DBoss Birthday CDP: ಸಾಮಾಜಿಕ ಜಾಲತಾಣದಲ್ಲಿ ಡಿಬಾಸ್​ ಪರ್ವ: ಟ್ರೆಂಡ್​ ಆಗುತ್ತಿದೆ ದರ್ಶನ್​ ಹುಟ್ಟುಹಬ್ಬದ ಕಾಮನ್​ ಡಿಪಿ..!

ಸಿಡಿಪಿ ರಿಲೀಸ್ ಆದ 9 ಗಂಟೆ 20 ನಿಮಿಷಗಳಲ್ಲಿ 12 ಟ್ವೀಟ್​ಗಳಾಗಿವೆ. ಅಲ್ಲದೆ ಟ್ವಿಟರ್​ನಲ್ಲಿ ದರ್ಶನ್​ ಅವರ ಹುಟ್ಟುಹಬ್ಬದ ಸಿಡಿಪಿ ರಿಲೀಸ್​ ಟ್ರೆಂಡಿಂಗ್​ನಲ್ಲಿತ್ತು. ಇನ್ನು ಫೆ. 16ರವರೆಗೆ ಇದನ್ನು ಟ್ರೆಂಡ್​ ಮಾಡಲು ಡಿಬಾಸ್​ ಅಭಿಮಾನಿಗಳು ನಿರ್ಧರಿಸಿದ್ದಾರೆ. 

ದರ್ಶನ್​ ಹುಟ್ಟುಹಬ್ಬದ ಕಾಮನ್ ಡಿಪಿ

ದರ್ಶನ್​ ಹುಟ್ಟುಹಬ್ಬದ ಕಾಮನ್ ಡಿಪಿ

  • Share this:
ಸ್ಯಾಂಡಲ್​ವುಡ್​ನಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟ ದರ್ಶನ್​. ನೆಚ್ಚಿನ ನಟನ ಹುಟ್ಟುಹಬ್ಬವನ್ನು ಫ್ಯಾನ್ಸ್​ ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿಯೇ ಸೆಲೆಬ್ರೇಟ್​ ಮಾಡುತ್ತಾರೆ. ಅಂತೆಯೇ ಅಂದು ನಟನ ಮನೆಗೆ ಭೇಟಿ ಕೊಟ್ಟು ನಟನಿಗೆ ಹುಟ್ಟುಹಬ್ಬ ಶುಭ ಕೋರಿ, ತಂದಿರುವ ಕೇಕ್​ ಅನ್ನು ದರ್ಶನ್​ ಅವರಿಂದಲೇ ಕತ್ತರಿಸಿ, ಅವರಿಗೆ ಹಾರ ಹಾಕಿಸಿ ಸಂಭ್ರಮಿಸುತ್ತಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಪ್ರತಿ ವರ್ಷ ಒಂದು ಕಾಮನ್​ ಡಿಪಿ ಸಹ ರಿಲೀಸ್ ಮಾಡುತ್ತಾರೆ. ಆದರೆ ಕಳೆದ ಎರಡು ವರ್ಷಗಳಿಂದ ದರ್ಶನ್​ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಅವರೊಂದಿಗೆ ಆಚರಿಸಲು ಆಗಿಲ್ಲ. 2018ರ ನವೆಂಬರ್​ನಲ್ಲಿ ಅಂಬರೀಷ್​ ಅವರ ಅಗಲಿಕೆಯಿಂದಾಗಿ 2019ರ ದರ್ಶನ್​ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದಿದ್ದರು. ನಂತರ 2020ರಲ್ಲಿ ನಟನ ಮನೆಯ ಬಳಿ ಮಧ್ಯರಾತ್ರಿ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆದರೆ ಮತ್ತೆ ಈ ಸಲ ದರ್ಶನ್​ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಿಗುತ್ತಿಲ್ಲ. 

ಕೊರೋನಾ ಕಾರಣದಿಂದಾಗಿ ದರ್ಶನ್​ ಈ ಸಲ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುತ್ತಿಲ್ಲ ಎಂದು ಈ ಮೊದಲು ಹೇಳಿದ್ದಾರೆ. ಅದಕ್ಕಾಗಿ ಯಾರೂ ಮನೆಯ ಬಳಿ ಬರಬೇಡಿ ಎಂದು ಮನವಿ ಮಾಡಿದ್ದಾರೆ. ಜೊತೆಗೆ ಫೆ. 15ರಿಂದಲೇ ದರ್ಶನ್​ ಬೆಂಗಳೂರಿನಲ್ಲಿ ಇರುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

BC Patil-Darshan, BC Patil visited Darshan's farm house, ambassador of agriculture department, Darshan Farm house, ಬಿಸಿ ಪಾಟೀಲ್-ದರ್ಶನ್, ಬಿಸಿ ಪಾಟೀಲ್ ದರ್ಶನ್ ಫಾರಂ ಹೌಸ್‌ಗೆ ಭೇಟಿ ನೀಡಿದ್ದರು, ದರ್ಶನ್ ಫಾರಂ ಹೌಸ್, ಕೃಷಿ ಇಲಾಖೆ ರಾಯಭಾರಿ ಈಗ ದರ್ಶನ್​, ಸ್ಯಾಂಡಲ್​ವುಡ್​, ಬಿಸಿ ಪಾಟೀಲ್​, ಅರಣ್ಯ ಇಲಖೆಯ ರಾಯಭಾರಿ
ದರ್ಶನ್


ದರ್ಶನ್​ ಹೇಳಿದ ಮಾತನ್ನು ಚಾಚೂ ತಪ್ಪದೆ ಪಾಲಿಸುವ ಅಭಿಮಾನಿಗಳು ಈ ಸಲ ಸಾಮಾಜಿಕ ಜಾಲತಾಣದಲ್ಲಿ ನಟನ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ. ನಿನ್ನೆಯಿಂದಲೇ ಅಭಿಮಾನಿಗಳ ಸಂಭ್ರಮಕ್ಕೆ ಕಿಕ್​ ಸ್ಟಾರ್ಟ್​ ಸಿಕ್ಕಿದೆ.

Fastest Ever In Kfi#DBossBirthdayCdp pic.twitter.com/Sn0eOaPeX6



ಸಾಮಾಜಿಕ ಜಾಲತಾಣದಲ್ಲಿ ದರ್ಶನ್​ ಅವರ ಹುಟ್ಟುಹಬ್ಬವನ್ನು ಬಾಸ್​ ಪರ್ವ ಎಂದು ಆಚರಿಸುತ್ತಿರುವ ಅಭಿಮಾನಿಗಳು ನಿನ್ನೆ ಕಾಮನ್​ ಡಿಪಿ ರಿಲೀಸ್​ ಮಾಡಿದ್ದಾರೆ. ನಟರಾದ ರಿಷಭ್​ ಶೆಟ್ಟಿ, ಸುಮಲತಾ ಸೇರಿದಂತೆ ಸಾಕಷ್ಟು ಮಂದಿ ತಾರೆಯರು ಸಲ ಈ ಸಿಡಿಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ದರ್ಶನ್​ ಅವರಿಗೆ ಮುಂಚಿತವಾಗಿಯೇ ವಿಶ್​ ಮಾಡಿದ್ದಾರೆ.







ಸಿಡಿಪಿ ರಿಲೀಸ್ ಆದ 9 ಗಂಟೆ 20 ನಿಮಿಷಗಳಲ್ಲಿ 12 ಟ್ವೀಟ್​ಗಳಾಗಿವೆ. ಅಲ್ಲದೆ ಟ್ವಿಟರ್​ನಲ್ಲಿ ದರ್ಶನ್​ ಅವರ ಹುಟ್ಟುಹಬ್ಬದ ಸಿಡಿಪಿ ರಿಲೀಸ್​ ಟ್ರೆಂಡಿಂಗ್​ನಲ್ಲಿತ್ತು. ಇನ್ನು ಫೆ. 16ರವರೆಗೆ ಇದನ್ನು ಟ್ರೆಂಡ್​ ಮಾಡಲು ಡಿಬಾಸ್​ ಅಭಿಮಾನಿಗಳು ನಿರ್ಧರಿಸಿದ್ದಾರೆ.

2020ರಲ್ಲಿ ಮಾತ್ರ ಸಿಕ್ಕಿತ್ತು ಡಿಬಾಸ್​ ದರ್ಶನ ಭಾಗ್ಯ

2019ರಲ್ಲಿ ಅಂಬರೀಷ್​ ಅವರ ಅಗಲಿಕೆಯಿಂದಾಗಿ ದರ್ಶನ್​ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ಜೊತೆಗೆ ಅಭಿಮಾನಿಗಳನ್ನು ಭೇಟಿ ಮಾಡಲಿಲ್ಲ. ಇನ್ನು 2020ರಲ್ಲಿ ಅಂದರೆ ಕಳೆದ ವರ್ಷ ಇನ್ನೂ ಕೊರೋನಾ ಕಾಟ ಆರಂಭವಾಗಿರಲಿಲ್ಲ. ಆಗ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ದರ್ಶನ್​.

ಇದನ್ನು ಓದಿ: ವಿವಾಹಕ್ಕೆ ಒಂದು ದಿನ ಮೊದಲು ಉಂಗುರ ಬದಲಿಸಿಕೊಂಡ ಕೃಷ್ಣ-ಮಿಲನಾ..!

ಆಗ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್​ ಅವರನ್ನು ಭೇಟಿ ಮಾಡಲು ಬಂದಿದ್ದರು. ಆಗ ಅಲ್ಲಿ ನೂಕ್ಕುನುಗ್ಗಲೂ ಆಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದರು. ಬಂದ ಅಭಿಮಾನಿಗಳನ್ನ ಅಕ್ಕರೆಯಿಂದ ಕಾಣುವ ದರ್ಶನ್​ ಮಧ್ಯರಾತ್ರಿಯಿಂದೇ ಫ್ಯಾನ್ಸ್​ಗಳನ್ನು ಭೇಟಿಯಾಗಿ ಆತ್ಮೀಯ ಶುಭಾಶಯಗಳನ್ನ ಸ್ವೀಕರಿಸಿದ್ದರು.

ಕಳೆದ ಎರಡು ವರ್ಷಗಳಿಂದ ಬಂಟಿಂಗ್, ಬ್ಯಾನರ್, ಕೇಕ್‌ಗೆ ವೆಚ್ಚ ಮಾಡುವ ಬದಲು ಅದೇ ಹಣದಲ್ಲಿ ದವಸ ಧಾನ್ಯ ತರಲು ದರ್ಶನ್​ ತಮ್ಮ ಅಭಿಮಾನಿಗೆ ಕರೆ ಕೊಟ್ಟಿದ್ದರು. ಅದರಂತೆ ಅಭಿಮಾನಿಗಳು ಕ್ವಿಂಟಾಲ್ ​ಗಟ್ಟಲೆ ಧವಸ ಧಾನ್ಯಗಳನ್ನ ತಂದಿದ್ದರು. ಆದರೆ ಈ ಸಲ ಕೊರೋನಾ ಕಾರಣದಿಂದಾಗಿ ಬಹುತೇಕ ಮಂದಿ ಆರ್ಥಿಕ ಸಂಕಷ್ಟದಲ್ಲಿದ್ದು, ಈ ಸಲ ಯಾರೂ ಯಾವ ರೀತಿಯ ದಾನ ಮಾಡದೆ, ತಮ್ಮ ಕುಟುಂಬಗಳಿಗೆ ಆ ಹಣವನ್ನು ವಿನಿಯೋಗಿಸಿಕೊಳ್ಳಿ ಎಂದಿದ್ದಾರೆ ಅಭಿಮಾನಿಗಳ ದಾಸ.
Published by:Anitha E
First published: