ಸ್ಟಾರ್ ನಟರ ಅಭಿಮಾನಿಗಳ ನಡುವೆ ಕಿಚ್ಚು ಹತ್ತಿಸಲು ಬಂದವನಿಗೆ ಟ್ವಿಟ್ಟರ್​ನಲ್ಲೇ ಫುಲ್ ಕ್ಲಾಸ್!

ಈ ಟ್ಟೀಟ್​ ನೋಡಿ ಅಪ್ಪು ಅಭಿಮಾನಿಗಳು ಸಿಟ್ಟಾಗಿದ್ದಾರೆ. ಮೊದಲು ಟ್ವೀಟ್​ ಡಿಲೀಟ್​ ಮಾಡು ಎಂದಿದ್ದಾರೆ. ಈಗಾಗಲೇ ಅಪ್ಪು ಸಾರ್​ ಸಾಕಷ್ಟು ಬೆಳೆದಿದ್ದಾರೆ. ಟ್ವೀಟ್​ ಬರೆಯುವಾಗ ಸ್ವಲ್ಪ ಯೋಚಿಸು ಎಂದು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪುನೀತ್​ ರಾಜ್​ ಕುಮಾರ್​, ದರ್ಶನ್​

ಪುನೀತ್​ ರಾಜ್​ ಕುಮಾರ್​, ದರ್ಶನ್​

 • Share this:
  ಚಾಲೆಂಜಿಂಗ್​ ಸ್ಟಾರ್​ ದರ್ಶನ್​ 44ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ದಾಸನಿಗೆ ಲೆಕ್ಕವಿಲ್ಲದಷ್ಟು ಅಭಿಮಾನಿಗಳಿಂದ ಮಾತ್ರವಲ್ಲದೆ ಸ್ಟಾರ್​ ನಟರು ಕೂಡ ಶುಭಾಶಯ ಕೋರಿದ್ದಾರೆ. ಈ ನಡುವೆ ಸ್ಯಾಂಡಲ್​ವುಡ್​ ನಟ ಪುನೀತ್​ ರಾಜ್​ ಕುಮಾರ್​ ದರ್ಶನ್​ ಅವರಿಗೆ ಟ್ವಿಟ್ಟರ್​ನಲ್ಲಿ ಹುಟ್ಟು ಹಬ್ಬದ ಶುಭಾಶಯ ಕೋರಿದ್ದರು. ಆದರೆ ಈ ಟ್ವೀಟ್​ಗೆ ಪ್ರತಿಯಾಗಿ ದರ್ಶನ್​ ಅಭಿಮಾನಿಯೊಬ್ಬ ಮಾಡಿದ ಟ್ಟೀಟ್​ ಭಾರಿ ಚರ್ಚೆಗೆ ಗ್ರಾಸವಾಗಿದೆ.

  ಪುನೀತ್​ ರಾಜ್​ ಕುಮಾರ್​ ದರ್ಶನ್​ ಹುಟ್ಟು ಹಬ್ಬದ ಸಲುವಾಗಿ ಟ್ವಿಟ್ಟರ್​ನಲ್ಲಿ ‘ಹ್ಯಾಪಿ ಬರ್ತ್​​ಡೇ ದರ್ಶನ್‘​ ಎಂದು ಬರೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ದರ್ಶನ್​ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ. ಓರ್ವ ಅಭಿಮಾನಿಯ ಮಾಡಿರುವ ಟ್ವೀಟ್​ ದರ್ಶನ್​ ಮತ್ತು ಪುನೀತ್​ ರಾಜ್​ ಕುಮಾರ್​ ಅಭಿಮಾನಿಗಳ ನಡುವೆ ಕಿಚ್ಚು ಹಚ್ಚಿಸುವಂತೆ ಮಾಡಿದೆ.

  ಅಭಿಮಾನಿಯ ಟ್ಟೀಟ್​ನಲ್ಲಿ ಅಂತಹದೇನಿತ್ತು?

  ಪುನೀತ್​ ರಾಜ್​ ಕುಮಾರ್ ಮಾಡಿರುವ ಟ್ವೀಟ್​ಗೆ ‘ಡಿ ಬಾಸ್​ ಕ್ರೇಜ್​ ಕಾ ಬಾಪ್‘​ ಹೆಸರಿನ ಟ್ವಿಟ್ಟರ್​ ಖಾತೆಯಿಂದ ‘ಧನ್ಯವಾದಗಳು ಸರ್​, ನಮ್ಮ ಡಿ ಬಾಸ್​ ರೇಂಜ್​ಗೆ ನೀವು ಬೆಳೆಯಬೇಕು‘ ಎಂದು ಟ್ಟೀಟ್​ ಮಾಡಿದ್ದಾರೆ.  ಈ ಟ್ಟೀಟ್​ ನೋಡಿ ಅಪ್ಪು ಅಭಿಮಾನಿಗಳು ಸಿಟ್ಟಾಗಿದ್ದಾರೆ. ಮೊದಲು ಟ್ವೀಟ್​ ಡಿಲೀಟ್​ ಮಾಡು ಎಂದಿದ್ದಾರೆ. ಈಗಾಗಲೇ ಅಪ್ಪು ಸಾರ್​ ಸಾಕಷ್ಟು ಬೆಳೆದಿದ್ದಾರೆ. ಟ್ವೀಟ್​ ಬರೆಯುವಾಗ ಸ್ವಲ್ಪ ಯೋಚಿಸು ಎಂದು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

  ಓರ್ವ ಟ್ವಿಟ್ಟಿಗ ಓ ಭ್ರಮೆ. ಮೊದಲು ನಿಮ್ಮ ಬಾಸ್​ ಅಪ್ಪು ರೇಂಜ್​ಗೆ ಬೆಳೆಯಲಿ ಎಂದಿದ್ದಾರೆ. ಮತ್ತೋರ್ವ ಮೊದಲು ಟ್ವೀಟ್​ ಡಿಲೀಟ್​ ಮಾಡು ಅಪ್ಪು ಮತ್ತು ದರ್ಶನ್​ ನಡುವೆ ತಂದಿಡುವ ಕೆಲಸ ಮಾಡಬೇಡ ಎಂದಿದ್ದಾರೆ. ಕೊನೆಗೆ ಆತ ಕಾಮೆಂಟ್​  ಡಿಲೀಟ್​​ ಮಾಡಿದ್ದಾನೆ.

   

     ಇದನ್ನೂ ಓದಿ: ಪ್ರೇಮಿಗಳು ಕೈ ಕೈ ಹಿಡಿದು ಹೋದರೆ ಕಲ್ಲಲ್ಲಿ ಹೊಡಿಬೇಕು; ರಶ್ಮಿಕಾ ಮಂದಣ್ಣ ಗರಂ
  First published: