Odeya: ಸ್ವಿಟ್ಜರ್​ಲೆಂಡ್​ನತ್ತ ಡಿಬಾಸ್​ ದರ್ಶನ್​: ವಿದೇಶದಲ್ಲಿ ಒಡೆಯನ ಚಿತ್ರೀಕರಣ..!

DBoss Darshan: ದಸರಾ ಹಬ್ಬದ ಅಂಗವಾಗಿ ಸಿನಿಮಾದ ಹೊಸ ಪೋಸ್ಟರ್​ ಅನ್ನು ಬಿಡುಗಡೆ ಮಾಡಲಾಯಿತು. ಮಗುವನ್ನು ಎತ್ತಿ ಆಡಿಸುವ ದರ್ಶನ್ ಅವರ ಪೋಸ್ಟರ್​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಇದೇ ಸಿನಿಮಾದ ಅಡ್ಡಾದಿಂದ ಮತ್ತೊಂದು ಹೊಸ ಸುದ್ದಿ ಹೊರ ಬಿದ್ದಿದೆ. 

Anitha E | news18-kannada
Updated:October 12, 2019, 1:25 PM IST
Odeya: ಸ್ವಿಟ್ಜರ್​ಲೆಂಡ್​ನತ್ತ ಡಿಬಾಸ್​ ದರ್ಶನ್​: ವಿದೇಶದಲ್ಲಿ ಒಡೆಯನ ಚಿತ್ರೀಕರಣ..!
ಒಡೆಯ ಚಿತ್ರದಲ್ಲಿ ದರ್ಶನ್​
  • Share this:
ದರ್ಶನ್​ ಅಭಿನಯದ 52ನೇ ಸಿನಿಮಾ 'ಒಡೆಯ'. ಕೇವಲ ಪೋಸ್ಟರ್​ಗಳಿಂದಲೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿದೆ ಈ ಚಿತ್ರ. 'ಕುರುಕ್ಷೇತ್ರ' ಹಾಗೂ 'ಯಜಮಾನ' ಚಿತ್ರಗಳ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ದರ್ಶನ್​ ಮತ್ತೊಂದು ಹಿಟ್ ಸಿನಿಮಾ ನೀಡುವ ಮೂಡ್​ನಲ್ಲಿದ್ದಾರೆ. ​

ದಸರಾ ಹಬ್ಬದ ಅಂಗವಾಗಿ ಸಿನಿಮಾದ ಹೊಸ ಪೋಸ್ಟರ್​ ಅನ್ನು ಬಿಡುಗಡೆ ಮಾಡಲಾಯಿತು. ಮಗುವನ್ನು ಎತ್ತಿ ಆಡಿಸುವ ದರ್ಶನ್ ಅವರ ಪೋಸ್ಟರ್​ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಈಗ ಇದೇ ಸಿನಿಮಾದ ಅಡ್ಡಾದಿಂದ ಮತ್ತೊಂದು ಹೊಸ ಸುದ್ದಿ ಹೊರ ಬಿದ್ದಿದೆ.

Odeya Movie motion poster release date postponed by producer Sandesh Nagraj
'ಒಡೆಯ' ಸಿನಿಮಾದ ಪೋಸ್ಟರ್​ನಲ್ಲಿ ದರ್ಶನ್​


ಹೌದು, ಈ ಸಿನಿಮಾದ ಹಾಡಿನ ಚಿತ್ರೀಕರಣಕ್ಕಾಗಿ ದರ್ಶನ್​ ಸ್ವಿಟ್ಜರ್​ಲೆಂಡ್​ನತ್ತ ಹೊರಟ್ಟಿದ್ದಾರಂತೆ. ಅ.15ರಂದು ದಚ್ಚು ಸ್ವಿಟ್ಜರ್​ಲೆಂಡ್​ಗೆ ಪ್ರಯಾಣ ಬೆಳಸಿದ್ದಾರೆ.

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮೋಸ್ಟ್ ಎಕ್ಸ್ಪೆಕ್ಟೆಡ್ #D52 ‘ಒಡೆಯ' ಚಿತ್ರದ ಎರಡು ಹಾಡಿನ ಚಿತ್ರೀಕರಣಕ್ಕಾಗಿ ಇದೆ ಅಕ್ಟೋಬರ್ 15ರಂದು ಸ್ವಿಜರ್ಲ್ಯಾಂಡ್ ಗೆ ಪ್ರಯಾಣ ಬೆಳೆಸಲಿದ್ದಾರೆ.#D52 #Odeya #BoxOfficeSultan #ChallengingStarDarshan #DBoss@dasadarshan @Dcompany171 pic.twitter.com/4yFabXYJVw

ಬಹುತೇಕ ಸಿನಿಮಾಗಳಲ್ಲಿ ಮಾಸ್​  ಲುಕ್​ನಲ್ಲಿ ಕಾಣಿಸಿಕೊಂಡಿರುವ ದರ್ಶನ್​ ಈಗ ಕೌಟುಂಬಿಕ ಸಿನಿಮಾದಲ್ಲಿ 'ಒಡೆಯ'ನಾಗಿ ಅಭಿನಯಿಸುತ್ತಿದ್ದಾರೆ. ಇದೊಂದು ಅಣ್ಣ- ತಮ್ಮಂದಿರ ಸಿನಿಮವಾಗಿದ್ದು ಚಿತ್ರದಲ್ಲಿ ದರ್ಶನ್​ ಅವರು ಗಜೇಂದ್ರನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

 

ದಸರಾ ಹಬ್ಬದಂದು ನಿರ್ಮಾಪಕರು ಈ ಸಿನಿಮಾದ ಮೋಷನ್ ಪೋಸ್ಟರ್​ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಅದು ಸಾಧ್ಯವಾಗದೆ ಕಡೆ ಅಭಿಮಾನಿಗಳ ಬಳಿ ಕ್ಷಮೆ ಯಾಚಿಸುವಂತಾಯಿತು.


'ಒಡೆಯ' ಸಿನಿಮಾ ಕನ್ನಡ ರಾಜೋತ್ಸವದ ಅಂಗವಾಗಿ ಬಿಡುಗಡೆಯಾಗುವ ಸೂಚನೆ ಸಿಕ್ಕಿದೆ. ಚಿತ್ರದಲ್ಲಿ ನಟ ದರ್ಶನ್​ಗೆ ನಾಯಕಿಯಾಗಿ ರಾಘವಿ ತಿಮ್ಮಯ್ಯ, ಚಿಕ್ಕಣ್ಣ, ಯಶಸ್​​ ಸೂರ್ಯ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

 

Madhubala: ಎವರ್​ಗ್ರೀನ್ ಸುಂದರಿ ಮಧುಬಾಲಾರನ್ನೇ ಹೋಲುವ ಸ್ಯಾಂಡಲ್​ವುಡ್​ ನಟಿ ಈಗ ಹೊಸ ಟಿಕ್ ಟಾಕ್ ಸ್ಟಾರ್


First published:October 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ