Darshan: ದರ್ಶನ್ ತೋಟಕ್ಕೆ ಎಂಟ್ರಿ ಕೊಟ್ಟ ದಾವಣಗೆರೆಯ ಹೊಸ ಅತಿಥಿಗಳು..!

ಮಲ್ಲಿಕಾರ್ಜುನ್​ ಅವರ ಕುದುರೆ ಲಾಯದಲ್ಲಿ ಕುದರೆ ಮರಿ ಹಾಕಿದ್ದು, ಅದನ್ನು ನೋಡಲೆಂದೇ ದರ್ಶನ್​ ಅಲ್ಲಿಗೆ ಹೋಗಿದ್ದರಂತೆ. ಅಲ್ಲಿಂದ ಬರುವಾಗ ಮಲ್ಲಿಕಾರ್ಜುನ್​ ಅವರು ದರ್ಶನ್​ ಅವರಿಗೆ ಕುದುರೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ದರ್ಶನ್​ ಹಾಗೂ ಮಲ್ಲಿಕಾರ್ಜುನ್​ ಅವರ ಭೇಟಿ ರಾಜಕೀಯವಾಗಿ ಕುತೂಹಲ ಕೆರಳಿಸಿತ್ತು.

ದರ್ಶನ್​

ದರ್ಶನ್​

  • Share this:
ಖ್ಯಾತ ನಟ ಡಿ-ಬಾಸ್‌ ದರ್ಶನ್‌ ಕೆಲವೇ ದಿನಗಳ ಹಿಂದೆಯಷ್ಟೆ ದಾವಣಗೆರೆಗೆ ದೀಢೀರ್‌ ಭೇಟಿ ನೀಡುವ ಮೂಲಕ ಸುದ್ದಿಯಾಗಿದ್ದರು. ಅಲ್ಲಿ ಮಾಜಿ ಸಚಿವ ಎಸ್‌.ಎಸ್.‌ ಮಲ್ಲಿಕಾರ್ಜುನ್‌ ಅವರ ಮನೆಗೆ ಭೇಟಿ ನೀಡಿದ್ದಾಗ, ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. 

ದಾವಣಗೆರೆಗೆ ಹೋಗಿದ್ದ ದರ್ಶನ್​, ನೇರವಾಗಿ ಶಾಮನೂರು ಗೆಸ್ಟ್‌ಹೌಸ್‌ನಲ್ಲಿ ಉಳಿದುಕೊಂಡಿದ್ದರು. ನಂತರ, ಮಾಜಿ ಸಚಿವ ಎಸ್‌.ಎಸ್.‌ ಮಲ್ಲಿಕಾರ್ಜುನ್‌ ಜತೆ, ಅವರ ಒಡೆತನದ ದುಗ್ಗಾವತ್ತಿ ಬಳಿಯ ತೋಟಕ್ಕೆ ಭೇಟಿ ನೀಡಿದ್ದರು. ಆನಂತರ, ಕಲ್ಲೇಶ್ವರ್‌ ರೈಸ್‌ ಮಿಲ್‌, ಅಲ್ಲಿಂದ ಕುದುರೆ ಲಾಯಕ್ಕೆ ಹೋಗಿ, ಅಲ್ಲಿದ್ದ ಕುದುರೆಗಳ ಜೊತೆ ಸಮಯ ಕಳೆದಿದ್ದರು.

ಮಲ್ಲಿಕಾರ್ಜುನ್​ ಅವರ ಕುದುರೆ ಲಾಯದಲ್ಲಿ ಕುದರೆ ಮರಿ ಹಾಕಿದ್ದು, ಅದನ್ನು ನೋಡಲೆಂದೇ ದರ್ಶನ್​ ಅಲ್ಲಿಗೆ ಹೋಗಿದ್ದರಂತೆ. ಅಲ್ಲಿಂದ ಬರುವಾಗ ಮಲ್ಲಿಕಾರ್ಜುನ್​ ಅವರು ದರ್ಶನ್​ ಅವರಿಗೆ ಕುದುರೆ ಉಡುಗೊರೆಯಾಗಿ ನೀಡಿದ್ದಾರೆ. 
ಮಲ್ಲಿಕಾರ್ಜುನ್ ಅವರ ಕುದುರೆ ಲಾಯದಲ್ಲಿ ದರ್ಶನ್​


ಮಲ್ಲಿಕಾರ್ಜುನ್​ ಅವರ ಕುದುರೆ ಲಾಯದಲ್ಲಿ ಕುದರೆ ಮರಿ ಹಾಕಿದ್ದು, ಅದನ್ನು ನೋಡಲೆಂದೇ ದರ್ಶನ್​ ಅಲ್ಲಿಗೆ ಹೋಗಿದ್ದರಂತೆ. ಅಲ್ಲಿಂದ ಬರುವಾಗ ಮಲ್ಲಿಕಾರ್ಜುನ್​ ಅವರು ದರ್ಶನ್​ ಅವರಿಗೆ ಕುದುರೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ದರ್ಶನ್​ ಹಾಗೂ ಮಲ್ಲಿಕಾರ್ಜುನ್​ ಅವರ ಭೇಟಿ ರಾಜಕೀಯವಾಗಿ ಕುತೂಹಲ ಕೆರಳಿಸಿತ್ತು.

ಇದನ್ನೂ ಓದಿ: ಧನಂಜಯ ಅಭಿನಯದ ರತ್ನನ್​ಪ್ರಪಂಚ ಚಿತ್ರಕ್ಕೆ ಸಿಕ್ತು ಕಿಕ್​ ಸ್ಟಾರ್ಟ್​..!

ದಾವಣಗೆರೆಯಿಂದ ಬರುವಾಗ ಮಲ್ಲಿಕಾರ್ಜುನ್​ ಅವರು ದರ್ಶನ್​ ಅವರಿಗೆ ಎರಡು ಕುದುರೆ ಉಡುಗೊರೆಯಾಗಿ ನೀಡಿದ್ದಾರೆ. ಈ ಕುದುರೆಗಳು ಈಗ ದರ್ಶನ್ ಅವರ ತೋಟದ ಮನೆ ಸೇರಿವೆ. ಈಗಾಗಲೇ ದರ್ಶನ್ ಅವರ ಬಳಿ ಕುದುರೆ ಇದೆ. ಈಗ ಅದರ ಜೊತೆ ಈ ಎರಡು ಕುದರೆಗಳೂ ಸೇರಿಕೊಂಡಿವೆ. ಎಸ್‌.ಎಸ್.‌ ಮಲಿಕಾರ್ಜುನ್ ಅವರು‌ ಒಳ್ಳೆಯ ಕುದುರೆ ಸಾಕಿದ್ದಾರೆ. ಒಂದು ವರ್ಷದಿಂದ ನನಗೂ ಕೆಲಸವಿಲ್ಲ. ಕೋಳಿ, ಕುರಿ, ಕುದುರೆ ಸಾಕುತ್ತಿದ್ದೇನೆ. ಕುದುರೆ ತೆಗೆದುಕೊಂಡು ಹೋಗಲು ಬಂದಿದ್ದೇನೆ. ಪ್ರೀತಿಯಿಂದ ಎರಡು ಕುದುರೆ ಕೊಟ್ಟಿದ್ದಾರೆ ಎಂದು ದರ್ಶನ್​ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಹೇಳಿದ್ದರು.
Published by:Anitha E
First published: