ಬೆಳ್ಳಂಬೆಳಿಗ್ಗೆಯೇ ತಾರಕಕ್ಕೇರಿತು ಸ್ಟಾರ್ ಫ್ಯಾನ್ಸ್ ವಾರ್; ಟ್ರೋಲ್ ಆದ ದರ್ಶನ್-ಸುದೀಪ್

Darshan And Sudeep Tweet War: ರಾಕೇಶ್​ ಫೇಸ್​​ಬುಕ್​ನಲ್ಲಿ ‘ಪೈಲ್ವಾನ್​’ ಸಿನಿಮಾದ ಲಿಂಕ್​ ಶೇರ್​ ಮಾಡಿಕೊಂಡಿದ್ದ. ಹೀಗಾಗಿ, ರಾಕೇಶ್ ಮೊಬೈಲ್​ಅನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿ, ತನಿಖೆ ನಡೆಸಿದ್ದರು. ವಿಚಾರಣೆ ವೇಳೆ ಆತ ತಾನು ದರ್ಶನ್​ ಅಭಿಮಾನಿ ಎಂಬುದನ್ನು ಒಪ್ಪಿಕೊಂಡಿದ್ದ. ಇದಾದ ಬೆನ್ನಲ್ಲೇ ಫ್ಯಾನ್ಸ್​ ವಾರ್ ಆರಂಭವಾಗಿದೆ.

news18-kannada
Updated:September 21, 2019, 10:43 AM IST
ಬೆಳ್ಳಂಬೆಳಿಗ್ಗೆಯೇ ತಾರಕಕ್ಕೇರಿತು ಸ್ಟಾರ್ ಫ್ಯಾನ್ಸ್ ವಾರ್; ಟ್ರೋಲ್ ಆದ ದರ್ಶನ್-ಸುದೀಪ್
ಸುದೀಪ್​ ದರ್ಶನ್​
  • Share this:
ಸ್ಯಾಂಡಲ್​ವುಡ್​ನಲ್ಲಿ ಹೊತ್ತಿಕೊಂಡಿರುವ  ಸ್ಟಾರ್​​ ವಾರ್​ ಬೆಂಕಿ ಇಂದು ನಾಳೆಗೆ ನಿಲ್ಲುವ ಸೂಚನೆ ಕಾಣುತ್ತಿಲ್ಲ. ‘ನನ್ನ ಅಭಿಮಾನಿಗಳ ತಂಟೆಗೆ ಬರಬೇಡಿ’ ಎಂದು ದರ್ಶನ್​ ಎಚ್ಚರಿಕೆ ನೀಡಿದ ಬೆನ್ನಲ್ಲೇ ‘ನಾವು ತೊಟ್ಟಿದ್ದು ಕಡಗ, ಬಳೆ ಅಲ್ಲ’ ಎನ್ನುವ ಮೂಲಕ ಸುದೀಪ್​ ತಿರುಗೇಟು ನೀಡಿದ್ದರು. ಈ ಬೆಳವಣಿಗೆಯಿಂದ ಸ್ಟಾರ್​ ಫ್ಯಾನ್ಸ್​ ವಾರ್​ ತಾರಕಕ್ಕೇರಿದೆ.

‘ಪೈಲ್ವಾನ್​’ ಪೈರಸಿ ಲಿಂಕ್​ ಶೇರ್​ ಮಾಡಿದ ಪ್ರಕರಣದಲ್ಲಿ ನೆಲಮಂಗಲದ ಹಿಮಚೇನಹಳ್ಳಿ ನಿವಾಸಿ ರಾಕೇಶ್​ನನ್ನು ಬಂಧಿಸಲಾಗಿತ್ತು. ರಾಕೇಶ್​ ಫೇಸ್​​ಬುಕ್​ನಲ್ಲಿ ‘ಪೈಲ್ವಾನ್​’ ಸಿನಿಮಾದ ಲಿಂಕ್​ ಶೇರ್​ ಮಾಡಿಕೊಂಡಿದ್ದ. ಹೀಗಾಗಿ, ರಾಕೇಶ್ ಮೊಬೈಲ್​ಅನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿ, ತನಿಖೆ ನಡೆಸಿದ್ದರು. ವಿಚಾರಣೆ ವೇಳೆ ಆತ ತಾನು ದರ್ಶನ್​ ಅಭಿಮಾನಿ ಎಂಬುದನ್ನು ಒಪ್ಪಿಕೊಂಡಿದ್ದ.

ಇದಾದ ಬೆನ್ನಲ್ಲೇ ಟ್ವೀಟ್​ ಮಾಡಿದ್ದ ಸುದೀಪ್​, “ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ. ನನ್ನ ಮೌನ, ನನ್ನ ತಾಳ್ಮೆ ಎರಡನ್ನೂ ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳು ಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ ಇನ್ನು ಕೆಲವು ದಿನಗಳ ಮಾತ್ರ”ಎಂದು ಬರೆದುಕೊಂಡಿದ್ದರು.

 

 

ಇದನ್ನೂ ಓದಿ: ಪೈಲ್ವಾನ್​ ಸಿನಿಮಾ ಪೈರಸಿ ಪ್ರಕರಣ; ದರ್ಶನ್​ ಅಭಿಮಾನಿ ಎಂದು ವಿಚಾರಣೆಯಲ್ಲಿ ಒಪ್ಪಿಕೊಂಡ ಆರೋಪಿ

ಕಿಚ್ಚನ ಬೆಂಬಲ ಅಭಿಮಾನಿಗಳಿಗೆ ಹೊಸ ಹುರುಪು ನೀಡಿದ್ದು, ದರ್ಶನ್​ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ. ಇತ್ತೀಚೆಗೆ ದರ್ಶನ್​ ನೀಡಿದ್ದ ಎಚ್ಚರಿಕೆಯನ್ನು ಎಡಿಟ್​ ಮಾಡಿರುವ ಸುದೀಪ್​ ಅಭಿಮಾನಿಗಳು, “ನಾನು ಸಧ್ಯಕ್ಕೆ ಬೆಂಗಳೂರಿನಲ್ಲಿ ಇಲ್ಲ. ನನಗೆ ಇದರ ಬಗ್ಗೆ ಗೊತ್ತಿಲ್ಲ. ನನ್ನನ್ನು ಬಿಟ್ಟು ಬಿಡಿ ಅಣ್ಣ” ಎಂದು ಬದಲಾಯಿಸಿದ್ದಾರೆ.

ಇನ್ನು ದರ್ಶನ್​ ಅಭಿಮಾನಿಗಳು ಸುದೀಪ್​ ಅವರನ್ನು ಟ್ರೋಲ್​ ಮಾಡಿದ್ದಾರೆ. ಈ ಮೊದಲು ಪಲ್ಲವಿ ಹೆಸರಿನ ಹುಡುಗಿ ದರ್ಶನ್​ ಗ್ರೂಪ್​ನಲ್ಲಿ ‘ಕುರುಕ್ಷೇತ್ರ’ ಸಿನಿಮಾದ ಪೈರಸಿ ಲಿಂಕ್​ ಶೇರ್​ ಮಾಡಿದ್ದರು. ಹಾಗಿದ್ದರೂ ಒಂದು ಹುಡುಗಿಯ ಭವಿಷ್ಯವನ್ನ ಯೋಚಿಸಿ ದರ್ಶನ್ ಸುಮ್ಮನಾಗಿದ್ದರು. ಹೀಗಾಗಿ ಕುರುಕ್ಷೇತ್ರ ತಂಡ ಹುಡುಗಿ ವಿರುದ್ಧ ದೂರು ದಾಖಲಿಸಿರಲಿಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ: ಪೈಲ್ವಾನ್ ಸಿನಿಮಾ ಪೈರಸಿ, ದರ್ಶನ್ ಅಭಿಮಾನಿ ಅರೆಸ್ಟ್; ಬುಡಮುಟ್ಟುವ ತನಕ ಸುಮ್ಮನೆ ಕೂರಲ್ಲ; ನಟ ಸುದೀಪ್ ಆವಾಜ್!

‘ಪೈಲ್ವಾನ್​’ ಸಿನಿಮಾ ತೆರೆಕಂಡ ಬೆನ್ನಲ್ಲೇ ದರ್ಶನ್​ ಹಾಗೂ ಸುದೀಪ್​ ಅಭಿಮಾನಿಗಳ ನಡುವೆ ಟ್ವೀಟ್​ ವಾರ್​ ಆರಂಭಗೊಂಡಿತ್ತು. ಸಿನಿಮಾ ಪೈರಸಿ ಆಗಿದ್ದಕ್ಕೆ ದರ್ಶನ್​ ಅಭಿಮಾನಿಗಳು ಕಾರಣ ಎಂದು ಸುದೀಪ್​ ಹಿಂಬಾಲಕರು ಹೇಳಿಕೊಂಡಿದ್ದರೆ, ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂದು ಡಿ ಬಾಸ್​ ಬೆಂಬಲಿಗರು ಸ್ಪಷ್ಟನೆ ನೀಡಿದ್ದರು.

First published:September 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ