HOME » NEWS » Entertainment » DARSHAN FAN SUPPLYING FREE DRINKING WATER TO NEEDY PEOPLE HTV AE

Darshan: ಡಿಬಾಸ್ ಅಭಿಮಾನಿಯಿಂದ ಒಂದೊಳ್ಳೆ ಕೆಲಸ: ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ

ದರ್ಶನ್ ಅಭಿಮಾನಿಗಳೂ ಸಹ ತಮ್ಮದೇ ರೀತಿಯಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದಾರೆ. ಅವರಲ್ಲಿ ವೈಟ್‍ಫೀಲ್ಡ್ ಸಮೀಪದ ನಂಜಾಪುರದ ಡಿಬಾಸ್ ದರ್ಶನ್ ಅಭಿಮಾನಿ ಮುರಳೀಧರ್ ಕೂಡ ಒಬ್ಬರು.

news18-kannada
Updated:April 5, 2021, 1:35 PM IST
Darshan: ಡಿಬಾಸ್ ಅಭಿಮಾನಿಯಿಂದ ಒಂದೊಳ್ಳೆ ಕೆಲಸ: ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ
ದರ್ಶನ್ ಅಭಿಮಾನಿಗಳಿಂದ ಕುಡಿಯುವ ನೀರಿನ ಪೂರೈಕೆ
  • Share this:
ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ಡಿಬಾಸ್ ದರ್ಶನ್ ಅವರು ಕೇವಲ ತಮ್ಮ ನಟನೆಯಿಂದ ಮಾತ್ರವಲ್ಲ, ಹತ್ತು ಹಲವು ಸಾಮಾಜಿಕ ಕೆಲಸಗಳಿಂದಲೂ ಜನರಿಗೆ ಹತ್ತಿರುವಾಗಿರುವ ನಟ. ಅವರ ಅಭಿಮಾನಿಗಳೂ ಸಹ ತಮ್ಮ ನೆಚ್ಚಿನ ನಟನಿಂದ ಪ್ರೇರೇಪಿತರಾಗಿ ಉತ್ತಮ ಕೆಲಸಗಳನ್ನು ಮಾಡುವಂತಹ ಹಲವು ಉದಾಹರಣೆಗಳಿವೆ. ಅಂತಹ ಒಬ್ಬ ಅಭಿಮಾನಿಯೇ ನಂಜಾಪುರದ ಮುರಳೀಧರ್. ಯಾವ ರಾಜಕಾರಣಿ, ಯಾವ ಮಿನಿಸ್ಟರ್ ಮನೆ ಮುಂದೆ ಪ್ರತಿ ದಿನ ಜನ ಸಹಾಯ ಕೇಳಿಕೊಂಡು ಹೋಗುತ್ತಾರೋ, ಇಲ್ಲವೋ. ಆದರೆ ನಟ ದರ್ಶನ್ ಮನೆ ಬಳಿಯಂತೂ ಆಗಾಗ ಸಹಾಯಕ್ಕಾಗಿ ಹೋಗುವ ಜನರಿಗೇನೂ ಕಡಿಮೆ ಇಲ್ಲ. ಹಾಗಂತ ಡಿಬಾಸ್ ದರ್ಶನ್ ತಾವು ಸಹಾಯ ಮಾಡಿದ್ದನ್ನ ಹೇಳಿಕೊಳ್ಳುವಂತಹ ಜಾಯಮಾನದವರಂತೂ ಅಲ್ಲವೇ ಅಲ್ಲ. ಯಾರಿಗೂ ಹೇಳಬೇಡಿ ಎನ್ನುತ್ತಲೇ ನೂರಾರು ಜನರಿಗೆ ನಾನಾ ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ಇದರಿಂದ ಚಿತ್ರರಂಗದ ಮಂದಿಯೂ ಹೊರತಾಗಿಲ್ಲ.

ಇನ್ನು ಪ್ರತಿ ವರ್ಷದ ಹುಟ್ಟುಹಬ್ಬದಂದು ಡಿಬಾಸ್ ದರ್ಶನ್ ಅವರು ಅಭಿಮಾನಿಗಳಿಂದ ದವಸ, ಧಾನ್ಯಗಳನ್ನು ಪಡೆದು ಮಠ ಮಾನ್ಯಗಳಿಗೆ ನೀಡುತ್ತಾ ಬಂದಿರುವುದೂ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ.

darshan, dboss fan water supply, roberrt, drinking water supply, ದರ್ಶನ್​, ಡಿಬಾಸ್​ ಅಭಿಮಾನಿಯಿಂದ ಕುಡಿಯುವ ನೀರಿನ ಪೂರೈಕೆ, ದರ್ಶನ್​ ಅಭಿಮಾನಿಗಳು, ದರ್ಶನ್​ ಅಭಿಮಾನಿ ಮುರಳೀಧರ್​, ಕುಡಿಯುವ ನೀರಿನ ಪೂರೈಕ, Darshan Facebook Live, DBoss Facebook live, Actor Darshan, Facebook, Roberrt Movie, Sandalwood, facebook live, Gandugali Veera Madakari Nayaka, Tharun Sudhir, Umapathi, Asha Bhat, ದರ್ಶನ್​ ಫೇಸ್​ಬುಕ್​ ಲೈವ್​, ರಾಬರ್ಟ್​, ಗಂಡುಗಲಿ ವೀರ ಮದಕರಿ ನಾಯಕ, ಉಮಾಪತಿ, ತರುಣ್ ಸುಧೀರ್​, ಡಿಬಾಸ್​, ದರ್ಶನ್​, ಚಾಲೆಂಜಿಂಗ್​ ಸ್ಟಾರ್​ ದರ್ಶನ್​
ದರ್ಶನ್​ ಅಭಿಮಾನಿಗಳಿಂದ ಉಚಿತ ಕುಡಿಯುವ ನೀರಿನ ಪೂರೈಕೆ

ಇಂತಹ ನಟ ದರ್ಶನ್ ತಮ್ಮ ಅಭಿಮಾನಿಗಳಿಗೂ ಹೇಳುವುದೂ ಸಹ ಅದೇ ಮಾತು. ಕಷ್ಟದಲ್ಲಿರುವವರಿಗೆ ಕೈಲಾದಷ್ಟು ಸಹಾಯ ಮಾಡಿ ಅಂತ. ಅದೇ ರೀತಿ ದರ್ಶನ್ ಅಭಿಮಾನಿಗಳೂ ಸಹ ತಮ್ಮದೇ ರೀತಿಯಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದಾರೆ. ಅವರಲ್ಲಿ ವೈಟ್‍ಫೀಲ್ಡ್ ಸಮೀಪದ ನಂಜಾಪುರದ ಡಿಬಾಸ್ ದರ್ಶನ್ ಅಭಿಮಾನಿ ಮುರಳೀಧರ್ ಕೂಡ ಒಬ್ಬರು.

darshan, dboss fan water supply, roberrt, drinking water supply, ದರ್ಶನ್​, ಡಿಬಾಸ್​ ಅಭಿಮಾನಿಯಿಂದ ಕುಡಿಯುವ ನೀರಿನ ಪೂರೈಕೆ, ದರ್ಶನ್​ ಅಭಿಮಾನಿಗಳು, ದರ್ಶನ್​ ಅಭಿಮಾನಿ ಮುರಳೀಧರ್​, ಕುಡಿಯುವ ನೀರಿನ ಪೂರೈಕ, Darshan Facebook Live, DBoss Facebook live, Actor Darshan, Facebook, Roberrt Movie, Sandalwood, facebook live, Gandugali Veera Madakari Nayaka, Tharun Sudhir, Umapathi, Asha Bhat, ದರ್ಶನ್​ ಫೇಸ್​ಬುಕ್​ ಲೈವ್​, ರಾಬರ್ಟ್​, ಗಂಡುಗಲಿ ವೀರ ಮದಕರಿ ನಾಯಕ, ಉಮಾಪತಿ, ತರುಣ್ ಸುಧೀರ್​, ಡಿಬಾಸ್​, ದರ್ಶನ್​, ಚಾಲೆಂಜಿಂಗ್​ ಸ್ಟಾರ್​ ದರ್ಶನ್​
ದರ್ಶನ್​ ಅಭಿಮಾನಿಗಳಿಂದ ಉಚಿತ ಕುಡಿಯುವ ನೀರಿನ ಪೂರೈಕೆ

ಮೊದಲಿಂದಲೂ ಡಿಬಾಸ್ ದರ್ಶನ್‍ರ ಕಟ್ಟಾಭಿಮಾನಿಯಾದ ಮುರಳೀಧರ್ ಕಳೆದ ಕೆಲ ವರ್ಷಗಳಿಂದ ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಊರಿನಲ್ಲಿ ನೀರಿನ ಸಮಸ್ಯೆ ಎದುರಿಸುವ ಮನೆಗಳಿಗೆ ತಮ್ಮ ಟ್ಯಾಂಕರ್​ನಲ್ಲಿಯೇ ಉಚಿತವಾಗಿ ನೀರು ಸರಬರಾಜು ಮಾಡುತ್ತಾರೆ. `ನನಗೆ ಡಿಬಾಸ್ ದರ್ಶನ್ ಅವರಂದ್ರೆ ತುಂಬಾ ಇಷ್ಟ. ನನ್ನ ಮನಸ್ಸು ಪೂರ್ತಿ ಅವರೇ ಇದ್ದಾರೆ. ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ನಂಜಾಪುರದಲ್ಲಿ ಕುಡಿಯುವ ನೀರಿಗೆ ತುಂಬಾ ಸಮಸ್ಯೆಗಳು ಉಂಟಾಗುತ್ತವೆ. ನನ್ನ ಕೈಲಾದದ್ದೇನಾದರೂ ಮಾಡಬೇಕು ಅಂತ ಅಂದುಕೊಂಡು, ಕೆಲ ವರ್ಷಗಳಿಂದ ಟ್ಯಾಂಕರ್​ನಲ್ಲಿ ಮನೆಗಳಿಗೆ ಕುಡಿಯುವ ನೀರು ಪೂರೈಸುತ್ತಿದ್ದೇನೆ. ಡಿಬಾಸ್ ದರ್ಶನ್ ಅವರೇ ನನಗೆ ಪ್ರೇರಣೆ, ಹೀಗಾಗಿಯೇ ಟ್ಯಾಂಕರ್ ಮೇಲೆ ಅವರ ಫೋಟೋ ಹಾಕಿಸಿದ್ದೇನೆ. ಈ ವರ್ಷ ಅವರ ಹುಟ್ಟುಹಬ್ಬವನ್ನೂ ನನ್ನೂರಿನಲ್ಲಿ ನಾನು ಬ್ಯಾನರ್ ಹಾಕಿಸಿ, ಕೇಕ್ ಕಟ್ ಮಾಡಿ ಆಚರಿಸಿದ್ದೆ' ಎಂದು ಸಂಭ್ರಮದಿಂದ ಹೇಳಿಕೊಳ್ಳುತ್ತಾರೆ ನಟ ದರ್ಶನ್‍ರ ಅಭಿಮಾನಿ ಮುರಳೀಧರ್.

ಇದನ್ನೂ ಓದಿ: ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸುತ್ತಿರುವ ರಾಬರ್ಟ್: ಸಕ್ಸಸ್​ ಪಾರ್ಟಿ ಮಾಡಿದ ಚಿತ್ರತಂಡ..!ಹೀಗೆ ಜನರು ಮಾತ್ರವಲ್ಲ ದನ, ಹಸು, ಕರುಗಳೂ ಸಹ ಬೇಸಿಗೆ ಸಮಯದಲ್ಲಿ ನೀರಿಗೆ ಸಾಕಷ್ಟು ಕಷ್ಟಪಡುತ್ತವೆ. ಹೀಗಾಗಿಯೇ ಗೆಳೆಯರ ಜೊತೆ ಸೇರಿ ರಸ್ತೆ ಬದಿಯಲ್ಲೇ ಒಂದು ಸಣ್ಣ ಸಿಮೆಂಟ್ ಟ್ಯಾಂಕ್ ನಿರ್ಮಿಸಿರುವ ಮುರಳೀಧರ್, ಅಲ್ಲೂ ಪ್ರತಿದಿನ ನೀರು ತುಂಬಿಸುತ್ತಾರೆ. ಆ ಮೂಲಕ ದನ ಕರುಗಳು, ಶ್ವಾನಗಳು, ಪಕ್ಷಿಗಳಿಗೂ ನೀರು ನೀಡಿ ದಾಹ ತೀರಿಸಿದ್ದಾರೆ.
Published by: Anitha E
First published: April 5, 2021, 1:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories