ದಸರಾಗೆ ನಡೆಯಲಿದೆಯಾ ದರ್ಶನ್​-ಅಪ್ಪು ನಡುವೆ ಭಾರೀ ಪೈಪೋಟಿ!

news18
Updated:July 21, 2018, 12:05 PM IST
ದಸರಾಗೆ ನಡೆಯಲಿದೆಯಾ ದರ್ಶನ್​-ಅಪ್ಪು ನಡುವೆ ಭಾರೀ ಪೈಪೋಟಿ!
news18
Updated: July 21, 2018, 12:05 PM IST
ಆನಂದ್ ಸಾಲುಂಡಿ, ನ್ಯೂಸ್ 18 ಕನ್ನಡ

ಯಾವುದೇ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗದಿರೋ ಕಾರಣ ಕಳೆದ ಕೆಲವು ತಿಂಗಳುಗಳಿಂದ ಸ್ಯಾಂಡಲ್‍ವುಡ್ ಬಾಕ್ಸಾಫಿಸ್ ಅಷಾಢದ ಚಳಿಯಷ್ಟೇ ತಣ್ಣಗಿದೆ. ಆದರೆ ಆಷಾಢ ಕಳೆದು ಶ್ರಾವಣ ಮಾಸ ಶುರುವಾಗುತ್ತಿದ್ದಂತೆ ಕನ್ನಡ ಚಿತ್ರರಂಗದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಲಿವೆ. ಥಿಯೇಟರ್ ಮುಂದೆ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಲಿದೆ. ಅದು ಹೇಗೆ ಅಂತೀರಾ ಆ ಕುರಿತ ಒಂದು ವರದಿ ಇಲ್ಲಿದೆ ಓದಿ.

ಅಷಾಢದಲ್ಲಿ ಮೋಡ ಮುಸುಕಿದಂತೆ ಇರುವ ಕನ್ನಡ ಚಿತ್ರರಂಗ ಅಷಾಢ ಕಳೆದು ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಬಿರುಸಿನ ಚಟುವಟಿಕೆಗಳ ತಾಣವಾಗಲಿದೆ. ಇದಕ್ಕೆ ಮುನ್ನುಡಿಯನ್ನ ಬಹು ನಿರೀಕ್ಷಿತ ಸಿನಿಮಾ 'ದಿ ವಿಲನ್' ಬರೆಯಲಿದ್ದು. ವರಮಹಾಲಕ್ಷ್ಮೀ  ಹಬ್ಬಕ್ಕೆ ಈ ಸಿನಿಮಾ ಪ್ರೇಕ್ಷಕರೆದುರು ಬರೋಕೆ ಸಜ್ಜಾಗಿದೆ.

ಶ್ರಾವಣ ಮಾಸದೊಂದಿಗೆ ಹಬ್ಬಗಳು ಶುರುವಾಗುವಂತೆ, ಕನ್ನಡ ಚಿತ್ರರಂಗದಲ್ಲೂ `ದಿ ವಿಲನ್'ನೊಂದಿಗೆ ದೊಡ್ಡ ಚಿತ್ರಗಳ ಬಿಡುಗಡೆಯ ಹಬ್ಬ ಶುರುವಾಗಲಿದೆ. 'ದಿ ವಿಲನ್' ಬಿಡುಗಡೆಯಾದ ಒಂದು ತಿಂಗಳಿಗೆ ಸರಿಯಾಗಿ ದಸರಾ ಹಬ್ಬ ಬರಲಿದ್ದು, ಈ ಹಬ್ಬಕ್ಕೊಂದು ರಂಗು ತುಂಬಲು ಪುನೀತ್‍ ರಾಜ್‍ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿದ್ದವಾಗುತ್ತಿದೆ.

ಇನ್ನು ಇದೇ ದಿನ ಚಾಮುಂಡೇಶ್ವರಿಯ ಆಶೀರ್ವಾದದೊಂದಿಗೆ ಬಾಕ್ಸಾಫಿಸ್‍ನಲ್ಲಿ ಅಬ್ಬರಿಸಲು 'ಕುರುಕ್ಷೇತ್ರವೂ' ಸಿದ್ಧವಾಗುತ್ತಿದೆಯಂತೆ. ಅಲ್ಲಿಗೆ ದರ್ಶನ್-ಪುನೀತ್ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವ ಮೂಲಕ ಬಾಕ್ಸಾಫಿಸ್‍ನಲ್ಲಿ ನೇರಾ ನೇರ ಪೈಪೋಟಿಗೆ ಇಳಿಯೋ ಸಾಧ್ಯತೆಯೊಂದು ಸದ್ಯಕ್ಕೆ ಗೋಚರಿಸುತ್ತಿದೆ.

 

 
First published:July 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ