ಅಭಿಮಾನಿಗಳ ದಾಸ, ಫ್ಯಾನ್ಸ್ಗಳಿಂದ ಪ್ರೀತಿಯಿಂದ ಡಿ ಬಾಸ್ ಎಂದು ಕರೆಸಿಕೊಳ್ಳುವ ದರ್ಶನ್ ಬಹಳ ಸಮಯದ ನಂತರ ಫೇಸ್ಬುಕ್ ಲೈವ್ ಬಂದಿದ್ದಾರೆ. ಕಳೆದ ಕೆಲವು ದಿನಗಳಿಂದ ದರ್ಶನ್ ಅವರ ಲೈವ್ ನೋಡಲು ಕ್ಷಣಗಳನ್ನು ಯುಗದಂತೆ ಕಳೆಯುತ್ತಿರುವ ಅಭಿಮಾನಿಗಳ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ದರ್ಶನ್ ಅವರ ಒಂದು ಹೊಸ ಫೋಟೋ ಸಿಕ್ಕರೆ ಸಾಕು ಅದನ್ನು ವೈರಲ್ ಮಾಡುತ್ತಾ ಟ್ರೆಂಡ್ ಮಾಡುವ ಫ್ಯಾನ್ಸ್ಗೆ ಈಗ ದರ್ಶನ್ ಅವರ ಲೈವ್ ನೋಡಿ ಸಖತ್ ಖುಷಿಯಾಗಿದೆ. ಕೊರೋನಾದಿಂದಾಗಿ ಇಡೀ ದೇಶವೇ ಲಾಕ್ಡೌನ್ ಆಗಿ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದರೂ ಅಭಿಮಾನಿಗಳ ದಾಸ ದರ್ಶನ್ ತಮ್ಮ ಸೆಲೆಬ್ರಿಟಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ರಂಜಿಸುತ್ತಿದ್ದರು. ಫ್ಯಾನ್ಸ್ಗಾಗಿ ಪ್ರತಿ ಹಬ್ಬಕ್ಕೂ ಒಂದೊಂದು ಹೊಸ ಪೋಸ್ಟರ್ ಹಾಗೂ ರಾಬರ್ಟ್ ಚಿತ್ರದ ಹಾಡನ್ನು ರಿಲೀಸ್ ಮಾಡಿದ್ದರು. ಈಗ ಹೇಳಿದಂತೆ ದರ್ಶನ್ ಅವರು ಜನವರಿ 10ರಂದು ಅಂದರೆ ಇಂದು ಬೆಳಿಗ್ಗೆ 11ಕ್ಕೆ ತಮ್ಮ ಫೇಸ್ಬುಕ್ ಖಾತೆಯಿಂದ ಲೈವ್ ಬಂದಿದ್ದಾರೆ.
2020 ಎಲ್ಲರ ಜೀವನದಲ್ಲೂ ಮರೆಯಲಾಗದ ವರ್ಷ. ಸಾಕಷ್ಟು ಜನರಿಗೆ ಕಷ್ಟ ಎದುರಾಗಿದೆ. 2021 ಎಲ್ಲರ ಜೀವನದಲ್ಲೂ ಸುಖ ನೆಮ್ಮದಿ ತರಲೆಂದು ಹೊಸ ವರ್ಷಕ್ಕೆ ಹಾರೈಸಿದ್ದಾರೆ. 2020 ಎಲ್ಲರಿಗೂ ಒಂದು ಪಾಠ ಕಲಿಸಿದೆ. ಕೊರೋನಾದಿಂದಾಗಿ ಸಾಕಷ್ಟು ನೊಂದಿರುವ ಕಾರಣದಿಂದ ಈ ಸಲ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದ್ದಾರೆ.
ನಾನು ನನ್ನ ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ಫೆ. 15ರಿಂದಲೇ ಊರಿನಿಂದ ಹೊರಗಿರುತ್ತೇನೆ. ದಯವಿಟ್ಟು ಯಾರೂ ಮನೆ ಬಳಿ ಬರಬೇಡಿ. ಕೊರೋನಾದಿಂದ ಕೆಲಸವಿಲ್ಲದೆ ಸಾಕಷ್ಟು ಮಂದಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಇದರಿಂದಾಗಿಯೇ ಅಭಿಮಾನಿಗಳು ನನ್ನ ಹುಟ್ಟುಹಬ್ಬಕ್ಕೆ ಹಣ ಖರ್ಚು ಮಾಡುವ ಬದಲು ನಿಮ್ಮ ಮನೆಗಳನ್ನು ನೋಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬಿಳಿ ಬಣ್ಣದ ಗೌನ್ ತೊಟ್ಟು ಹಾಟ್ ಫೋಟೋಶೂಟ್ಗೆ ಪೋಸ್ ಕೊಟ್ಟ ಮೇಘಾ ಶೆಟ್ಟಿ..!
ಮಾರ್ಚ್ ನಂತರ ಒಂದೊಂದು ಭಾನುವಾರದಂದು ಒಂದೊಂದು ಊರಿನವರಿಗೆ ಸಿಗುವ ವ್ಯವಸ್ಥೆ ಮಾಡುತ್ತೇನೆ ಎಂದಿದ್ದಾರೆ. ದಯವಿಟ್ಟು ಯಾರೂ ಹುಟ್ಟುಹಬ್ಬಕ್ಕೆ ಮನೆಯ ಬಳಿ ಬರಬೇಡಿ. ನಿಮ್ಮ ಆರೋಗ್ಯ ನನಗೆ ಮುಖ್ಯ ಕೊರೋನಾ ಕಾಟ ಮುಗಿದ ನಂತರ ಮುಂದಿನ ವರ್ಷ ಹುಟ್ಟುಹಬ್ಬವನ್ನು ಆಚರಿಸೋಣ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ