Kurukshetra: ದರ್ಶನ್ ನಟನೆಯ ಕುರುಕ್ಷೇತ್ರಕ್ಕೆ ಸರ್ಕಾರದಿಂದ ಸಿಗಲಿದೆ ತೆರಿಗೆ ವಿನಾಯಿತಿ?

Kurukshetra: ಇತ್ತೀಚೆಗೆ ಹಿರಿಯ ಕಲಾವಿದರಿಗೋಸ್ಕರ ಸಿನಿಮಾದ ವಿಶೇಷ ಶೋ ಒಂದನ್ನು ಏರ್ಪಡಿಸಲಾಗಿತ್ತು. ಸಿನಿಮಾ ವೀಕ್ಷಿಸಿದ ನಂತರ ಸರೋಜಾ ದೇವಿ ಸಾಕಷ್ಟು ಕಲಾವಿದರು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ದರ್ಶನ್​ ಸಂತಸವನ್ನು ದುಪ್ಪಟ್ಟು ಮಾಡಿದೆ.

Rajesh Duggumane | news18
Updated:August 20, 2019, 9:26 AM IST
Kurukshetra: ದರ್ಶನ್ ನಟನೆಯ ಕುರುಕ್ಷೇತ್ರಕ್ಕೆ ಸರ್ಕಾರದಿಂದ ಸಿಗಲಿದೆ ತೆರಿಗೆ ವಿನಾಯಿತಿ?
ಕುರುಕ್ಷೇತ್ರದ ಪೋಸ್ಟರ್​
Rajesh Duggumane | news18
Updated: August 20, 2019, 9:26 AM IST
ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಸಿನಿಮಾಗೆ ಹಿರಿಯ ಕಲಾವಿದರು ಸೇರಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಾಭಾರತ ಕಥೆ ಆಧರಿಸಿ ಸಿನಿಮಾ ಸಿದ್ಧಗೊಂಡಿದೆ. ಈ ಚಿತ್ರಕ್ಕೆ ಸಂಪುರ್ಣ ತೆರಿಗೆ ವಿನಾಯಿತಿ ನೀಡಿ ಎಂದು ನಿರ್ಮಾಪಕ ಮುನಿರತ್ನ ಸರ್ಕಾರಕ್ಕೆ ಮನವಿ ಮಾಡಲಿದ್ದಾರಂತೆ.

ಕುರುಕ್ಷೇತ್ರ ಮಹಾ ಕಾವ್ಯ ಮಹಾಭಾರತದ ಕ್ಲೈಮ್ಯಾಕ್ಸ್​. ಹೀಗಾಗಿ, ರಾಜ್ಯದ ಎಲ್ಲ ವಿದ್ಯಾರ್ಥಿಗಳು ಈ ಸಿನಿಮಾ ವೀಕ್ಷಿಸಬೇಕು ಎಂಬುದು ನಿರ್ಮಾಪಕ ಮುನಿರತ್ನ ಅವರ ಇಚ್ಛೆ. ಹೀಗಾಗಿ, ಈ ವಿಚಾರಕ್ಕೆ ಸಂಬಂಧಿಸಿ ಅವರು ಶೀಘ್ರವೇ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಬಳಿ ಮನವಿ ಸಲ್ಲಿಕೆ ಮಾಡಲಿದ್ದಾರೆ.

“ಮಹಾಭಾರತದ ಕಥೆ ಎಲ್ಲ ವಿದ್ಯಾರ್ಥಿಗಳಿಗೂ ತಿಳಿಯಬೇಕು. ಹೀಗಾಗಿ ‘ಕುರುಕ್ಷೇತ್ರ’ಕ್ಕೆ ತೆರಿಗೆ ವಿನಾಯಿತಿ ನೀಡಬೇಕು ಸಿಎಂ ಬಳಿ ಮನವಿ ಮಾಡುತ್ತೇನೆ,” ಎಂದು ಮುನಿರತ್ನ ಕೋರಿದ್ದಾರೆ.

ಇತ್ತೀಚೆಗೆ ಹಿರಿಯ ಕಲಾವಿದರಿಗೋಸ್ಕರ ಸಿನಿಮಾದ ವಿಶೇಷ ಶೋ ಒಂದನ್ನು ಏರ್ಪಡಿಸಲಾಗಿತ್ತು. ಸಿನಿಮಾ ವೀಕ್ಷಿಸಿದ ನಂತರ ಸರೋಜಾ ದೇವಿ ಸೇರಿ ಸಾಕಷ್ಟು ಕಲಾವಿದರು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ದರ್ಶನ್​ ಸಂತಸ ದುಪ್ಪಟ್ಟು ಮಾಡಿದೆ.

“ಕಮರ್ಷಿಯಲ್​ ಸಿನಿಮಾಗಳ ಅಬ್ಬರ ಹೆಚ್ಚಿದ್ದಾಗ ‘ಸಂಗೊಳ್ಳಿ ರಾಯಣ್ಣ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದೆ. ಈಗ ನಾನಾ ಶೈಲಿಯ ಚಿತ್ರಗಳು ತೆರೆಗೆ ಬರುತ್ತಿವೆ. ಈ ರೀತಿ ಸಿನಿಮಾಗಳನ್ನು ನಿರ್ಮಾಣ ಮಾಡಲು ಮುನಿರತ್ನ ಅವರಿಂದ ಮಾತ್ರ ಸಾಧ್ಯ,” ಎಂದು ದರ್ಶನ್​ ನಿರ್ಮಾಪಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಾಕ್ಸಾಫೀಸ್​ನಲ್ಲಿ ಕುರುಕ್ಷೇತ್ರ ಕಲೆಕ್ಷನ್ ಕದನ: ಮೊದಲ ವಾರದಲ್ಲೇ ಕೆಜಿಎಫ್ ದಾಖಲೆ ಧೂಳೀಪಟ

First published:August 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...