Roberrt: ಟಾಲಿವುಡ್​ನಲ್ಲಿ ರಾಬರ್ಟ್ ಸಿನಿಮಾ ರಿಲೀಸ್​ಗೆ ಅಡ್ಡಿ: ನಿರ್ಮಾಪಕ ಉಮಾಪತಿ ಪರ ನಿಂತ ದರ್ಶನ್​..!

ರಾಬರ್ಟ್​ ಸಿನಿಮಾದ ರಿಲೀಸ್​ಗೆ ಟಾಲಿವುಡ್​ನಲ್ಲಿ ಸಮಸ್ಯೆ ಎದುರಾಗಿದ್ದು, ಈ ಕುರಿತಾಗಿ ನಟ ದರ್ಶನ್​ ಮಾತನಾಡಿದ್ದಾರೆ. ನಿರ್ಮಾಪಕರು ಅನ್ನ ಹಾಕೋರು. ಸಮಸ್ಯೆ ಎದುರಾದಾಗ ನಾವು ನಿಲ್ಲಬೇಕಾಗುತ್ತದೆ. ಹೊಸಬರಿಗೆ ತೊಂದರೆ ಆಗಬಾರದು.  ನಮ್ಮದು ಬಿಡಿ 50 ಸಿನಿಮಾ ಆಯ್ತು. ಯುವ ಸ್ಟಾರ್​ಗಳ ಪರಿಸ್ಥಿತಿ ಹೇಗೆ ಎಂದಿದ್ದಾರೆ.

ದರ್ಶನ್​

ದರ್ಶನ್​

  • Share this:
ದರ್ಶನ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್​ ಕನ್ನಡದ ಜೊತೆ ತೆಲುಗಿನಲ್ಲೂ ರಿಲೀಸ್ ಆಗಲಿದೆ. ಈ ಹಿಂದೆ ಕುರುಕ್ಷೇತ್ರ ಸಿನಿಮಾದ ರಿಲೀಸ್​ ವೇಳೆ ದರ್ಶನ್​ ಅವರಿಗೆ ಟಾಲಿವುಡ್​ನಲ್ಲೂ ಎಷ್ಟು ದೊಡ್ಡ ಅಭಿಮಾನಿ ಬಳಗವಿದೆ ಅನ್ನೋದು ಗೊತ್ತಾಗಿತ್ತು. ದರ್ಶನ್​ ಅವರ ಸಿನಿಮಾ ರಾಬರ್ಟ್​ ಅನ್ನು ಒಂದೇ ದಿನದಂದು ಅಂದರೆ ಮಾರ್ಚ್​ 11ಕ್ಕೆ ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್​ ಮಾಡಲು ಚಿತ್ರತಂಡ ಈ ಹಿಂದೆಯೇ ನಿರ್ಧರಿಸಿತ್ತು. ಈ ವಿಷಯವಾಗಿ ಈ ಹಿಂದೆ ಮಾತನಾಡಿದ್ದಾಗ ತೆಲುಗು ಸಿನಿಮಾ ವಿತರಕರು ಒಪ್ಪಿಕೊಂಡಿದ್ದರು. ಆದರೆ ಈಗ ರಾಬರ್ಟ್​ ಸಿನಿಮಾ ರಿಲೀಸ್​ಗೆ ತೊಂದರೆ ಮಾಡುತ್ತಿದ್ದಾರೆ. ಈ ಕುರಿತಾಗಿ ನಟ ದರ್ಶನ್​ ಹಾಗೂ ರಾಬರ್ಟ್​ ಸಿನಿಮಾದ ನಿರ್ಮಾಪಕ ಉಮಾಪತಿ  ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಈ ಕುರಿತಾಗಿ ಇಂದು ವಾಣಿಜ್ಯ ಮಂಡಳಿಯ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಸೇರಿ ಸಭೆ ನಡೆಸಿ ಚರ್ಚಿಸಿದ್ದಾರೆ. ರಾಬರ್ಟ್​ ಸಿನಿಮಾಗೆ ಎದುರಾಗಿರುವ ಸಮಸ್ಯೆ ಬಗೆಹರಿಸುವ ಕುರಿತು ಭರವಸೆ ಸಹ ನೀಡಿದ್ದಾರೆ. 

ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫಿಲಂ ಚೇಂಬರ್​ನ ಮಾಜಿ ಅಧ್ಯಕ್ಷ ಸಾ ರಾ ಗೋವಿಂದು, ಟಾಲಿವುಡ್​ನಲ್ಲಿ  ದೊಡ್ಡ ಸಿನಿಮಾಗಳು ಬರ್ತಿವೆ, ಕ್ಲ್ಯಾಶ್ ಆಗಲಿದೆ ಅಂತ ಅವರು ಹೇಳಿದ್ದಾರೆ. ಹಾಗೆಂದು ಕನ್ನಡ ಸಿನಿಮಾ ಮಾಡೋದಿಲ್ಲ ಅಂತ ಅಲ್ಲಿನ ವಿತರಕರು  ಹೇಳ್ತಿಲ್ಲ ಎಂದಿದ್ದಾರೆ.

Darshan, Darshan visits to Film Chamber, Darshan upset to Telugu film Industry, Darshan complaint Against Telugu Industry, ದರ್ಶನ್, ಫಿಲ್ಮ್ ಛೇಂಬರ್ ಗೆ ಎಂಟ್ರಿ ಕೊಟ್ಟ ದರ್ಶನ್, ತೆಲುಗು ಚಿತ್ರರಂಗದ ವಿರುದ್ಧ ದೂರ, ತೆಲುಗು ಸಿನಿಮಾರಂಗದ ವಿರುದ್ಧ ದರ್ಶನ್ ಗರಂ, Roberrt movie New Poster, Roberrt New Poster, Darshan will be coming live facebook, Special Announcement by Darshan, Darshan facebook live, Darshan movies, ದರ್ಶನ್ ಫೇಸ್‌ಬುಕ್ ಲೈವ್, ಫೇಸ್‌ಬುಕ್‌ನಲ್ಲಿ ದರ್ಶನ್ ಲೈವ್, ದರ್ಶನ್ ಸಿನಿಮಾಗಳು, darshan movie Roberrt, Tharun Sudhir Birthday, Tharun Sudhir Birthday october 9th, ದರ್ಶನ್ ರಾಬರ್ಟ್, ರಾಬರ್ಟ್ ಹೊಸ ಪೋಸ್ಟರ್, ತರುಣ್ ಸುಧೀರ್ ಹುಟ್ಟುಹಬ್ಬ, Darshan starrer Robberrt movie team releasing new poster tomorrow on Tharun Sudhirs birthday, Roberrt teaser crossed 5 million views, Roberrt teaser, darshan movie Roberrt, Roberrt teaser crosses 5 million, darshan tweet on robert, ದರ್ಶನ್ ರಾಬರ್ಟ್ ಟೀಸರ್, ದರ್ಶನ್ ಸಿನಿಮಾ ರಾಬರ್ಟ್, Roberrt Poster, Roberrt Poster release, Darshan Twitter, Roberrt Movie, Roberrt Release, Roberrt News, Roberrt latest, Roberrt shooting, Roberrt release date, Darshan, D Boss darshan, Upamathi, Umapathi S Gowda, Roberrt producer, Tharun Sudhir, Roberrt Trailer, Roberrt Songs, Roberrt release date, ರಾಬರ್ಟ್, ದರ್ಶನ್, ಉಮಾಪತಿ, ತರುಣ್ ಸುಧೀರ್
ರಾಬರ್ಟ್​ ನಿರ್ಮಾಪಕ ಉಮಾಪತಿ ನೀಡಿರುವ ದೂರಿನ ಪ್ರತಿ


ನಾವು ಬಗೆಹರಿಸೋ ಪ್ರಯತ್ನ ಮಾಡ್ತೇವೆ. ಅಲ್ಲಿನ ಏನು ನಡೆಯುತ್ತಿದೆ. ಸತ್ಯ ಏನೆಂದು ತಿಳಿದುಕೊಂಡ ಮೇಲೆ ಏನು ಮಾಡುವುದು ಎಂದು ನಿರ್ಧರಿಸುತ್ತೇವೆ.  ನಿನ್ನೆಯಿಂದ ರಾಬರ್ಟ್ ಸಿನಿಮಾದ ಸಮಸ್ಯೆ ಬಗ್ಗೆ ನಿರ್ಮಾಪಕರು ತಿಳಿಸಿದ್ದಾರೆ. ಇವತ್ತು ಸ್ವತಃ ದರ್ಶನ್ ಅವರೇ ನಿರ್ಮಾಪಕರ ಜೊತೆ ಬಮದು ದೂರು ನೀಡಿದ್ದಾರೆ ಎಂದು ಸಾ ರಾ ಗೋವಿಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಇಂದು ಸಂಜೆ ರಿವೀಲ್​ ಆಗಲಿದೆ ಕೆಜಿಎಫ್​ ಚಾಪ್ಟರ್​ 2 ಸಿನಿಮಾದ ರಿಲೀಸ್​ ದಿನಾಂಕ

ಈ ಹಿಂದೆ ಕನ್ನಡ ವಾಣಿಜ್ಯ ಮಂಡಳಿ ನಿಯಮವೊಂದನ್ನ ಮಾಡಿತ್ತು. ಆದರೆ, ಕಾನೂನಿನ ತೊಡಕು ಎದುರಾದ ಕಾರಣ, ಎಲ್ಲ ಭಾಷೆ ಸಿನಿಮಾಗಳಿಗೂ ಅವಕಾಶ ನೀಡಲಾಗುತ್ತಿದೆ.
ರಾಬರ್ಟ್ ನಿರ್ಮಾಪಕ ಉಮಾಪತಿ, ಜಗದೀಶ್ ಎಂಬುವವರನ್ನ ಭೇಟಿ ಮಾಡಿದ್ದು,  ರಾಬರ್ಟ್ ರಿಲೀಸ್ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆಗ ಒಪ್ಪಿಕೊಂಡಿದ್ದ ವಿತರಕರು ಈಗ ಹಿಂದೇಟು ಹಾಕ್ತಿದ್ದಾರೆ. ಆದರೆ, ಯಾವ ನಿರ್ಮಾಪಕರು ರಾಬರ್ಟ್​ಗೆ ತೊಂದರೆ ಮಾಡಿಲ್ಲ. ಅಲ್ಲಿನ ನಿರ್ಮಾಪಕ ಸಂಘದ ಅದ್ಯಕ್ಷರ ಜೊತೆ ನಾನು ಮಾತನಾಡಿದ್ದೇನೆ. ಅವರು ಹೇಳಿದ್ದಾರೆ ಯಾವ ರೀತಿಯ ತೊಂದರೆ ಆಗುವುದಿಲ್ಲ ಎಂದು. ಯಾರೋ ಒಬ್ಬ ಮೂರನೇ ವ್ಯಕ್ತಿ ಅಷ್ಟೇ ಈ ರೀತಿ ಹೇಳಿರೋದು. ದಕ್ಷಿಣ ಭಾರತದ ಫಿಲಂ ಚೇಂಬರ್ ಅದ್ಯಕ್ಷರ ಜೊತೆ ಸಹ ಮಾತನಾಡಿದ್ದೇನೆ. ಅವರೂ ಸಹ ಭರವಸೆ ಕೊಟ್ಟಿದ್ದಾರೆ ಎಂದು ವಿವರಿಸಿದ್ದಾರೆ ಅವರು.

ಈ ಹಿಂದೆ ನಾವು ನಿರ್ಧಾರ ಮಾಡಿದ್ದೆವು. ಏಳು ವಾರಗಳ ನಂತರ ಪರಭಾಷೆಗೆ ಅವಕಾಶ ಅಂತ. ಆದರೆ ಅದು ಕಾನೂನಿನ ಪ್ರಕಾರ ಅದನ್ನು ಮುಂದುವರೆಸಲು ಆಗಲಿಲ್ಲ.  ಕಾನೂನಿನ ಪ್ರಕಾರ ಅವರೂ ಸಹ ತೊಂದರೆ ಮಾಡಲು ಆಗುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ. ಹೀಗಾಗಿ ಅಲ್ಲಿ ತೊಂದರೆ ಆಗೋಕೆ ಸಾಧ್ಯನೇ ಇಲ್ಲ. ತೆಲುಗು ನೆಲದಲ್ಲಿ ರಾಬರ್ಟ್ ರಿಲೀಸ್​ಗೆ ಅಡ್ಡಿಪಡಿಸಿದ್ರೆ, ನಾವು ಅದೇ ದಾರಿ ತುಳಿಯೋಕೆ ಅವಕಾಶ ಮಾಡಿಕೊಟ್ಟಂತೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ.





ಇದೇ ತಿಂಗಳ 31ಕ್ಕೆ ಚೆನ್ನೈನಲ್ಲಿ ಸೌತ್ ಇಂಡಿಯನ್ ಫಿಲಂ ಚೇಂಬರ್ ಸಭೆನಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷರು ಸೇರಿದಂತೆ, ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ. ಇಲ್ಲಿ ರಾಬರ್ಟ್​ ಸಿನಿಮಾಗೆ ಎದುರಾಗಿರುವ ಸಮಸ್ಯೆ ಬಗ್ಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Mayuri: ತುಂಬು ಗರ್ಭಿಣಿ ನಟಿ ಮಯೂರಿ ಬೇಬಿ ಬಂಪ್ ಫೋಟೋಶೂಟ್​

ನಂತರ ಮಾತನಾಡಿದ ದರ್ಶನ್​, ನಿರ್ಮಾಪಕರು ಅನ್ನ ಹಾಕೋರು. ಸಮಸ್ಯೆ ಎದುರಾದಾಗ ನಾವು ನಿಲ್ಲಬೇಕಾಗುತ್ತದೆ. ಹೊಸಬರಿಗೆ ತೊಂದರೆ ಆಗಬಾರದು.  ನಮ್ಮದು ಬಿಡಿ 50 ಸಿನಿಮಾ ಆಯ್ತು. ಯುವ ಸ್ಟಾರ್​ಗಳ ಪರಿಸ್ಥಿತಿ ಹೇಗೆ ಎಂದಿದ್ದಾರೆ​.
Published by:Anitha E
First published: