Darshan: ಲಾಕ್​ಡೌನ್​ ಸಡಿಲಗೊಂಡ ನಂತರ ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ದರ್ಶನ್​..!

Rajaveera Madakari Nayaka: ರಾಬರ್ಟ್​ ಜೊತೆಗೆ ರಾಜವೀರ ಮದಕರಿ ನಾಯಕ ಸಿನಿಮಾದ ಚಿತ್ರೀಕರಣ ಸಹ ಬಾಕಿ ಇದೆ. ಲಾಕ್​ಡೌನ್​ ಆರಂಭಕ್ಕೂ ಮುನ್ನ ಕೇರಳದಲ್ಲಿ ದರ್ಶನ್​ ಈ ಸಿನಿಮಾದ ಮೊದಲ ಶೆಡ್ಯೂಲ್​ ಮುಗಿಸಿದ್ದರು. ಪಂಚ ಭಾಷೆಗಳಲ್ಲಿ ತೆರೆ ಕಾಣಲಿರುವ ದರ್ಶನ್​ ಅಭಿನಯದ ರಾಜವೀರ ಮದಕರಿ ನಾಯಕ ಸಿನಿಮಾದ ಮುಹೂರ್ತ ಕಳೆದ ಡಿಸೆಂಬರ್​ನಲ್ಲಿ ನೆರವೇರಿತ್ತು. 

ದರ್ಶನ್​

ದರ್ಶನ್​

  • Share this:
ದರ್ಶನ್​ ಲಾಕ್​ಡೌನ್​ನಲ್ಲಿ ಮೈಸೂರಿನಲ್ಲಿರುವ ತೋಟದಲ್ಲಿ ಆರಾಮಾಗಿ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಿದ್ದರು. ತಮ್ಮ ತೋಟಕ್ಕಾಗಿ ಎರಡು ಹೊಸ ಕುದುರೆಗಳನ್ನೂ ತಂದಿದ್ದಾರೆ. ಅವುಗಳ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದರು. ಅವರ ಹೊಸ ಕುದುರೆಗಳ ಫೋಟೋ ಹಾಗೂ ವಿಡಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅವರು ತೋಟದಲ್ಲಿರುವ ಫೋಟೋಗಳು ಹಾಗೂ ವಿಡಿಯೋಗಳು ವೈರಲ್​ ಆಗುತ್ತಿವೆ. ಹೀಗಿರುವಾಗಲೇ ಅವರ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವೈರಲ್​ ಆಗುತ್ತಿದೆ. ಇದರಲ್ಲಿ ದರ್ಶನ್​ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಿನಿಮಾಗಾಗಿ ದರ್ಶನ್​ ಹೇರ್​ ಸ್ಟೈಲ್​ ಬದಲಾಯಿಸಿಕೊಂಡಿದ್ದಾರೆ. ಜೊತೆಗೆ ಮೀಸೆ ಸಹ ಟ್ರಿಮ್​ ಮಾಡಿದ್ದಾರೆ. ಎಲ್ಲ ಸರಿ ಇದ್ದಿದ್ದರೆ, ಈ ಹೊತ್ತಿಗೆ ರಾಬರ್ಟ್​ ಸಿನಿಮಾ ರಿಲೀಸಗ ಆಗಬೇಕಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಈ ಸಿನಿಮಾ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಇತ್ತೀಚೆಗಷ್ಟೆ ರಾಬರ್ಟ್​ ಚಿತ್ರತಂಡ ನಾಯಕಿ ಆಶಾ ಭಟ್​ ಅವರ ಪೋಸ್ಟರ್​ ರಿಲೀಸ್ ಮಾಡಿತ್ತು.

ಇನ್ನು ಇವುಗಳ ಜೊತೆಗೆ ದರ್ಶನ್​ ಅವರ ಮತ್ತೊಂದು ಸಿನಿಮಾ ರಾಜವೀರ ಮದಕರಿ ನಾಯಕದ ಚಿತ್ರೀಕರಣ ಸಹ ಬಾಕಿ ಇದೆ. ಲಾಕ್​ಡೌನ್​ ಆರಂಭಕ್ಕೂ ಮುನ್ನ ಕೇರಳದಲ್ಲಿ ದರ್ಶನ್​ ಈ ಸಿನಿಮಾದ ಮೊದಲ ಶೆಡ್ಯೂಲ್​ ಮುಗಿಸಿದ್ದರು. ಪಂಚ ಭಾಷೆಗಳಲ್ಲಿ ತೆರೆ ಕಾಣಲಿರುವ ದರ್ಶನ್​ ಅಭಿನಯದ ರಾಜವೀರ ಮದಕರಿ ನಾಯಕ ಸಿನಿಮಾದ ಮುಹೂರ್ತ ಕಳೆದ ಡಿಸೆಂಬರ್​ನಲ್ಲಿ ನೆರವೇರಿತ್ತು.

ಮಲ್ಲಿಕಾರ್ಜುನ್​ ಅವರ ಕುದುರೆ ಲಾಯದಲ್ಲಿ ಕುದರೆ ಮರಿ ಹಾಕಿದ್ದು, ಅದನ್ನು ನೋಡಲೆಂದೇ ದರ್ಶನ್​ ಅಲ್ಲಿಗೆ ಹೋಗಿದ್ದರಂತೆ. ಅಲ್ಲಿಂದ ಬರುವಾಗ ಮಲ್ಲಿಕಾರ್ಜುನ್​ ಅವರು ದರ್ಶನ್​ ಅವರಿಗೆ ಕುದುರೆ ಉಡುಗೊರೆಯಾಗಿ ನೀಡಿದ್ದಾರೆ. 
ಮಲ್ಲಿಕಾರ್ಜುನ್ ಅವರ ಕುದುರೆ ಲಾಯದಲ್ಲಿ ದರ್ಶನ್​


ಡಿಸೆಂಬರ್​ನಲ್ಲಿ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯಲ್ಲಿ ಚಿತ್ರದ ಮುಹೂರ್ತ ನಡೆದಿತ್ತು. ಇದರಲ್ಲಿ ನಟಿ ಸುಮಲತಾ ಸಹ ಭಾಗಿಯಾಗಿದ್ದರು. ಈ ಸಿನಿಮಾ ಮುಹೂರ್ತಕ್ಕೂ ಮುನ್ನ ಈ ಸಿನಿಮಾಗೆ ಗಂಡುಗಲಿ ಮದಕರಿ ನಾಯಕ ಎಂದು ಹೆಸರಿಡಲಾಗಿತ್ತು. ಆದರೆ ಅದನ್ನು ರಾಜವೀರ ಮದಕರಿ ನಾಯಕ ಎಂದು ಬದಲಾಯಿಸಲಾಯಿತು.

Sandalwood, Darshan, Rajaveera Madakari, Darshan New Look, Darshan starrer rajaveera madakari nayaka movie shoot to resumes in October
ಹೊಸ ಲುಕ್​ನಲ್ಲಿ ದರ್ಶನ್​


ಈಗ ರಾಜವೀರ ಮದಕರಿ ನಾಯಕ ಸಿನಿಮಾದ ಚಿತ್ರೀಕರಣ ಈಗ ಮತ್ತೆ ಆರಂಭವಾಗಲಿದೆ. ಅಕ್ಟೋಬರ್​ನಲ್ಲಿ ಈ ಸಿನಿಮಾ ಮತ್ತೆ ಸೆಟ್ಟೇರಲಿದೆಯಂತೆ. ಈ ಸಿನಿಮಾದ ಚಿತ್ರೀಕರಣವನ್ನು ರಾಜಸ್ಥಾನದಲ್ಲಿ ನಡೆಸಲು ಚಿತ್ರತಂಡ ನಿರ್ಧರಿಸಿದ್ದು, ಈಗ ಕೊರೋನಾದಿಂದಾಗಿ ಅದನ್ನು ಬೆಂಗಳೂರು, ಹುಬ್ಬಳ್ಳಿ ಹಾಗೂ ಚಿತ್ರದುರ್ಗದ ಸುತ್ತಮುತ್ತ ನಡೆಸಲು ನಿರ್ಧರಿಸಿದೆಯಂತೆ ಚಿತ್ರತಂಡ.

ಈ ಸಿನಿಮಾದ ಕುರಿತಾಗಿ ಪ್ರಕಟಿಸಿದಾ್ ಸಾಕಷ್ಟು ವಿವಾದವಾಗಿತ್ತು. ಈ ಸಿನಿಮಾವನ್ನು ಸುದೀಪ್​ ಅವರೇ ಮಾಡಬೇಕೆಂದು ಕೆಲವರು ಪಟ್ಟು ಹಿಡಿದಿದ್ದರು. ಆದರೆ ನಂತರ ಈ ವಿವಾದಕ್ಕೆ ತೆರೆ ಬಿತ್ತು. ದರ್ಶನ್​ ಇತ್ತೀಚೆಗೆ ಹಿಂದಿ ಹೇರಿಕೆ ಹಾಗೂ ಐಪಿಲ್​ ಬೆಟ್ಟಿಂಗ್​ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದರೊಂದಿಗೆ, ಅಭಿಮಾನಿಗಳಿಗೆ ಸಂದೇಶ ಸಹ ಕೊಟ್ಟಿದ್ದಾರೆ.
Published by:Anitha E
First published: