ಸಂಕ್ರಾತಿ ಹಬ್ಬವನ್ನು ಕನ್ನಡಿಗರು ಸುಗ್ಗಿಯ ಹಬ್ಬವೆಂದು ಆಚರಿಸುತ್ತಾರೆ. ಸಂಕ್ರಾತಿ ಹಬ್ಬವನ್ನು ಉತ್ತರ ಭಾರತದಲ್ಲಿ ಒಂದು ಹೆಸರಿನಿಂದ ಕರೆದರೆ, ತಮಿಳು ನಾಡಿನಲ್ಲಿ ಹಾಗೂ ಆಂಧ್ರದಲ್ಲಿ ವಿಭಿನ್ನವಾದ ಹೆಸರಿನಿಂದ ಆಚರಿಸಲಾಗುತ್ತದೆ. ಸೂರ್ಯ ತನ್ನ ಪಥ ಬದಲಿಸುವ ಈ ದಿನವನ್ನು ಹಬ್ಬದಂತೆ ಸಂಭ್ರಮಿಸಲಾಗುತ್ತದೆ. ಸಂಕ್ರಾತಿ ಹಬ್ಬವನ್ನು ಈ ಸಲ ಸಂಭ್ರಮದಿಂದ ಎಲ್ಲೆಡೆ ಆಚರಿಸಲಾಗುತ್ತಿದೆ. ಎಲ್ಲರೂ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಿದ್ದಾರೆ. ಕೊರೋನಾ ಭೀತಿಯಿಂದಾಗಿ ಕಳೆದ ವರ್ಷ ಕಳೆದಿದ್ದು, ಈ ವರ್ಷವಾದರೂ ಜನರ ಜೀವನ ಸಹಜ ಸ್ಥಿತಿ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಕೊರೋನಾ ಕಾಟದಿಂದ ಜನರ ಬದುಕು ದುಸ್ಥರವಾಗಿತ್ತು. ಈಗಿರುವ ಎಲ್ಲ ಕಷ್ಟಗಳು ದೂರಾಗಿ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಇನ್ನ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಹಾಗೂ ಕನ್ನಡ ಚಿತ್ರತಂಡಗಳು ಪ್ರೇಕ್ಷಕರಿಗೆ ಹಬ್ಬಕ್ಕೆ ಶುಭ ಕೋರುತ್ತಿದ್ದಾರೆ. ಕೆಲವು ಚಿತ್ರತಂಡಗಳು ಪ್ರೇಕ್ಷಕರಿಗಾಗಿ ಟೀಸರ್,ಪೋಸ್ಟರ್ ಹೀಗೆ ನಾನಾ ರೀತಿಯ ಉಡುಗೊರೆ ಕೊಡಲು ತಯಾರಿ ನಡೆಸಿದ್ದಾರೆ.
ಕಳೆದ ವರ್ಷ ಕೊರೋನಾ ಕಾಟದಿಂದಾಗಿ ಯಾವ ಹಬ್ಬವನ್ನೂ ನೆಮ್ಮದಿಯಾಗಿ ಹಾಗೀ ಖುಷಿಯಿಂದ ಆಚರಿಸಲಾಗಲಿಲ್ಲ. ಆದರೆ ಈ ವರ್ಷ ಪರಿಸ್ಥಿತಿ ಕೊಂಚ ಬದಲಾಗಿದೆ. ಜನರು ಮನೆಗಳಿಂದ ಹೊರ ಬರುತ್ತಿದ್ದು, ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇನ್ನು ಸಂಕ್ರಾಂತಿ ಹಬ್ಬ ಎಲ್ಲರ ಜೀವನದಲ್ಲಿ ಹೊಸ ಹುರುಪು ತರಲಿ. ಕೊರೋನಾ ದೂರಾಗಿ ಉತ್ಸಾಹ ಮೂಡಲಿ ಎಂದು ದರ್ಶನ್ ಹಾರೈಸಿದ್ದಾರೆ.
೨೦೨೧ರ ಮೊದಲನೆಯ ಹಬ್ಬ ಸಂಕ್ರಾಂತಿ ಸಮೃದ್ಧಿಯ ಸಂಕೇತ. ಎಲ್ಲರ ಮನೆ-ಮನೆಗೂ ಎಳ್ಳು ಬೆಲ್ಲ ಬೀರಿ ಸಂತಸ ಹಂಚಿಕೊಳ್ಳುವ ಸಮಯ. ಕಳೆದ ವರ್ಷದ ಸಂಭ್ರಮಗಳನ್ನು ಕಸಿದುಕೊಂಡಿದ್ದ ಕರೋನ ದೂರವಾಗಿ ಸಂಕ್ರಾಂತಿಯಿಂದ ಎಲ್ಲರ ಬಾಳಲ್ಲೂ ಹೊಸ ಹುರುಪು, ಉತ್ಸಾಹ ಮೂಡಲಿ ಎಂದು ಆಶಿಸುತ್ತೇನೆ.
ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿಯ ಹಾರ್ಧಿಕ ಶುಭಾಶಯಗಳು pic.twitter.com/4OCjF0xoVn
— Darshan Thoogudeepa (@dasadarshan) January 14, 2021
View this post on Instagram
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ