್ರರಂಗದಲ್ಲಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಅಂಬಿ ಹಾದಿಯಲ್ಲಿಯೇ ಅಭಿಮಾನಿಗಳ ಪ್ರೀತಿಯ ದಾಸ ಸಾಗುತ್ತಿದ್ದಾರೆ. ಸ್ಯಾಂಡಲ್‍ವುಡ್‍ನ ನಯಾ ಕರ್ಣ ಎನಿಸಿಕೊಳ್ಳುತ್ತಿದ್ದಾರೆ.

ಯಾರೇ ಬಂದ್ರೂ ಪ್ರೀತಿ ಹಂಚುವ 'ಯಜಮಾನ'ನಾಗಿ ದರ್ಶನ್‍ರನ್ನ ಸ್ಯಾಂಡಲ್‍ವುಡ್ ನೋಡ್ತಿದೆ. ಅದಕ್ಕೆ ಸಾಕ್ಷಿ ಅವರು ಚಿತ್ರರಂಗದಲ್ಲಿ ಸಾಕಷ್ಟು ಜನರಿಗೆ ಬೆನ್ನೆಲುಬಾಗಿ ನಿಲ್ಲುತ್ತಿರೋದು. ಹೊಸಬರು ಯಾರೇ ಬರಲಿ ಪ್ರೋತ್ಸಾಹಿಸುವುದರಲ್ಲಿ ಯಾವಾಗಲೂ ಮುಂದೆ ನಿಲ್ಲೋದು ಡಿಬಾಸ್​ ಅವರಿಗಿರುವ ದೊಡ್ಡಗುಣ.
ಸಾಕಷ್ಟು ಸಿನಿಮಾಗಳು ದರ್ಶನ್ ಅವರ ಪ್ರೋತ್ಸಾಹದ ನೆರಳಲ್ಲೇ ದೃಶ್ಯರೂಪ ಪಡೆದುಕೊಂಡಿವೆ. ತೆರೆಮೇಲೆ ಬಂದು ಗೆಲುವನ್ನ ಕಂಡಿವೆ. ಅದರ ಮುಂದುವರೆದ ಭಾಗವಾಗಿ 'ಟಕ್ಕರ್' ಎಂಬ ಸಿನಿಮಾಗೂ ಡಿಬಾಸ್ ದರ್ಶನ್ ಸಾಕಷ್ಟು ಬೆಂಬಲ ನೀಡಿದ್ದಾರೆ. ಈ ಸಿನಿಮಾ ಆರಂಭವಾದಾಗಿನಿಂದ ಇದು ತಮ್ಮದೇ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಸಹಕಾರ ಕೊಟ್ಟಿದ್ದಾರಂತೆ ದರ್ಶನ್.

ಇದನ್ನೂ ಓದಿ: Takkar: ಟಕ್ಕರ್​ ಸಿನಿಮಾದ ಆಡಿಯೋ ಲಾಂಚ್​ ಮಾಡಿದ ದರ್ಶನ್​..!

ಅಭಿಮಾನಿಗಳ ಪ್ರೀತಿಯ ಡಿಬಾಸ್‍ ಅವರದ್ದು ಕಾಮಧೇನುವಿನಂತಹ ಮನಸ್ಸು. ಯಾರು ಏನೇ ಕೇಳಿದರೂ ಇಲ್ಲ ಅನ್ನೋದೆ ಇಲ್ಲ. ಸಾಕಷ್ಟು ಬ್ಯುಸಿ ಶೆಡ್ಯೂಲ್‍ನ ನಡುವೆ ಹೊಸಬರ ಚಿತ್ರಗಳ ಆಡಿಯೋ ರಿಲೀಸ್, ಮಹೂರ್ತ, ಹೀಗೆ ಯಾವುದೇ ಕಾರ್ಯಕ್ರಮವಿರಲಿ ದರ್ಶನ್ ಹಾಜರಿರುತ್ತಾರೆ. ಒಂದಷ್ಟು ಪ್ರೋತ್ಸಾಹದ ಮಾತುಗಳ ಮೂಲಕ ಬೆನ್ನು ತಟ್ಟುತ್ತಾರೆ. ಹೀಗಾಗಿಯೇ ನಿನ್ನೆ ನಟ ಧನ್ವೀರ್​ ಅಭಿನಯದ 'ಬಂಪರ್​' ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ ದರ್ಶನ್​. 
View this post on Instagram
 

Dhanyavadhagalu yajmanre🙌🏻❤️. @darshanthoogudeepashrinivas


A post shared by Dhanveerrah (@dhanveerah) on


ಅಂದಹಾಗೆ 'ಟಕ್ಕರ್' ಸಿನಿಮಾದಲ್ಲಿ ದರ್ಶನ್ ಸೋದರ ಸಂಬಂಧಿ ಮನೋಜ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಧನ್ವೀರ್​ ಅಭಿನಯದ 'ಬಂಪರ್'​ ಸಿನಿಮಾಗೂ ಡಿಬಾಸ್​ ಬೆಂಬಲವಿದೆ. ಹೀಗಿರುವಾಗ ಈ ಸಿನಿಮಾಗಳು ಬಾಕ್ಸಾಫಿಸ್​ನಲ್ಲಿ ಸದ್ದು ಮಾಡೋದರಲ್ಲಿ ಅನುಮಾನವೇ ಇಲ್ಲ.

Sara Ali Khan: ಮೈಮಾಟದಿಂದಲೇ ಮತ್ತೇರಿಸುವ ನವಾಬನ ಮಗಳು ಸಾರಾ ಅಲಿಖಾನ್​ರ ಹಾಟ್​ ಚಿತ್ರಗಳು..!

First published: September 9, 2019, 11:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading