ದರ್ಶನ್ ಹಾಗೂ ಕಿಚ್ಚ ಸುದೀಪ್ ನಡುವಿನ ಮನಸ್ತಾಪದ ಬಗ್ಗೆ ಗೊತ್ತೇ ಇದೆ. ಇದೇ ಕಾರಣಕ್ಕೆ ಆಗಾಗ ಈ ಸ್ಟಾರ್ಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಜಗಳವಾಡುತ್ತಲೇ ಇರುತ್ತಾರೆ. ದರ್ಶನ್ ಅವರ ಸಿನಿಮಾದ ಟ್ರೇಲರ್, ಟೀಸರ್ ಹಾಗೂ ಹಾಡು ಬಿಡಗಡೆಯಾದರೆ ಸಾಕು, ಅಂತೆಯೇ ಕಿಚ್ಚ ಸುದೀಪ್ ಅವರ ಸಿನಿಮಾ ಕುರಿತಾದ ಯಾವುದಾದರೂ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡೋಕೆ ಆರಂಭಿಸಿದರೆ ಸಾಕು ಇಬ್ಬರೂ ನಟರ ಅಭಿಮಾನಿಗಳಲ್ಲಿ ವಾರ್ ಶುರುವಾಗುತ್ತದೆ. ಈ ಹಿಂದೆ ಸಾಕಷ್ಟು ಸಲ ದರ್ಶನ್ ಹಾಗೂ ಕಿಚ್ಚನ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಕ್ಷರ ಸಮರ ನಡೆಸಿದ್ದು ಗೊತ್ತೇ ಇದೆ. ಆದರೆ, ದರ್ಶನ್ ಹಾಗೂ ಕಿಚ್ಚನ ಅಭಿಮಾನಿಗಳಲ್ಲಿ ಸಾಕಷ್ಟು ಮಂದಿಗೆ ಈ ಜೋಡಿ ಮತ್ತೆ ಒಂದಾಗಬೇಕು ಅನ್ನೋ ಆಸೆ. ಅದನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ವ್ಯಕ್ತಪಡಿಸುತ್ತಲೇ ಇರುತ್ತಾರೆ.
ಜಿಗರಿ ದೋಸ್ತಿಗಳು ಮತ್ತೆ ಮೊದಲಿನಂತೆ ಸ್ನೇಹದಿಂದಿರುವುದನ್ನು ನೋಡಬೇಕೆನ್ನುತ್ತಾ ಕಿಚ್ಚ-ದಚ್ಚು ಜೊತೆಗಿರುವ ಹಳೇ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ದರ್ಶನ್ ಹಾಗೂ ಸುದೀಪ್ ಜೊತೆಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
View this post on Instagram
Here it is... pic.twitter.com/5LizJN0ZKn
— karan acharya (@karanacharya7) December 10, 2020
ಇದನ್ನೂ ಓದಿ: ಮುದ್ದಾದ ಮಗುವಿನ ಮೊದಲ ಫೋಟೋ ಶೇರ್ ಮಾಡಿದ ಪವನ್ ಒಡೆಯರ್..!
ಅಭಿಮಾನಿಯ ಅಭಿಮಾನಕ್ಕೆ ಸೋತ ಕರಣ್ ಆಚಾರ್ಯ ಈ ಚಿತ್ರ ಬಿಡಿಸಿದ್ದಾರೆ. ಈಗ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವರು ಈ ಫೋಟೋ ನೋಡಿ ಸಿಟ್ಟಾದರೆ, ಮತ್ತೆ ಕೆಲವರು ಈ ಎಂದಿಗೂ ಆಗೋದಿಲ್ಲ ಅಂತ ಗೊತ್ತು ಬಿಡಿ ಎನ್ನುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ