`ಚೌಕ ಚಿತ್ರದಲ್ಲಿ ರಾಬರ್ಟ್ ಆಗಿ ಮಿಂಚಿದ್ದ ದರ್ಶನ್​: ಅದೇ ಟೈಟಲ್‍ನಲ್ಲಿ ಚಿತ್ರ ಕಿಕ್‍ಸ್ಟಾರ್ಟ್..!

news18
Updated:July 24, 2018, 6:09 PM IST
`ಚೌಕ ಚಿತ್ರದಲ್ಲಿ ರಾಬರ್ಟ್ ಆಗಿ ಮಿಂಚಿದ್ದ ದರ್ಶನ್​: ಅದೇ ಟೈಟಲ್‍ನಲ್ಲಿ ಚಿತ್ರ ಕಿಕ್‍ಸ್ಟಾರ್ಟ್..!
  • News18
  • Last Updated: July 24, 2018, 6:09 PM IST
  • Share this:
ಹರೀಶ್, ನ್ಯೂಸ್18 ಕನ್ನಡ

ದರ್ಶನ್ ಅವರ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಇದೆ. 'ಚೌಕ' ಚಿತ್ರದಲ್ಲಿ ಕೆಲವೇ ದೃಶ್ಯಗಳಲ್ಲಿ ರಾಬರ್ಟ್ ಆಗಿ ದರ್ಶನ್ ಮಿಂಚಿದ್ದರು. ಅದನ್ನ ನೋಡಿದ್ದ ಅಭಿಮಾನಿಗಳು ಅಯ್ಯೋ ಬಾಸ್‍ದು ಇದೇ ರೋಲು ಇನ್ನುಒಂಚೂರ್ ಜಾಸ್ತಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತಂದುಕೊಂಡಿದ್ದರು. ಈಗ ದರ್ಶನ್ ರಾಬರ್ಟ್ ಆಗಿ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗುತ್ತಿದ್ದಾರೆ. ಆದರೆ ಈ ಟೈಟಲ್​ ಬೇಡ ಅನ್ನಿಸಿದರೆ 'ಕಾಟೇರ' ಅನ್ನೊ ಟೈಟಲ್‍ನಲ್ಲಿ ಬರೊ ಯೋಚನೆಯೂ ದರ್ಶನ್ ಅವರಿಗಿದೆ. ಯಾರು ಈ 'ಕಾಟೇರ' ಅಂದರೆ ಒಂದು ಆಸಕ್ತಿಕರ ಮಾಹಿತಿ ಉತ್ತರ ಕರ್ನಾಟಕದ ಕಡೆಯಿಂದ ಸಿಗುತ್ತಾ ಇದೆ.

ದರ್ಶನ್ ಇತ್ತೀಚೆಗೆ ಅದೆಷ್ಟೇ ಸಿನಿಮಾಗಳಲ್ಲಿ ಪ್ರೇಕ್ಷಕರ ಮುಂದೆ ಬಂದಿರಲಿ, ಆದರೆ ಅವರನ್ನ ಅವರ ಅಭಿಮಾನಿಗಳ ಸಮೇತ ತುಂಬಾ ನೆನಪಿಟ್ಟುಕೊಂಡಿದ್ದು ಇಷ್ಟಪಟ್ಟಿದ್ದು ಮಾತ್ರ 'ಚೌಕ' ಚಿತ್ರದ ರಾಬರ್ಟ್ ಪಾತ್ರದಲ್ಲಿ. ಹಾಗಾಗಿ ಈ ಟೈಟಲನ್ನ 'ಹೆಬ್ಬುಲಿ' ಚಿತ್ರದ ನಿರ್ಮಾಪಕ ಉಮಾಪತಿ ಫಿಲ್ಮ್ ಚೇಂಬರ್​ನಲ್ಲಿ ನೋಂದಣಿ ಮಾಡಿಸಿದ್ದಾರೆ. ಈ ಹೆಸರು ಮತ್ತು ಪಾತ್ರವನ್ನ ಸೃಷ್ಟಿ ಮಾಡಿದ್ದು, ತರುಣ್ ಸುಧೀರ್ ಆದ್ದರಿಂದ ಈ ಟೈಟಲ್‍ಗೆ ತಕ್ಕಂತೆ ಕಥೆ ಬರೆಯೋದು, ಸಿನಿಮಾ ಮಾಡೋದು ಅವರ ಕೈಯಲ್ಲೇ ಇದೆ.

ಅದು ಬಿಟ್ಟರೆ ಇನ್ನೊಂದು ಆಸಕ್ತಿಕರ ಶೀರ್ಷಿಕೆ ದರ್ಶನ್ ಅವರನ್ನ ಆಕರ್ಷಿಸಿದೆ. ಅದರ ಹೆಸರು 'ಕಾಟೇರ'. ಉತ್ತರ ಕರ್ನಾಟಕದ ಅಕಾಡ ಪೈಲ್ವಾನ್ ಆಗಿದ್ದವr ಕಥೆಯಂತೆ ಅದು. ಒಂದು ದಿನದಲ್ಲಿ 2 ಕೋಳಿ, ಸುಮಾರು 35 ಚಪಾತಿ ತಿಂದು, ಲೀಟರುಗಟ್ಟಲೆ ಹಾಲು ಕುಡಿಯುತ್ತಿದ್ದ, ಈ ಜಟ್ಟಿ ಫೀಲ್ಡಿಗಿಳಿದರೆ ಎದುರುಗಡೆ ತೊಡೆತಟ್ಟೊ ಗಂಡಸು ಯಾರು ಇರುತ್ತಿರಲಿಲ್ಲವಂತೆ. ಪೈಲ್ವಾನ್ ಒಬ್ಬನ ಈ ಜೀವನಾಧಾರಿತ ಪಾತ್ರವಂತೂ ದರ್ಶನ್‍ಗೆ ಸಿಕ್ಕಾಪಟ್ಟೆ ಹುಚ್ಚು ಹಿಡಿಸಿಬಿಟ್ಟಿದೆ. ಬಹುಶಹಃ ಮುಂದೆ ಇದೇ ಪಾತ್ರವನ್ನ, ಚಿತ್ರವನ್ನಾಗಿ ದರ್ಶನ್ ಮಾಡಲಿದ್ದಾರೆ ಅನ್ನೋ ಸುದ್ದಿಯೂ ಕೇಳಿ ಬರುತ್ತಿದೆ.

ದರ್ಶನ್ ಅವರ ಹೆಸರಿನ ಮುಂದೆ ಚಾಲೆಂಜಿಂಗ್ ಸ್ಟಾರ್ ಅನ್ನೋ ಬಿರುದನ್ನ ಅವರ ಅಭಿಮಾನಿಗಳೇ ಕೊಟ್ಟಿದ್ದಾರೆ. ಹಾಗಾಗಿ ದರ್ಶನ್ ಅವರಿಗೂ ರೆಗ್ಯೂಲರ್ ಮಸಾಲೆ ಚಿತ್ರಗಳಿಂದ ಹೊರಬಂದು ಹೊಸದಾಗಿರೊ ಪಾತ್ರಗಳನ್ನ ಮಾಡೊ ಆಸೆ ಇದೆ. ಹೊಸ ನಿರ್ದೇಶಕ ನಿರ್ಮಾಪಕರು ಇಂತಹ ಪಾತ್ರಗಳನ್ನ ದರ್ಶನ್ ಅವರ ಮುಂದಿಟ್ಟರೆ ಖಂಡಿತವಾಗಿ ಈ ಸುಲ್ತಾನ್ ಅದನ್ನ ಸವಾಲಾಗಿ ಸ್ವೀಕರಿಸಿ ಹೂಂಕರಿಸಿಬಿಡುತ್ತಾರೆ.
First published: July 24, 2018, 6:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading