• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Roberrt Movie: ಹೊಸ ವರ್ಷಕ್ಕೆ ಡಿ ಬಾಸ್ ಅಭಿಮಾನಿಗಳಿಗೆ ಸರ್​ಪ್ರೈಸ್; 'ರಾಬರ್ಟ್'​ ಆಗಿ ಹೊಸ ಲುಕ್​ನಲ್ಲಿ ಮಿಂಚಿದ ದರ್ಶನ್

Roberrt Movie: ಹೊಸ ವರ್ಷಕ್ಕೆ ಡಿ ಬಾಸ್ ಅಭಿಮಾನಿಗಳಿಗೆ ಸರ್​ಪ್ರೈಸ್; 'ರಾಬರ್ಟ್'​ ಆಗಿ ಹೊಸ ಲುಕ್​ನಲ್ಲಿ ಮಿಂಚಿದ ದರ್ಶನ್

ದರ್ಶನ್ ಅಭಿನಯದ ರಾಬರ್ಟ್​ ಸಿನಿಮಾದ ಹೊಸ ಲುಕ್

ದರ್ಶನ್ ಅಭಿನಯದ ರಾಬರ್ಟ್​ ಸಿನಿಮಾದ ಹೊಸ ಲುಕ್

Challenging Star Darshan: ಟ್ವಿಟ್ಟರ್ ಮೂಲಕ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿರುವ ದರ್ಶನ್ ಕಳೆದು ಹೋದ ಸಮಯ ಮತ್ತೆ ಹಿಂತಿರುಗಿ ಬರಲು ಸಾಧ್ಯವಿಲ್ಲ. ಎರಡು ದೋಣಿಯ ಮೇಲೆ ಯಾವತ್ತೂ ಪಯಣ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ.

 • Share this:

  ತರುಣ್ ಸುಧೀರ್ ನಿರ್ದೇಶನದ ದರ್ಶನ್ ತೂಗುದೀಪ ನಟನೆಯ 'ರಾಬರ್ಟ್​' ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆಗಳು ಹೆಚ್ಚೇ ಇವೆ. ಈಗಾಗಲೇ 'ರಾಬರ್ಟ್​' ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ಇಂದಿನಿಂದ ದರ್ಶನ್ ಈ ಸಿನಿಮಾಗೆ ಡಬ್ಬಿಂಗ್ ಮಾಡಲಿದ್ದಾರೆ.

  ಆಶಾ ಭಟ್ ನಾಯಕಿಯಾಗಿ ನಟಿಸುತ್ತಿರುವ 'ರಾಬರ್ಟ್' ಸಿನಿಮಾದಲ್ಲಿನ ದರ್ಶನ್​ ಅವರ ಇನ್ನೊಂದು ಪೋಸ್ಟರ್ ಇಂದು ರಿಲೀಸ್ ಆಗಿದ್ದು, ಬೈಕ್ ಹತ್ತಿ ಕುಳಿತಿರುವ ದರ್ಶನ್ ಅದೇ ಫೋಟೋವನ್ನು ತಮ್ಮ ಟ್ವಿಟ್ಟರ್​ ಪ್ರೊಫೈಲ್ ಆಗಿ ಮಾಡಿಕೊಂಡಿದ್ದಾರೆ. 'ಬಾಬಾಬಾ ನಾ ರೆಡಿ' ಎಂದು ಈ ಫೋಟೋವನ್ನು ದರ್ಶನ್ 2 ಗಂಟೆಗಳ ಮೊದಲು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಈಗಾಗಲೇ ಈ ಫೋಟೋವನ್ನು 1.5 ಸಾವಿರಕ್ಕೂ ಅಧಿಕ ಜನ ರೀಟ್ವೀಟ್ ಮಾಡಿಕೊಂಡಿದ್ದಾರೆ. ನಾಯಕಿ ಆಶಾ ಭಟ್ ಕೂಡ ಈ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.  ಇದರ ಜೊತೆಗೆ ಹೊಸ ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಶುಭಾಶಯವನ್ನೂ ಕೋರಿರುವ ದರ್ಶನ್ 'ಕಳೆದು ಹೋದ ಸಮಯ ಮತ್ತೆ ಹಿಂತಿರುಗಿ ಬರಲು ಸಾಧ್ಯವಿಲ್ಲ. ಎರಡು ದೋಣಿಯ ಮೇಲೆ ಯಾವತ್ತೂ ಪಯಣ ಮಾಡಬೇಡಿ. ನಿಮ್ಮ ಗುರಿ, ಅದಕ್ಕೆ ಬೇಕಾದ ಕಾರ್ಯನಿಷ್ಠೆ ಮೇಲೆ ನಂಬಿಕೆ ಇರಲಿ. ಈ ವರ್ಷ ನಿಮ್ಮ ಎಲ್ಲ ಕನಸುಗಳು ಸಾಕಾರಗೊಳ್ಳಲಿ. ನಿಮಗೂ, ನಿಮ್ಮ ಕುಟುಂಬಕ್ಕೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು- ‪ನಿಮ್ಮ ದಾಸ ದರ್ಶನ್‬'‬ ಎಂದು ಟ್ವೀಟ್ ಮಾಡಿಕೊಂಡಿದ್ದಾರೆ.

  Published by:Sushma Chakre
  First published: