ಡಿಬಾಸ್ ನಾಯಕಿಗೆ ಜೂ.ಎನ್​ಟಿಆರ್​ ಫ್ಯಾನ್ಸ್​ನಿಂದ ಅತ್ಯಾಚಾರ ಧಮಕಿ!; ನಾಯಕಿಯ ರೇಟ್ ಕೇಳಿದವರ ವಿರುದ್ಧ ದೂರು

Meera Chopra: ಸೋಷಿಯಲ್ ಮೀಡಿಯಾಗಳು ಬಂದು ಅಭಿಮಾನಿಗಳು ಹಾಗೂ ಸ್ಟಾರ್​ಗಳನ್ನು ಹತ್ತಿರ ತಂದಿದ್ದೇನೋ ನಿಜ. ಆದರೆ ವಿವಾದಗಳಿಗೂ ವೇದಿಕೆಯಾಗಿವೆ. ಅದಕ್ಕೆ ಹೊಸ ಸೇರ್ಪಡೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸೋದರ ಸಂಬಂಧಿ ಮೀರಾ ಚೋಪ್ರಾ ಹಾಗೂ ಜ್ಯೂ. ಎನ್​ಟಿಆರ್ ಅಭಿಮಾನಿಗಳು.

ಮೀರಾ ಚೋಪ್ರಾ

ಮೀರಾ ಚೋಪ್ರಾ

  • Share this:
2008ರಲ್ಲಿ ಕನ್ನಡದ ಅರ್ಜುನ್ ಸಿನಿಮಾ ಸೇರಿದಂತೆ 15ಕ್ಕೂ ಹೆಚ್ಚು ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಮಿಂಚಿದ್ದಾರೆ ನಟಿ ಮೀರಾ ಚೋಪ್ರಾ. ಎಲ್ಲ ಸೆಲೆಬ್ರಿಟಿಗಳಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಕೊಂಚ ಆಕ್ಟಿವ್ ಇರುವ ಮೀರಾ ಚೋಪ್ರಾ ಇತ್ತೀಚೆಗಷ್ಟೇ ಅಭಿಮಾನಿಗಳ ಜತೆ ಚರ್ಚೆಗಿಳಿದಿದ್ದರು. ಟ್ವಿಟ್ಟರ್​ನಲ್ಲಿ ಪ್ರಶ್ನೆಗಳನ್ನು ಕೇಳಿ ಉತ್ತರಿಸುವೆ ಎಂದು ಮೊಬೈಲ್ ಹಿಡಿದು ಕುಳಿತಿದ್ದರು. ಅದಕ್ಕೆಂದೇ ಟ್ವಿಟರ್​​ನಲ್ಲಿ ಆಸ್ಕ್ ಮೀರಾ ಅಂತ ಹ್ಯಾಶ್​​ಟ್ಯಾಗ್​ನೊಂದಿಗೆ ಅಭಿಮಾನಿಗಳ ಜತೆ ಮಾತುಕತೆಗೆ ಇಳಿದಿದ್ದರು ಮೀರಾ ಚೋಪ್ರಾ.

ಫ್ಯಾನ್ಸ್ ಕೂಡ ಅವರ ಇಷ್ಟವೇನು? ಕಷ್ಟವೇನು? ಲಾಕ್​ಡೌನ್ ಲೈಫ್ ಹೇಗಿದೆ? ಮುಂದಿನ ಸಿನಿಮಾ ಯಾವುದು ಅಂತ ಹಲವು ಪ್ರಶ್ನೆಗಳನ್ನು ಕೇಳಿದರು. ಎಲ್ಲದಕ್ಕೂ ಉತ್ತರಿಸುತ್ತಿದ್ದ ಮೀರಾಗೆ, ಅಭಿಮಾನಿಯೊಬ್ಬ ಜೂ. ಎನ್​ಟಿಆರ್ ಬಗ್ಗೆ ಪ್ರಶ್ನಿಸಿದ, ಪ್ರಿನ್ಸ್ ಮಹೇಶ್ ಇಷ್ಟಾನೋ, ಜೂ. ಎನ್​ಟಿಆರ್ ಇಷ್ಟಾನೋ ಅಂತನೂ ಕೇಳಿದೆ. ಅದಕ್ಕೆ ಉತ್ತರಿಸಿದ ಮೀರಾ, ‘ನನಗೆ ಜೂ, ಎನ್​ಟಿಆರ್ ಯಾರು ಎಂದು ಗೊತ್ತಿಲ್ಲ. ಅವರ ಸಿನಿಮಾನೂ ನೋಡಿಲ್ಲ. ಆದರೆ ಪ್ರಿನ್ಸ್ ಅಂದರೆ ನನಗೆ ತುಂಬಾ ಇಷ್ಟ’ ಅಂತ ಉತ್ತರಿಸಿದರು.

ಮೀರಾ ಚೋಪ್ರಾರ ಈ ಉತ್ತರ ವೈರಲ್ ಆಗುತ್ತಿದ್ದಂತೆಯೇ ಗುಡುಗು, ಸಿಡಿಲು, ಭೂಕಂಪ, ಬಿರುಗಾಳಿ ಎಲ್ಲವೂ ಒಮ್ಮೆಲೇ ಎದ್ದುಬಿಟ್ಟವು. ತಾರಕ್ ಫ್ಯಾನ್ಸ್ ಮೀರಾ ಮೇಲೆ ಮುಗಿಬಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ನಿನ್ನ ರೇಟ್ ಎಷ್ಟು? ಅಂತೆಲ್ಲಾ ಅಶ್ಲೀಲವಾಗಿ ಟ್ವೀಟಿಸಿ, ಅತ್ಯಾಚಾರದ ಧಮಕಿಯನ್ನೂ ಹಾಕಿಬಿಟ್ಟರು.

ಇದನ್ನೂ ಓದಿ: ಮಹೇಶ್ ಬಾಬು ಹೊಸ ಸಿನಿಮಾ; ರಾಮೋಜಿ ಸ್ಟುಡಿಯೋದಲ್ಲಿ ತಲೆ ಎತ್ತಲಿದೆ ಕ್ಯಾಸಿನೋ ಸೆಟ್

ಈ ಹಠಾತ್ ದಾಳಿಯಿಂದ ಪ್ರಾರಂಭದಲ್ಲಿ ಶಾಕ್ ಆದರೂ, ಕೆಲ ನಿಮಿಷಗಳಲ್ಲೇ ಎಚ್ಚೆತ್ತುಕೊಂಡರು ಮೀರಾ ಚೋಪ್ರಾ. ಖುದ್ದು ಜೂನಿಯರ್ ಎನ್​ಟಿಆರ್ ಟ್ಯಾಗ್ ಮಾಡಿ, ನಾನೇನು ತಪ್ಪು ಮಾಡಿದೆ ಅಂತ ನಿಮ್ಮ ಅಭಿಮಾನಿಗಳು ನನ್ನನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ನಿಮಗಿಂತ ಪ್ರಿನ್ಸ್ ಮಹೇಶ್ ಬಾಬು ಇಷ್ಟ ಅಂತ ಹೇಳಿದ್ದೇ ತಪ್ಪಾ? ನೀವಾದರೂ ನಿಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಿ ಅಂತ ಟ್ವೀಟಿಸಿದರು.ಜತೆಗೆ ಹೈದರಾಬಾದ್ ಪೊಲೀಸ್ ಮತ್ತು ಸೈಬರ್ ಕ್ರೈಮ್​ಗೂ ಟ್ವಿಟರ್​ನಲ್ಲಿಯೇ ದೂರು ನೀಡಿದರು. ಅಶ್ಲೀಲವಾಗಿ ಬಂದಿದ್ದ ಟ್ವೀಟ್​​ಗಳ ಸ್ಕ್ರೀನ್ ಶಾಟ್ ಹಾಗೂ ಲಿಂಕ್​ಗಳನ್ನು ಶೇರ್ ಮಾಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಮೀರಾ ಜತೆ ನಿಂತ ಕೆಲ ಸೆಲೆಬ್ರಿಟಿಗಳು ಮತ್ತು ಟ್ವೀಟಿಗರು, ವೀ ಸಪೋರ್ಟ್ ಮೀರಾ ಚೋಪ್ರಾ ಹ್ಯಾಶ್ಟ್ಯಾಗ್ ಸೃಷ್ಟಿಸಿ, ಟ್ವಿಟರ್​​ನಲ್ಲಿ ಟ್ವೀಟ್​ ಮಾಡಿದ್ದಾರೆ.


First published: