ಸಾಕಷ್ಟು ಏಳುಬೀಳನ್ನು ಕಂಡ 2020 ಅನ್ನು ಕರಾಳ ವರ್ಷವೆಂದೇ ಕರೆಯಲಾಗುತ್ತಿದೆ. ಇಡೀ ಪ್ರಪಂಚಕ್ಕೆ ಸಂಕಷ್ಟವನ್ನು ತಂದೊಡ್ಡಿದ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲಾಗಿದೆ. ಕೊರೋನಾ ಎಂಬ ವೈರಸ್ನಿಂದಾಗಿ ಲಕ್ಷಾಂತರ ಮಂದಿ ಸಾವನ್ನಪ್ಪಿದರೆ, ಅದರಿಂದ ಇಡೀ ವಿಶ್ವವೇ ಸಂಕಷ್ಟಕ್ಕೆ ಸಿಲುಕುವಂತಾಯಿತು. ಈ ಸೋಂಕು ಹರಡುವ ಕಾರಣದಿಂದಲೇ ಈ ಸಲ ಹಬ್ಬ, ಸಭೆ-ಸಮಾರಂಭಗಳನ್ನು ತೀರಾ ಸರಳವಾಗಿ ಆಚರಿಸುವಂತಾಯಿತು. ಹೊಸ ವರ್ಷದ ಸಂಭ್ರಮಾಚರಣೆಯೂ ಕಳೆಗುಂದಿದೆ. ಇನ್ನು ಕೊರೋನಾ ಕಾರಣದಿಂದಾಗಿ ಸಿನಿರಂಗ ಸಹ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಚಿತ್ರತಮಂದಿರಗಳು 7 ತಿಂಗಳಿಗೂ ಹೆಚ್ಚು ಸಮಯ ಮುಚ್ಚಲ್ಪಟ್ಟಿದ್ದವು. ನಿಮಾಘಣವಾಗಿರುವ ಸಿನಿಮಾಗಳು ಜನರು ಥಿಯೇಟರ್ಗೆ ಬಾರದ ಕಾರಣದಿಂದ ಇನ್ನೂ ತೆರೆ ಕಾಣುತ್ತಿಲ್ಲ. ಸೆಲೆಬ್ರಿಟಿಗಳು ಪ್ರೇಕ್ಷಕರನ್ನು ಸಿನಿಮಾ ನೋಡಲು ಬನ್ನಿ ಎಂದು ಮನವಿ ಮಾಡುತ್ತಿದ್ದಾರೆ. ಆದರೆ ಈ ಎಲ್ಲ ಸಮಸ್ಯೆಗಳಿಗೂ ಹೊಸ ವರ್ಷದಲ್ಲಿ ಏನಾದರೂ ಪರಿಹಾರ ಸಿಗಬಹುದು ಅನ್ನೋ ಭರವಸೆಯಿಂದಿದ್ದಾರೆ ಜನರು.
ಇನ್ನು ಸ್ಯಾಂಡಲ್ವುಡ್ ಸೆಲೆಬ್ರಿಟಿಗಳೂ ಸಹ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಶುಭ ಕೋರುತ್ತಿದ್ದಾರೆ. ನಟ ದರ್ಶನ್, ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಈ ಕರೋನ ಮಹಾಮಾರಿ ನಮ್ಮ ಜೀವನದಿಂದ ದೂರವಾಗಲಿ. ಎಲ್ಲರ ಮನೆ ಮನಗಳಲ್ಲಿ ಹೊಸ ವರ್ಷವೂ ಸುಖ ಶಾಂತಿ ನೆಮ್ಮದಿ ನೆಲೆಸುವಂತಾಗಲಿ ಎಂದು ಹಾರೈಸಿದ್ದಾರೆ.
ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಆಶಿಸುತ್ತೇನೆ. ಆದಷ್ಟು ಬೇಗ ಈ ಕರೋನ ಮಹಾಮಾರಿ ನಮ್ಮ ಜೀವನದಿಂದ ದೂರವಾಗಲಿ. ಎಲ್ಲರ ಮನೆ ಮನಗಳಲ್ಲಿ ಹೊಸ ವರ್ಷವೂ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡಲಿ.
ಎಲ್ಲರಿಗೂ ಆಂಗ್ಲೋ ಕ್ಯಾಲೆಂಡರ್ ಅನುಸಾರವಾದ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು pic.twitter.com/o2yLDzoTNM
— Darshan Thoogudeepa (@dasadarshan) January 1, 2021
View this post on Instagram
View this post on Instagram
Happy New Year everyone 🤗 pic.twitter.com/0GeDF7dEyG
— Rakshit Shetty (@rakshitshetty) December 31, 2020
View this post on Instagram
View this post on Instagram
ಹೊಸವರ್ಷದ ಮೊದಲ ಮೆಟ್ಟಿಲ ದಿನದ ಶುಭಾಷಯ:)
ಇಂದಿನಿಂದ ನಿಮ್ಮ ಬಾಳು ಹಸನಾಗಿ ಮನಸ್ಸಿನ ಸಕಲ ಇಷ್ಟಾರ್ಥ ನೆರವೇರಲಿ ಶುಭಮಸ್ತು:) pic.twitter.com/UabQ6aOj1M
— ನವರಸನಾಯಕ ಜಗ್ಗೇಶ್ (@Jaggesh2) January 1, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ