DBoss Darshan: ಅಗಲಿದ ಅಭಿಮಾನಿಯ ಕುಟುಂಬಕ್ಕೆ ಆಸರೆಯಾದ ಒಡೆಯ ದರ್ಶನ್​!

DBoss Darshan: ಈ ಬಾರಿ ವಿನೀಶ್ ಹುಟ್ಟುಹಬ್ಬದಂದು ಅಗಲಿದ ಅಭಿಮಾನಿ ರಾಕೇಶ್ ಕುಟುಂಬದವರನ್ನು ಮನೆಗೇ ಕರೆಸಿಕೊಂಡಿದ್ದರು ದರ್ಶನ್. ರಾಕೇಶ್‍ಗೆ ಇಬ್ಬರು ಸಹೋದರಿಯರಿದ್ದು, ಅವರ ಮದುವೆಯ ಖರ್ಚನ್ನು ತಾವೇ ವಹಿಸಿಕೊಳ್ಳುವುದಾಗಿ ಮೃತ ರಾಕೇಶ್ ಪೋಷಕರಿಗೆ ಧೈರ್ಯ ತುಂಬಿ ಕಳಿಸಿದ್ದಾರಂತೆ.

Anitha E | news18-kannada
Updated:November 8, 2019, 2:22 PM IST
DBoss Darshan: ಅಗಲಿದ ಅಭಿಮಾನಿಯ ಕುಟುಂಬಕ್ಕೆ ಆಸರೆಯಾದ ಒಡೆಯ ದರ್ಶನ್​!
DBoss Darshan: ಈ ಬಾರಿ ವಿನೀಶ್ ಹುಟ್ಟುಹಬ್ಬದಂದು ಅಗಲಿದ ಅಭಿಮಾನಿ ರಾಕೇಶ್ ಕುಟುಂಬದವರನ್ನು ಮನೆಗೇ ಕರೆಸಿಕೊಂಡಿದ್ದರು ದರ್ಶನ್. ರಾಕೇಶ್‍ಗೆ ಇಬ್ಬರು ಸಹೋದರಿಯರಿದ್ದು, ಅವರ ಮದುವೆಯ ಖರ್ಚನ್ನು ತಾವೇ ವಹಿಸಿಕೊಳ್ಳುವುದಾಗಿ ಮೃತ ರಾಕೇಶ್ ಪೋಷಕರಿಗೆ ಧೈರ್ಯ ತುಂಬಿ ಕಳಿಸಿದ್ದಾರಂತೆ.
  • Share this:
ದಚ್ಚು ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ಕಷ್ಟ ಎಂದು ಬಂದವರ ಪಾಲಿನ ಕರುಣಾಮಯಿ. ಯಾಕಂದ್ರೆ ಕಷ್ಟ ಅಂತ ಬರೋರಿಗೆ ಸಹಾಯ ಮಾಡುವ ದೊಡ್ಡ ಗುಣ ದರ್ಶನ್‍ ಅವರದು. ಈ ಹಿಂದೆ ಸಾಕಷ್ಟು ಬಾರಿ ಸಹಾಯ ಕೋರಿ ಬಂದವರಿಗೆ ಸಹಾಯ ಹಸ್ತ ಚಾಚಿರುವ ಉದಾಹರಣೆಗಳಿವೆ.

ಅಭಿಮಾನಿಗಳ ದಾಸ ದರ್ಶನ್​. ದಾಸನಿಗೆ ಅಭಿಮಾನಿಗಳೆಂದರೆ ಸೆಲೆಬ್ರಿಟಿಗಳು. ಇಂತಹ  ಅನಿನಾಭಾವ ಸಂಬಂಧ ಇರುವ ದರ್ಶನ್​ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ವನ್ಯ ಜೀವಿಗಳನ್ನು ದತ್ತು ಪಡೆಯುವುದು, ಅರಣ್ಯ ಇಲಾಖೆಯಲ್ಲಿನ ಗುತ್ತಿಗೆ  ನೌಕರರಿಗೆ ಸಹಾಯ ಹಸ್ತ ಚಾಚುವುದು ಸೇರಿದಂತೆ ಇನ್ನೂ ಹತ್ತು ಹಲವಾರು ಕೆಲಸಗಳಿಗೆ ಧನ ಸಹಾಯ ಮಾಡಿದ್ದಾರೆ.

ಹುಟ್ಟುಹಬ್ಬ ಸಂಭ್ರಮದಲ್ಲಿ ದರ್ಶನ್​ (ಸಾಂದರ್ಭಿಕ ಚಿತ್ರ)


ಹೀಗಿರುವಾಗ ಕಷ್ಟದಲ್ಲಿರುವ ತನ್ನ ಅಭಿಮಾನಿಯ ಕುಟುಂಬಕ್ಕೆ ನೆರವಾಗುವ ವಿಷಯ ಬಂದಾಗ ಕೇಳಬೇಕ. ಹಿಂದೆ ಮುಂದೆ ಯೋಚಿಸದೆ ಆ ಕುಟುಂಬಕ್ಕೆ ಅಗತ್ಯ ನೆರವನ್ನು ನೀಡುತ್ತಾರೆ.

ಕೇವಲ ಡಿಬಾಸ್ ಮಾತ್ರವಲ್ಲ ಅವರ ಮಗ ವಿನೀಶ್ ಹುಟ್ಟುಹಬ್ಬವನ್ನೂ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಾರೆ. ಜ್ಯೂನಿಯರ್ ಚಾಲೆಂಜಿಂಗ್ ಸ್ಟಾರ್ ಹುಟ್ಟುಹಬ್ಬದ  ದಿನವೂ, ಡಿಬಾಸ್ ಮನೆಗೆ ಬಂದು ಕೇಕ್ ಕಟ್ ಮಾಡಿಸಿ ಸಂಭ್ರಮಿಸ್ತಾರೆ. ಅಷ್ಟರ ಮಟ್ಟಿಗೆ ದಚ್ಚು ಅಭಿಮಾನಿಗಳು, ತಮ್ಮ ನೆಚ್ಚಿನ ನಟ ಹಾಗೂ ಅವರ ಕುಟುಂಬದವರನ್ನು ಪ್ರೀತಿಸುತ್ತಾರೆ.

ವಿನೀಶ್​ ದರ್ಶನ್​


Happy birthday vineesh
ವಿನೀಶ್​ ದರ್ಶನ್​
2018ರ ಅಂದರೆ ಕಳೆದ ವರ್ಷ ವಿನೀಶ್ ಹುಟ್ಟುಹಬ್ಬದಂದು ವಿಶ್ ಮಾಡಲು ರಾಕೇಶ್ ಎಂಬ ಅಭಿಮಾನಿ ಬಂದಿದ್ದ. ವಿನೀಶ್‍ಗೆ ಶುಭಹಾರೈಸಿ ವಾಪಸ್ ತೆರಳುವಾಗ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಆಗ ರಾಕೇಶ್ ಕುಟುಂಬದವರಿಗೆ ದಚ್ಚು, ಎರಡು ಲಕ್ಷ ರೂಪಾಯಿ ಧನಸಹಾಯ ಮಾಡಿದ್ದರು. ಮುಂದೆಯೂ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ಭರವಸೆ ನೀಡಿದ್ದರು.

ಇದನ್ನೂ ಓದಿ: Odeya Hey Odeya Song: ದೇಹಿ ಅನ್ನೋರ ಕಾಯುವವನೇ ಈ ಒಡೆಯ: ಟೈಟಲ್​ ಟ್ರ್ಯಾಕ್​​ ಸಿಕ್ಕಿದೆ ಭರ್ಜರಿ ರೆಸ್ಪಾನ್ಸ್​..!

ಇನ್ನು ಈ ಬಾರಿ ವಿನೀಶ್ ಹುಟ್ಟುಹಬ್ಬದಂದು ಅಗಲಿದ ಅಭಿಮಾನಿ ರಾಕೇಶ್ ಕುಟುಂಬದವರನ್ನು ಮನೆಗೇ ಕರೆಸಿಕೊಂಡಿದ್ದರು ದರ್ಶನ್. ರಾಕೇಶ್‍ಗೆ ಇಬ್ಬರು ಸಹೋದರಿಯರಿದ್ದು, ಅವರ ಮದುವೆಯ ಖರ್ಚನ್ನು ತಾವೇ ವಹಿಸಿಕೊಳ್ಳುವುದಾಗಿ ಮೃತ ರಾಕೇಶ್ ಪೋಷಕರಿಗೆ ಧೈರ್ಯ ತುಂಬಿ ಕಳಿಸಿದ್ದಾರಂತೆ.

 ಅಷ್ಟೇ ಅಲ್ಲ ವಿನೀಶ್ ಹುಟ್ಟುಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗಾಗಿ ಒಂದು ಪೋಸ್ಟ್ ಮಾಡಿದ್ದರು.ಶುಭ ಕೋರಲು ಬರುವ ಅಭಿಮಾನಿಗಳಿಗೆ ದ್ವಿಚಕ್ರ ವಾಹನಗಳಲ್ಲಿ ಓಡಾಡುವಾಗ ಎಚ್ಚರ ವಹಿಸುವಂತೆ ಮನವಿ ಮಾಡಿದ್ದರು.ಗಾಡಿಯಲ್ಲಿ ಚಲಿಸುವಾಗ ದಯಮಾಡಿ  ಜಾಗರೂಕತೆಯಿಂದ ಓಡಿಸಿ. ದೂರದಿಂದ ಬರುವಾಗ ಆದಷ್ಟು ದ್ವಿಚಕ್ರವಾಹನ ಬಳಸುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದರು.

Katrina Kaif: ಮೊದಲ ಬಾರಿಗೆ ಸಿಕ್ಕಾಪಟ್ಟೆ ಹಾಟ್​ ಆಗಿ ಫೋಟೋಶೂಟ್​ಗೆ ಪೋಸ್ ಕೊಟ್ಟ ರಿಸ್ಕ್​ ಟೇಕರ್​ ಕತ್ರಿನಾ ಕೈಫ್ ​​..!

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading