Takkar: ಡಿಬಾಸ್ ದರ್ಶನ್​​ ಕೈಯಿಂದ ಟಕ್ಕರ್​ ಸಿನಿಮಾದ ಆಡಿಯೋ-ಟ್ರೈಲರ್​​​ ಬಿಡುಗಡೆ..!

Takkar: ದಾಸನ ಗರಡಿಯಿಂದ ಸ್ಯಾಂಡಲ್​ವುಡ್​ಗೆ​ ಎಂಟ್ರಿ ಕೊಟ್ಟಿರುವ ಮನೋಜ್​ ಇದೇ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ​ ಎಸ್ ಎಲ್ ಎನ್ ಕ್ರಿಯೇಷನ್ಸ್ ನಿರ್ಮಾಣದ ಎರಡನೇ ಕೊಡುಗೆ ಟಕ್ಕರ್ ಚಿತ್ರ. ಇದರ ಆಡಿಯೋ ಹಾಗೂ ಟ್ರೈಲರ್​ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಲಿದೆ.

Anitha E | news18india
Updated:September 7, 2019, 12:14 PM IST
Takkar: ಡಿಬಾಸ್ ದರ್ಶನ್​​ ಕೈಯಿಂದ  ಟಕ್ಕರ್​ ಸಿನಿಮಾದ ಆಡಿಯೋ-ಟ್ರೈಲರ್​​​ ಬಿಡುಗಡೆ..!
ಟಕ್ಕರ್​ ತಂಡದೊಂದಿಗೆ ಡಿಬಾಸ್​
  • Share this:
ದರ್ಶನ್​ ತೂಗುದೀಪ ಅವರ ಸೋದರಳಿಯ ಮನೋಜ್​ ನಾಯಕರಾಗಿ ಅಭಿನಯಿಸುತ್ತಿರುವ ಸಿನಿಮಾ ಸೆಟ್ಟೇರಿರುವ ವಿಷಯ ತಿಳಿದೇ ಇದೆ. ಈ ಸಿನಿಮಾ ಕೇವಲ ಪೋಸ್ಟರ್​, ಫಸ್ಟ್​ಲುಕ್​ ಹಾಗೂ ಟೀಸರ್​ನಿಂದಲೇ ಸದ್ದು ಮಾಡುತ್ತಿದೆ.

ದಾಸನ ಗರಡಿಯಿಂದ ಸ್ಯಾಂಡಲ್​ವುಡ್​ಗೆ​ ಎಂಟ್ರಿ ಕೊಟ್ಟಿರುವ ಮನೋಜ್​ ಇದೇ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ​ ಎಸ್ ಎಲ್ ಎನ್ ಕ್ರಿಯೇಷನ್ಸ್ ನಿರ್ಮಾಣದ ಎರಡನೇ ಕೊಡುಗೆ 'ಟಕ್ಕರ್' ಚಿತ್ರ. ಇದರ ಆಡಿಯೋ ಹಾಗೂ ಟ್ರೈಲರ್​ ಬಿಡುಗಡೆ ಕಾರ್ಯಕ್ರಮ ಇಂದು ನಡೆಯಲಿದೆ.

ದರ್ಶನ್​ ಹಾಗೂ ಮನೋಜ್​


'ಟಕ್ಕರ್​' ಸಿನಿಮಾದ ಪೋಸ್ಟರ್​


ಇಂದು ಸಂಜೆ 6ಕ್ಕೆ ಚಾಮರಾಜಪೇಟೆ ಕಲಾವಿದರ ಸಂಘದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಡಿಬಾಸ್​ ದರ್ಸನ್​, ಆಡಿಯೋ ಹಾಗೂ ಟ್ರೈಲರ್​ ಬಿಡುಗಡೆ ಮಾಡಲಿದ್ದಾರೆ. ಇದರ ಜೊತೆಗೆ  ಎಸ್ ಎಲ್ ಎನ್ ಆಡಿಯೋ ಲಾಂಛನವನ್ನೂ ಲಾಂಚ್​ ಮಾಲಾಗುವುದು.

#Takkar Audio & Trailer from #September07ಇದೊಂದು ಆ್ಯಕ್ಷನ್​ ಹಾಗೂ ಪ್ರೇಮ ಕತೆ ಇರುವ ಸಿನಿಮಾ. ಇದರಲ್ಲಿ ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್​ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. 'ರನ್​ ಆ್ಯಂಟನಿ' ಖ್ಯಾತಿಯ ನಿರ್ದೇಶಕ ರಘುಶಾಸ್ತ್ರಿ ನಿರ್ದೇಶಿಸಿರುವ ಈ ಚಿತ್ರಕ್ಕೆ 'ಹುಲಿರಾಯ' ಚಿತ್ರವನ್ನು ನಿರ್ಮಿಸಿದ್ದ ನಾಗೇಶ್ ಕೋಗಿಲು ಬಂಡವಾಳ ಹೂಡಿದ್ದಾರೆ.

 

Rashmika Mandanna: ಸೆನ್ಸೇಷನ್​ ಆಫ್​ ದ ಇಯರ್​ ಪ್ರಶಸ್ತಿ ತನ್ನದಾಗಿಸಿಕೊಂಡ ರಶ್ಮಿಕಾರ ಹಾಟ್​ ಚಿತ್ರಗಳು..!


 

First published: September 7, 2019, 12:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading