ಸಹ ಕಲಾವಿದನ ಮೇಲೆ ದರ್ಶನ್ ಹಲ್ಲೆ: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು​?

news18
Updated:August 30, 2018, 8:02 PM IST
ಸಹ ಕಲಾವಿದನ ಮೇಲೆ ದರ್ಶನ್ ಹಲ್ಲೆ: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು​?
news18
Updated: August 30, 2018, 8:02 PM IST
ನ್ಯೂಸ್​18 ಕನ್ನಡ 

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಸಹ ಕಲಾವಿದರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ತಾವರೆಕೆರೆ ಬಳಿ 'ಯಜಮಾನ' ಸಿನಿಮಾದ ಚಿತ್ರೀಕರಣ ನಡೆಯುತ್ತಿರುವಾಗ ಈ ಘಟನೆ ನಡೆದಿದೆಯಂತೆ.

ಹೌದು ಇಂದು (ಆ.30) ದರ್ಶನ್​ ಅಭಿನಯದ 'ಯಜಮಾನ' ಸಿನಿಮಾದ ಹಾಡಿನ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಇದೇ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸಹ ಕಲಾವಿದರೊಬ್ಬರು ಹಾಡಿನ ಚಿತ್ರೀಕರಣವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನು ಗಮನಿಸಿದ ದರ್ಶನ್​ ಆ ಕಲಾವಿದನನ್ನು ಗದರಿಸಿ ಮೊಬೈಲ್​ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ ಸಿನಿಮಾದ ನಿರ್ದೇಶಕ ಬಿ. ಸುರೇಶ್​ ಇದೆಲ್ಲ ಸುಳ್ಳು ಎಂದು ತಳ್ಳಿಹಾಕಿದ್ದಾರೆ.

ನ್ಯೂಸ್​ 18 ಜತೆ ಮಾತನಾಡಿದ ಬಿ. ಸುರೇಶ್​, ಹಾಡಿನ ಚಿತ್ರೀಕರಣವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದ ಕಾರಣಕ್ಕೆ ಮೊಬೈಲ್​ ತೆಗೆದುಕೊಂಡಿದ್ದು ನಿಜ. ಆದರೆ ಅವರ ಮೇಲೆ ಹಲ್ಲೆ ಮಾಡಿಲ್ಲ ಎಂದಿದ್ದಾರೆ.
ಘಟನೆಯ ನಂತರ ರಾಮನಗರ ಜಿಲ್ಲೆಯ ತಾವರೆಕೆರೆ ಪೊಲೀಸ್​ ಠಾಣೆಗೆ ತೆರಳಿದ ಸಹ ಕಲಾವಿದ​ ದೂರು ದಾಖಲಿಸಲು ಮುಂದಾಗಿದ್ದರು. ನಂತರ ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆಯಿತು. ಜತೆಗೆ ಸಹ ಕಲಾವಿದ ದರ್ಶನ್​ ತಮಗೆ ತಪ್ಪೊಪ್ಪಿಗೆ ಕೇಳಬೇಕು ಎಂದು ಹಠ ಹಿಡಿದರು. ಆದರೆ ಶೂಟಿಂಗ್​ನಲ್ಲಿ ಮೊಬೈಲ್​ ಚಿತ್ರೀಕರಣ ಮಾಡಿರುವುದು ತಪ್ಪು ಎಂದು ಸಹ ಕಲಾವಿದರ ಮ್ಯಾನೇಜರ್​ ಹೇಳಿದ ನಂತರ ಪ್ರಕರಣಕ್ಕೆ ಅಂತ್ಯ ಸಿಕ್ಕಿದೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...