• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Darshan: ದಾಸನ ಮನವಿಗೆ ಸ್ಪಂದಿಸಿ ಪ್ರಾಣಿಗಳನ್ನು ದತ್ತು ಸ್ವೀಕರಿಸುತ್ತಿರುವ ಅಭಿಮಾನಿಗಳು; ಹೃದಯಪೂರ್ವಕ ಧನ್ಯವಾದ ಎಂದ ದರ್ಶನ್

Darshan: ದಾಸನ ಮನವಿಗೆ ಸ್ಪಂದಿಸಿ ಪ್ರಾಣಿಗಳನ್ನು ದತ್ತು ಸ್ವೀಕರಿಸುತ್ತಿರುವ ಅಭಿಮಾನಿಗಳು; ಹೃದಯಪೂರ್ವಕ ಧನ್ಯವಾದ ಎಂದ ದರ್ಶನ್

Darshan

Darshan

D Boss: ದಾಸ ಜೂ 5ರಂದು ವಿಡಿಯೋ ಮೂಲಕ ಅಭಿಮಾನಿ ಮತ್ತು ಆಪ್ತರ ಬಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಹಕರಿಸಿ ಎಂದು ಮನವಿ ಮಾಡಿದ್ದರು. ಪ್ರಾಣಿ ಸಂಗ್ರಹಾಲಯದಲ್ಲಿರುವ ಇಷ್ಟವಾದ ಪ್ರಾಣಿಗಳನ್ನು ದತ್ತು ಪಡೆಯಬಹುದೆಂದು ಹೇಳಿದ್ದರು.

  • Share this:

    ಕೊರೊನಾ ಸಂಕಷ್ಟ ಸಮಯದಲ್ಲಿ ಚಾಲೆಂಜಿಗ್​ ಸ್ಟಾರ್​ ದರ್ಶನ್ ಅವರು​ ಮೃಗಾಲಯದಿಂದ ಪ್ರಾಣಿಗಳನ್ನು ದತ್ತು ಸ್ವೀಕರಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು. ಆದರೀಗ ಅವರ ಮಾತಿನಂತೆ ಅಭಿಮಾನಿಗಳು ಪ್ರಾಣಿಗಳನ್ನು ದತ್ತು ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.


    ಒಂದೆಡೆ ಕೊರೊನಾ ಅವಾಂತರ ಮತ್ತೊಂದೆಡೆ ಲಾಕ್​ಡೌನ್​​ ಇದರಿಂದಾಗಿ ಜನರು ಮಾತ್ರವಲ್ಲ, ಪ್ರಾಣಿಗಳು ಕೂಡ ಸಂಕಷ್ಟವನ್ನು ಎದುರಿಸುತ್ತಿವೆ. ರಾಜ್ಯದಲ್ಲಿರುವ 9 ಪ್ರಾಣಿ ಸಂಗ್ರಹಾಲಯಗಳು ಕೂಡ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಇದರಿಂದ ಆಹಾರಕ್ಕೂ ಸಮಸ್ಯೆಯಾಗಿತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆ ನಟ ದರ್ಶನ್​ ನೆರವಿಗೆ ಧಾವಿಸಿದ್ದಾರೆ.


    ದಾಸ ಜೂ 5ರಂದು ವಿಡಿಯೋ ಮೂಲಕ ಅಭಿಮಾನಿ ಮತ್ತು ಆಪ್ತರ ಬಳಿ ಪ್ರಾಣಿಗಳನ್ನು ದತ್ತು ತೆಗೆದುಕೊಂಡು ಸಹಕರಿಸಿ ಎಂದು ಮನವಿ ಮಾಡಿದ್ದರು. ಪ್ರಾಣಿ ಸಂಗ್ರಹಾಲಯದಲ್ಲಿರುವ ಇಷ್ಟವಾದ ಪ್ರಾಣಿಗಳನ್ನು ದತ್ತು ಪಡೆಯಬಹುದೆಂದು ಹೇಳಿದ್ದರು. ದರ್ಶನ್​ ಅವರ ಮನವಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಾತ್ರವಲ್ಲದೆ ಅನೇಕರಿಗೆ ಅದು ತಲುಪಿದೆ. ಇದನ್ನು ಗಮನಿಸಿದ ಅವರ ಅಭಿಮಾನಿಗಳು ಪ್ರಾಣಿಗಳನ್ನು ದತ್ತು ಸ್ವೀಕರಿಸುತ್ತಿದ್ದಾರೆ.


    ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿರುವ ‘ದರ್ಶನ್’​ ಎಂಬ ಸಿಂಹವನ್ನು ನಿರ್ಮಾಪಕ ಶೈಲಜಾ ನಾಗ್​ ದತ್ತು ಪಡೆದುಕೊಂಡಿದ್ದಾರೆ. ಅಭಿಮಾನಿಗಳು ರಾಜ್ಯದಲ್ಲಿರುವ 8 ಮೃಗಾಲಯದಿಂದ ಪ್ರಾಣಿಗಳನ್ನು ದತ್ತು ಸ್ವೀಕರಿಸುತ್ತಿದ್ದಾರೆ.













    ಇನ್ನು ಡಿ ಬಾಸ್​ ಮಾತಿಗೆ ಓಗೊಟ್ಟು ಪ್ರಾಣಿಗಳನ್ನು ದತ್ತು ಸ್ವೀಕರಿಸಿದ ಅಭಿಮಾನಿಗಳಿಗೆ ದಾಸ ಟ್ವೀಟ್​ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ.

    Published by:Harshith AS
    First published: