ವಿಕಲಚೇತನ ಅಭಿಮಾನಿಯೊಂದಿಗೆ ಊಟ ಮಾಡಿದ ದರ್ಶನ್​..!

news18
Updated:August 6, 2018, 6:30 PM IST
ವಿಕಲಚೇತನ ಅಭಿಮಾನಿಯೊಂದಿಗೆ ಊಟ ಮಾಡಿದ ದರ್ಶನ್​..!
news18
Updated: August 6, 2018, 6:30 PM IST
ನ್ಯೂಸ್​ 18 ಕನ್ನಡ 

ದರ್ಶನ್​ ಯಾರಿಗೆ, ಎಲ್ಲಿ, ಹೇಗೆ ಸಿಗುತ್ತಾರೋ ಗೊತ್ತಿಲ್ಲ. ಆದರೆ ಅವರ ಅಭಿಮಾನಿಗಳಿಗೆ ಮಾತ್ರ ಯಾವಾಗಲೂ ಲಭ್ಯವಿರುತ್ತಾರೆ. ಅದರಲ್ಲೂ ಅವರನ್ನು ಇಷ್ಟಪಡುವ ಹಾಗೂ ಕಷ್ಟದಲ್ಲಿರುವ ಅಭಿಮಾನಿಗಳನ್ನು ಮಾತ್ರ ಎಲ್ಲರಿಗಿಂತ ಮೊದಲು ಭೇಟಿ ಮಾಡುತ್ತಾರೆ. ಅದರಲ್ಲೂ ಕಷ್ಟದಲ್ಲಿರುವ ಅಭಿಮಾನಿಗಳಿಗಾಗಿ ಚಿತ್ರೀಕರಣವನ್ನೇ ನಿಲ್ಲಿಸುತ್ತಾರೆ.

ದರ್ಶನ್​ ಅವರಿಗೂ ಮೈಸೂರಿಗೂ ಬಿಡಿಸಲಾಗದ ನಂಟಿದೆ. ವೃತ್ತಿಯಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ ನಂತರ ಅಲ್ಲಿಯೇ ಒಂದು ತೋಟವನ್ನು ತೆಗೆದುಕೊಂಡು ಮನೆಯನ್ನೂ ಮಾಡಿಕೊಂಡಿದ್ದಾರೆ. ಬಿಡುವಿದ್ದಾಗಲೆಲ್ಲ ದರ್ಶನ್​ ಅಲ್ಲಿಗೆ ಭೇಟಿ ನೀಡುತ್ತಾರೆ. ಇತ್ತೀಚೆಗಷ್ಟೆ ಮೈಸೂರಿನ ತೋಟದ ಮನೆಯಗೆ ಹೋಗಿದ್ದಾಗ ಅಲ್ಲಿ  ವಿಕಲಚೇತನ ಅಭಿಮಾನಿಯೊಬ್ಬರನ್ನ ಭೇಟಿ ಮಾಡಿದ್ದಾರೆ. ಅಲ್ಲದೇ ಅವರೊಂದಿಗೆ ಊಟ ಕೂಡ ಮಾಡಿ ಸೆಲ್ಫಿಯನ್ನು ತೆಗೆಸಿಕೊಂಡಿದ್ದಾರೆ.

Loading...ಕೇವಲ ಈಗ ಮಾತ್ರವಲ್ಲದೆ ದರ್ಶನ್​ ಈ ಹಿಂದೆ ಸಹ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಅಭಿಮಾನಿಯೊಬ್ಬರಿಗಾಗಿ ದರ್ಶನ್​ ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸಿದ್ದರು.  ಅಷ್ಟೇಅಲ್ಲದೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಅಭಿಮಾನಿಯೊಬ್ಬರಿಗೆ ವಿಡಿಯೋ ಕಾಲ್​ ಮಾಡುವ ಮೂಲಕ, ಅವರ ಆಸೆಯನ್ನೂ ಪೂರೈಸಿದ್ದರು.

 
First published:August 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ