D boss: ದಾಸನಿಗೆ ಅಭಿಮಾನಿಗಳಿಂದ ಗಿಫ್ಟ್​; ದರ್ಶನ್​ಗಾಗಿ ಸೆಟ್ಟೇರಲಿದೆ ‘ಡಿ ಬಾಸ್​‘ ಸಿನಿಮಾ

Darshan; ‘ಡಿ ಬಾಸ್‘​ ಸಿನಿಮಾವನ್ನು ದರ್ಶನ್​ ಅಭಿಮಾನಿಯೊಬ್ಬರು ನಿರ್ಮಿಸುತ್ತಿದ್ದಾರೆ.

news18-kannada
Updated:October 12, 2019, 11:13 PM IST
D boss: ದಾಸನಿಗೆ ಅಭಿಮಾನಿಗಳಿಂದ ಗಿಫ್ಟ್​; ದರ್ಶನ್​ಗಾಗಿ ಸೆಟ್ಟೇರಲಿದೆ ‘ಡಿ ಬಾಸ್​‘ ಸಿನಿಮಾ
ಡಿ ಬಾಸ್
  • Share this:
ಚಾಲೆಂಜಿಗ್​​ ಸ್ಟಾರ್​​ ದರ್ಶನ್​ ಅವರಿಗೆ ಅಭಿಮಾನಿಗಳು ಕೊಟ್ಟ ಬಿರುದು ‘ಡಿ ಬಾಸ್​‘. ಇದೀಗ ಡಿ ಬಾಸ್​ ಟೈಟಲ್​ನಡಿ ಸಿನಿಮಾವೊಂದು ನಿರ್ಮಾಣವಾಗುತ್ತಿದ್ದು, ಅಭಿಮಾನಿಗಳಿಗಾಗಿ ಈ ಸಿನಿಮಾವನ್ನು ತರಲಾಗುತ್ತಿದೆ.

ಸ್ಯಾಂಡಲ್​ವುಡ್​ನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಅಂದರೆ ದರ್ಶನ್​. ಎಲ್ಲೇ ಹೋದರು ‘ಡಿ ಬಾಸ್‘​ ಫ್ಯಾನ್ಸ್​ಗಳೇ ರಾರಾಜಿಸುತ್ತಿರುತ್ತಾರೆ. ಸಾಮಾಜಿಕ ತಾಣದಲ್ಲೂ ನಟ ದರ್ಶನ್​ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಅಭಿಮಾನಿಗಳೇ ಪ್ರೀತಿಯ ದಾಸನಿಗೆ ನೀಡಿರುವ ‘ಬಿ ಬಾಸ್​‘ ಹೆಸರಿನ ಚಿತ್ರವೊಂದನ್ನು ತೆರೆ ಮೇಲೆ ತರುತ್ತಿದ್ದಾರೆ.

‘ಡಿ ಬಾಸ್‘​ ಸಿನಿಮಾವನ್ನು ದರ್ಶನ್​ ಅಭಿಮಾನಿಯೊಬ್ಬರು ನಿರ್ಮಿಸುತ್ತಿದ್ದಾರೆ. ಈ ಹಿಂದೆ 'ಮೂರು ಬಿಟ್ಟವರು ಊರಿಗೆ ದೊಡ್ಡೋರು', 'ಜೊಲ್​ ಪಾರ್ಟಿ' ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದ ಬಸುರಾಜ್​ ಕೊಪ್ಪಳ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ಬಸುರಾಜ್​ ಈ ಹಿಂದೆ ದರ್ಶನ್​ ನಟನೆಯ ಚಿಂಗಾರಿ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ನಾಳೆಯಿಂದ ಅಮೆಜಾನ್ ‘ಗ್ರೇಟ್ ಇಂಡಿಯನ್ ಫೆಸ್ಟಿವಲ್​‘ ಪ್ರಾರಂಭ ; ದೀಪಾವಳಿ ಹಬ್ಬಕ್ಕೆ ಮತ್ತೊಮ್ಮೆ ಆಫರ್​ಗಳ ಸುರಿಮಳೆರಾಬರ್ಟ್​, ಒಡೆಯ ಚಿತ್ರದಲ್ಲಿ ಬ್ಯುಸಿಯಾಗಿರುವ ದರ್ಶನ್​ ಇದೀಗ ಅಭಿಮಾನಿಗಳಿಗಾಗಿ 'ಡಿ ಬಾಸ್'​ ಚಿತ್ರದಲ್ಲೂ ನಟಿಸಲಿದ್ದಾರೆ. ಚಿತ್ರದ ಶಿರ್ಷಿಕೆ ಕೂಡ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೊಂದಣಿಯಾಗಿದ್ದು, ಮುಂದಿನ ವರ್ಷ ‘ಡಿ ಬಾಸ್‘​ ಸಿನಿಮಾ ತೆರೆ ಮೇಲೆ ಬರಲಿದೆ.

First published: October 12, 2019, 11:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading