Darshan-Jaggesh: ಜಗ್ಗೇಶ್​ರನ್ನು ಮುತ್ತಿಗೆ ಹಾಕಿದ  ದರ್ಶನ್ ಅಭಿಮಾನಿಗಳು: ಕ್ಷಮೆ ಕೇಳುವಂತೆ ಆಗ್ರಹ

ಡಿಬಾಸ್ ದರ್ಶನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದೀರಿ, ಕ್ಷಮೆ ಕೇಳಿ ಎಂದು ಧಿಕ್ಕಾರ ಕೂಗಿದ್ದಾರೆ. ಕ್ಷಮೆ ಕೇಳದೇ ಇಲ್ಲಿಂದ ನಾವು ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಜಗ್ಗೇಶ್​ ಹಾಗೂ ದರ್ಶನ್​

ಜಗ್ಗೇಶ್​ ಹಾಗೂ ದರ್ಶನ್​

  • Share this:
ಕೆಲ ದಿನಗಳ ಹಿಂದಷ್ಟೆ ಸ್ಯಾಂಡಲ್‍ವುಡ್ ನವರಸ ನಾಯಕ ಜಗ್ಗೇಶ್ ಅವರದು ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು. ಖುದ್ದು ಜಗ್ಗೇಶ್ ಅವರೇ ಈ ಬಗ್ಗೆ ಟ್ವೀಟ್ ಮೂಲಕ ಅದಕ್ಕೆ ಸಮಜಾಯಿಷಿ ನೀಡಿದ್ದರು. ಬೂದಿ ಮುಚ್ಚಿದ ಕೆಂಡದಂತಿದ್ದ ಈ ವಿವಾದಕ್ಕೆ ಮತ್ತೆ ಕಿಡಿ ಹೊತ್ತಿಕೊಂಡಿದೆ. ಡಿಬಾಸ್ ದರ್ಶನ್ ಅಭಿಮಾನಿಗಳು ನಟ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದು, ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಹೌದು, ಕಳೆದ ಕೆಲ ದಿನಗಳಿಂದ ನವರಸ ನಾಯಕ ಜಗ್ಗೇಶ್ ಮೈಸೂರಿನಲ್ಲಿ ವಿಜಯ್ ಪ್ರಸಾದ್ ನಿರ್ದೇಶಿಸುತ್ತಿರುವ ತೋತಾಪುರಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇವತ್ತು ಹಠಾತಾಗಿ ದರ್ಶನ್ ಫ್ಯಾನ್ಸ್ ಶೂಟಿಂಗ್ ಸ್ಪಾಟ್‍ಗೆ ಬಂದು ಚಿತ್ರೀಕರಣ ನಿಲ್ಲಿಸಿ, ನಟ ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ್ದಾರೆ. 

ಡಿಬಾಸ್ ದರ್ಶನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದೀರಿ, ಕ್ಷಮೆ ಕೇಳಿ ಎಂದು ಧಿಕ್ಕಾರ ಕೂಗಿದ್ದಾರೆ. ಕ್ಷಮೆ ಕೇಳದೇ ಇಲ್ಲಿಂದ ನಾವು ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.


ಕೆಲ ಸಮಯ ದರ್ಶನ್​ ಅಭಿಮಾನಿಗಳನ್ನು ಸಮಾಧಾನ ಮಾಡಲು ಖುದ್ದು ಜಗ್ಗೇಶ್ ಅವರೇ ಯತ್ನಿಸಿದ್ದಾರೆ. ತನ್ನ ತಪ್ಪಲ್ಲ, ತಾನು ಆ ರೀತಿ ಮಾತೇ ಆಡಿಲ್ಲ ಎಂದೂ ಎಷ್ಟು ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ದರ್ಶನ್​ ಅಭಿಮಾನಿಗಳು ಇರಲಿಲ್ಲ. ಆದರೆ ದರ್ಶನ್ ಅಭಿಮಾನಿಗಳು ಯಾವ ಮಾತನ್ನೂ ಒಪ್ಪದೇ ಕ್ಷಮೆ ಕೇಳಲೇಬೇಕು ಎಂದಿದ್ದಾರೆ.

ಇದನ್ನೂ ಓದಿ: Pogaru: ವಿವಾದದಲ್ಲಿ ಪೊಗರು ಸಿನಿಮಾ: ವಿವಿಧ ಸಂಘಟನೆಗಳಿಂದ ಹೋರಾಟದ ಎಚ್ಚರಿಕೆ

ನಂತರ ತಾನು ಹಾಗೂ ದರ್ಶನ್ ಈಗಲೂ ಉತ್ತಮ ಬಾಂಧವ್ಯ ಹೊಂದಿದ್ದು, ಆಗಾಗ ಈಗಲೂ ಫೋನ್‍ನಲ್ಲಿ ಮಾತನಾಡುತ್ತಿರುತ್ತೇವೆ. ದರ್ಶನ್ ಅವರಿಗೆ ಮೊದಲಿಂದಲೂ ನಾನು ಸಪೋರ್ಟ್ ಮಾಡಿಕೊಂಡೇ ಬಂದಿದ್ದೇನೆ. ಯಾರೋ ನಮ್ಮಿಬ್ಬರನ್ನು ಕಂಡರೆ ಆಗದವು ನನ್ನ ಆಡಿಯೋವನ್ನು ತಿರುಚಿ ನನ್ನ, ದರ್ಶನ್ ನಡುವೆ ಮನಸ್ತಾಪ ಆಗಲೆಂದು ಹೀಗೆಲ್ಲ ಮಾಡಿದ್ದಾರೆ ಎಂದು ಹೇಳಿದ್ದಾರೆ. ನಂತರ ದರ್ಶನ್ ಅಭಿಮಾನಿಗಳನ್ನು ಸಮಾಧಾನಪಡಿಸಿ ತೋತಾಪುರಿ ಶೂಟಿಂಗ್ ಸೆಟ್​ನಿಂದ ಕಳುಹಿಸಿದ್ದಾರೆ ಜಗ್ಗೇಶ್​.

Jaggesh, Darshan, Darshan Fans, Jaggesh apology, ಜಗ್ಗೇಶ್​, ದರ್ಶನ್, ಅಭಿಮಾನಿಗಳು, ಜಗ್ಗೇಶ್​ಗೆ ಮುತ್ತಿಗೆ ಹಾಕಿದ ದರ್ಶನ್​ ಅಭಿಮಾನಿಗಳು, ಜಗ್ಗೇಶ್​ ಆಡಿಯೋ ಕ್ಲಿಪ್​, Jaggesh Audio Clip, Darshan, Challenging star darshan, darshan visits madagaja set, madagaja srimurali, mysore, darshan-srimurali, ahika ranganath, ದರ್ಶನ್​, ಗಜ-ಮದಗಜ, ಮದಗಜ ಸಿನಿಮಾ, ದರ್ಶನ್​, ಶ್ರೀಮುರಳಿ, Darshan Fans demands apology from Jaggesh htv ae
ಜಗ್ಗೇಶ್ ಹಾಗೂ ದರ್ಶನ್​


ದರ್ಶನ್​ ಹಾಗೂ ಜಗ್ಗೇಶ್​ ಅಗ್ರಜ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಹಾಗಂತ ಡಿಬಾಸ್ ದರ್ಶನ್ ಹಾಗೂ ನವರಸ ನಾಯಕ ಜಗ್ಗೇಶ್ ಅವರ ನಡುವೆ ಮುಸುಕಿನ ಹಗ್ಗಜಗ್ಗಾಟ ನಡೆಯುತ್ತಿದೆ ಅಂತೇನಿಲ್ಲ. ಯಾಕೆಂದರೆ ಇಬ್ಬರ ನಡುವೆಯೂ ಉತ್ತಮ ಬಾಂಧವ್ಯವಿದೆ. 2014ರಲ್ಲಿ ಅಗ್ರಜ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. 2017ರಲ್ಲಿ ಮೈಸೂರಿನಲ್ಲಿ ನವರಸ ನಾಯಕ ಜಗ್ಗೇಶ್ ಅವರು ಕಟ್ಟಿಸಿದ್ದ ಕಲ್ಯಾಣ ಮಂಟಪವನ್ನು ದರ್ಶನ್ ಉದ್ಘಾಟಿಸಿದ್ದರು. ಮಾತ್ರವಲ್ಲ ಕಳೆದ ವರ್ಷ ಖಳನಟ ಕಿಲ್ಲರ್ ವೆಂಕಟೇಶ್ ಅವರು ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾಗ ಜಗ್ಗೇಶ್ ಅವರಿಂದ ಮಾಹಿತಿ ತಿಳಿದು ಖುದ್ದು ದರ್ಶನ್ ಅವರೇ ವೆಂಕಟೇಶ್‍ರ ಆಸ್ಪತ್ರೆ ವೆಚ್ಚ ಭರಿಸಿದ್ದರು.

ಇದನ್ನೂ ಓದಿ: ಯೋಗರಾಜ್​ ಭಟ್ರು 3 ಗಂಟೆ ಕುಳಿತು ಬರೆದ ನೆನಪಿನ ಹುಡುಗಿಯೇ... ಹಾಡಿಗೆ ದನಿಯಾದ ವಿಜಯ ಪ್ರಕಾಶ್​..!

ಇನ್ನು ಕಳೆದ ವಾರ ಆಡಿಯೋ ವೈರಲ್ ಆದಾಗ ಆಗಲೀ ಅಥವಾ ಈಗ ಅಭಿಮಾನಿಗಳು ಜಗ್ಗೇಶ್ ಅವರನ್ನು ಮುತ್ತಿಗೆ ಹಾಕಿದ ಬಳಿಕವಾಗಲಿ ಡಿಬಾಸ್ ದರ್ಶನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬದಲಾಗಿ ಆಡಿಯೋ ವೈರಲ್ ಆದಾಗ ಖುದ್ದು ಜಗ್ಗೇಶ್ ಅವರೇ ಆ ಬಗ್ಗೆ ಹಲವು ಸರಣಿ ಟ್ವೀಟ್‍ಗಳ ಮೂಲಕ ಹಾಗೂ ಅಭಿಮಾನಿಗಳಿಗೆ ಉತ್ತರಿಸುವ ಮೂಲಕ ಸ್ಪಷ್ಟನೆ ನೀಡಿದ್ದರು. ಸದ್ಯಕ್ಕೆ ಈಗ ಈ ವಿವಾದ ಬಗೆಹರಿದಂತಿದೆ.
Published by:Anitha E
First published: