Darshan: ಸ್ಯಾಂಡಲ್​ವುಡ್​ನಲ್ಲಿ 23 ವರ್ಷ ಕಳೆದ ಡಿಬಾಸ್​ ದರ್ಶನ್​: ಸಂಭ್ರಮಿಸಲು ಸಿದ್ಧತೆಯಲ್ಲಿ ತೊಡಗಿದ ಅಭಿಮಾನಿಗಳು..!

23 Years in Sandalwood: ಚಂದನವನದಲ್ಲಿ ಡಿಬಾಸ್​ ಎಂದೇ ಕರೆಸಿಕೊಳ್ಳುವ ದರ್ಶನ್​ ಒಂದು ಕಾಲದಲ್ಲಿ ಲೈಟ್ ಬಾಯ್​ ಆಗಿದ್ದ ವಿಷಯ ತಿಳಿದೇ ಇದೆ. ಹಂತ ಹಂತವಾಗಿ ತಮ್ಮ ಶ್ರಮದಿಂದ ಈ ಮಟ್ಟಕ್ಕೇರಿರುವ ದರ್ಶನ್​ ಸ್ಯಾಂಡಲ್​ವುಡ್​ನಲ್ಲಿ ಯಶಸ್ವಿಯಾಗಿ 23 ವರ್ಷ ಕಳೆದಿದ್ದಾರೆ.

ದರ್ಶನ್​

ದರ್ಶನ್​

  • Share this:
ನಟ ದರ್ಶನ್​ ಸ್ಯಾಂಡಲ್​ವುಡ್​ಗೆ ಬರುವ ಮೊದಲು ಕಿರುತೆರೆಯಲ್ಲಿ ಕೆಲಸ ಮಾಡಿದ್ದರು. ಎಸ್​. ನಾರಾಯಣ್​ ಅವರ ಅಂಬಿಕಾ ಧಾರಾವಾಹಿಯಲ್ಲಿ ದರ್ಶನ್​ ನಟಿಸಿದ್ದರು. ನಂತರ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದು ಪೋಷಕ ಪಾತ್ರಗಳ ಮೂಲಕ. ನಂತರ ನಾಯಕ ನಟನಾಗಿ ಮಿಂಚ ದರ್ಶನ್​ ಹಿಂದೆ ತಿರುಗಿಯೇ ನೋಡಿಲ್ಲ. 

ಚಂದನವನದಲ್ಲಿ ಡಿಬಾಸ್​ ಎಂದೇ ಕರೆಸಿಕೊಳ್ಳುವ ದರ್ಶನ್​ ಒಂದು ಕಾಲದಲ್ಲಿ ಲೈಟ್ ಬಾಯ್​ ಆಗಿದ್ದ ವಿಷಯ ತಿಳಿದೇ ಇದೆ. ಹಂತ ಹಂತವಾಗಿ ತಮ್ಮ ಶ್ರಮದಿಂದ ಈ ಮಟ್ಟಕ್ಕೇರಿರುವ ದರ್ಶನ್​ ಸ್ಯಾಂಡಲ್​ವುಡ್​ನಲ್ಲಿ ಯಶಸ್ವಿಯಾಗಿ 23 ವರ್ಷ ಕಳೆದಿದ್ದಾರೆ.

Challenging Star Darshan
ನಟ ದರ್ಶನ್​


ಚರಣ್​ ರಾಜ್​ ಹಾಗೂ ವಿನೋದ್​ ರಾಜ್​ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಹಾಭಾರತ ಚಿತ್ರದಲ್ಲಿ ದರ್ಶನ್​ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಅದು ಅವರ ಮೊದಲ ಸಿನಿಮಾ. ಈ ಸಿನಿಮಾ 1997ರಲ್ಲಿ ತೆರೆಕಂಡಿತ್ತು. ಈ ಸಿನಿಮಾವನ್ನು ಎಸ್​. ನಾರಾಯಣ್​ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ನಲ್ಲಿ ಐಫೋನ್​ನಲ್ಲಿ ಶೂಟ್​ ಮಾಡಿದ ಮ್ಯೂಸಿಕ್​ ವಿಡಿಯೋ ರಿಲೀಸ್​ ಮಾಡಿದ ಶ್ರುತಿ ಹಾಸನ್​..!

ಮಹಾಭಾರತ ಸಿನಿಮಾ ತೆರೆಕಂಡು ಹಾಗೂ ದರ್ಶನ್​ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು 23 ವರ್ಷಗಳಾಗಿವೆ. ಇದನ್ನು ಸಂಭ್ರಮಿಸಲು ಡಿಬಾಸ್​ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಇನ್ನು ಅದಕ್ಕಾಗಿ ಒಂದು ಸಖತ್ ವಿಡಿಯೋ ಮಾಡುತ್ತಿದ್ದು, ಅದರ ಪುಟ್ಟ ಟೀಸರ್ ಅನ್ನು ಈಗ ರಿಲೀಸ್​ ಮಾಡಿದ್ದಾರೆ.

ಇದೇ ತಿಂಗಳ 10ರಂದು 23 ವರ್ಷಗಳ ಸಂಭ್ರಮಾಚರಣೆಯ ಕಾಮನ್​ ಡಿಪಿ ಸಹ ರಿಲೀಸ್ ಆಗಲಿದೆ. ಪ್ರಜ್ವಲ್​ ದೇವರಾಜ್​ ಅವರು ಫೇಸ್​ಬುಕ್​ನಲ್ಲಿ, ಅಭಿಷೇಕ್​ ಅಂಬರೀಷ್​ ಇನ್​ಸ್ಟಾಗ್ರಾಂ ಹಾಗೂ ನೆನಪಿರಲಿ ಪ್ರೇಮ್​ ಟ್ವಿಟರ್​ನಲ್ಲಿ ಈ ಕಾಮನ್​ ಡಿಪಿ ಬಿಡುಗಡೆ ಮಾಡಲಿದ್ದಾರೆ. ಇನ್ನು ಸ್ಯಾಂಡಲ್​ವುಡ್​ನಲ್ಲಿ ಡಿಬಾಸ್​, 23 ವರ್ಷ ಕಳೆದ ಸಂಭ್ರಮವನ್ನು ಯಾವಾಗ ಆಚರಿಸಲಿದ್ದಾರೆ ಅನ್ನೋದು ಮಾತ್ರ ಇನ್ನೂ ತಿಳಿದು ಬಂದಿಲ್ಲ.
Published by:Anitha E
First published: