ಸ್ಯಾಂಡಲ್‍ವುಡ್‍ನಲ್ಲಿ ಹೊಸ ಸಿನಿಮಾ `ದಚ್ಚ-ದೀಪು': ದರ್ಶನ್-ಸುದೀಪ್ ಅಭಿಮಾನಿಗಳ ಕಥೇನಾ ಇದು..?

Anitha E | news18
Updated:July 11, 2018, 12:57 PM IST
ಸ್ಯಾಂಡಲ್‍ವುಡ್‍ನಲ್ಲಿ ಹೊಸ ಸಿನಿಮಾ `ದಚ್ಚ-ದೀಪು': ದರ್ಶನ್-ಸುದೀಪ್ ಅಭಿಮಾನಿಗಳ ಕಥೇನಾ ಇದು..?
Anitha E | news18
Updated: July 11, 2018, 12:57 PM IST
ಓಂ ಸಕಲೇಶಪುರ, ನ್ಯೂಸ್ 18 ಕನ್ನಡ

'ದಚ್ಚು ದೀಪು'.. ಇದು ಸೆಟ್ಟೇರುತ್ತಿರೋ ಹೊಸ ಸಿನಿಮಾದ ಟೈಟಲ್. ಇನ್ನು ಕಿಕ್ಕರ್ ಕೇಳಿದರೆ ಇದನ್ನು ಏಕೆ ಹೇಳುತ್ತಿದ್ದೇವೆ ಎನ್ನುವುದರ ಅಸಲಿ ಐಡಿಯಾ ಸಿಗುತ್ತೆ ನಿಮಗೆ. `ಅಭಿಮಾನಿಗಳು ನೀವು ಅಂದುಕೊಂಡಂಗಲ್ಲ ನಾವು' ಅನ್ನೋದು ಕಿಕ್ಕರ್. ಇದು ದರ್ಶನ್ ಸುದೀಪ್ ಅಭಿಮಾನಿಗಳ ಕಥೆ. ಸಂಬಂಧ ಸರಿಯಾಗಿಲ್ಲದ ಇಬ್ಬರು ಸ್ಟಾರ್​ಗಳ ಕಥೆ ಹೇಳೋಕೆ ಹೊರಟಿರೋದು ಯಾರು ಅನ್ನೋದರ ಸಂಪೂರ್ಣ ವರದಿ ಇಲ್ಲಿದೆ.

ಒಂದು ಕಾಲದಲ್ಲಿ ಅಕ್ಕಪಕ್ಕದಲ್ಲಿ ಕುಳಿತು ಊಟ ಮಾಡುತ್ತಿದ್ದವರು. ಒಬ್ಬರ ಸಿನಿಮಾಗೆ ಮತ್ತೊಬ್ಬರು ಶಹಬ್ಬಾಸ್ ಹೇಳುತ್ತಿದ್ದವರು. ಅಷ್ಟೇ ಯಾಕೆ ತಮ್ಮ ಸ್ನೇಹದಿಂದ ಸ್ಯಾಂಡಲ್‍ವುಡ್‍ನ ಭವಿಷ್ಯದ ವಿಷ್ಣು-ಅಂಬಿಯಂತಹ ಕುಚುಕು ಗೆಳೆಯರೂ ಅಂತಲೇ ಕರೆಸಿಕೊಂಡ ಸ್ಟಾರ್ ನಟರಾದ ದರ್ಶನ್-ಸುದೀಪ್ ಸಂಬಂಧ ಹಳಸಿ ಬಹಳ ದಿನಗಳೇ ಆಗಿದೆ. ಆಗಾಗ ಅಭಿಮಾನಿಗಳ ತಿಕ್ಕಾಟವೂ ನಡೀತಾನೇ ಇರುತ್ತೆ. ಈಗ ಅಂತಹ ಅಭಿಮಾನಿಗಳು ಸಿನಿಮಾವನ್ನೇ ಮಾಡೋಕೆ ಹೊರಟಿದ್ದಾರೆ.

ಹೊಸಬರ ಸಿನಿಮಾ 'ದಚ್ಚು ದೀಪು' ಟೈಟಲ್ ಡಿಸೈನ್‍ನಲ್ಲಿ ದರ್ಶನ್ ಚಿತ್ರವನ್ನು ಮಾತ್ರ ಚೆನ್ನಾಗಿ ತೋರಿಸಿದ್ದು ಸುದೀಪ್ ಮುಖ ಪತ್ತೆ ಹಚ್ಚೋದು ಕಷ್ಟ. ಈ ವಿಷಯವೇ ಸುದೀಪ್ ಅಭಿಮಾನಿಗಳನ್ನು ಬೇಸರಕ್ಕೀಡು ಮಾಡೋದರಲ್ಲಿ ಅನುಮಾನವಿಲ್ಲ. ಈ ಕಾರಣದಿಂದಲೇ ಟೈಟಲ್‍ಗೇ ಕಂಟಕ ಬಂದರೂ ಬರಬಹುದು.

ಕರುನಾಡು ಕ್ರಿಯೇಷನ್ಸ್ ಬ್ಯಾನರ್​ನಲ್ಲಿ ರಂಜಿತ್ ತೀಗಡಿ ಅನ್ನೋ ನಿರ್ದೇಶಕರು 'ದಚ್ಚು-ದೀಪು' ಅನ್ನೋ ಟೈಟಲ್‍ನಲ್ಲಿ ಸಿನಿಮಾ ಮಾಡೋಕೆ ಹೊರಟಿದ್ದಾರೆ. ಒಂದು ಕಡೆ ಚಾಲೆಂಜಿಂಗ್‍ಸ್ಟಾರ್ ದರ್ಶನ್ ಮತ್ತೊಂದು ಕಡೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ. ಈ ಇಬ್ಬರ ಫ್ಯಾನ್ಸ್ ಕೂಡ ಚಿತ್ರದ ಬಗ್ಗೆ ಮೈಯಲ್ಲ ಕಣ್ಣಾಗಿ ಕಾಯೋದರಲ್ಲಿ ಅನುಮಾನವಿಲ್ಲ.

ಇನ್ನು ಈಗಾಗಲೇ 'ದಿ ವಿಲನ್' ಚಿತ್ರದ ಟೀಸರ್ ನೋಡಿನೇ ತಮ್ಮ ನೆಚ್ಚಿನ ಸ್ಟಾರ್ ಪರ ಪಟ್ಟು ಹಿಡಿದು ಹೋರಾಟಕ್ಕಿಳಿದಿರೋ ಅಭಿಮಾನಿಗಳನ್ನು ನೋಡಿದರೆ 'ದಚ್ಚು ದೀಪು' ಅತಿರೇಖ ಇನ್ನೆಲ್ಲಿಗೆ ಮುಟ್ಟುತ್ತೋ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

 
Loading...

 

 

 
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ