ದರ್ಶನ್ ಚಿತ್ರಕ್ಕೂ-ಅಯೋಧ್ಯೆಗೂ ನಂಟು?; ರಾಮ ಜನ್ಮಭೂಮಿಯಲ್ಲಿ ನಡೆಯಲಿದೆ 53ನೇ ಸಿನಿಮಾ ಶೂಟಿಂಗ್

ಈಗಾಗಲೇ ತರುಣ್​ ಸುಧೀರ್​ ಉತ್ತರ ಪ್ರದೇಶಕ್ಕೆ ತೆರಳಿ ಕೆಲ ಪ್ರದೇಶಗಳನ್ನು ಗೊತ್ತು ಮಾಡಿಕೊಂಡು ಬಂದಿದ್ದಾರಂತೆ. ಸಂಕ್ರಾಂತಿಯಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.

Rajesh Duggumane | news18
Updated:December 4, 2018, 11:08 AM IST
ದರ್ಶನ್ ಚಿತ್ರಕ್ಕೂ-ಅಯೋಧ್ಯೆಗೂ ನಂಟು?; ರಾಮ ಜನ್ಮಭೂಮಿಯಲ್ಲಿ ನಡೆಯಲಿದೆ 53ನೇ ಸಿನಿಮಾ ಶೂಟಿಂಗ್
ದರ್ಶನ್​
  • News18
  • Last Updated: December 4, 2018, 11:08 AM IST
  • Share this:
ದರ್ಶನ್​ ತಮ್ಮ 53ನೇ ಚಿತ್ರಕ್ಕಾಗಿ ‘ಚೌಕ’ ಖ್ಯಾತಿಯ ತರುಣ್​ ಸುಧೀರ್​ ಜೊತೆ ಕೈಜೋಡಿಸಿದ್ದಾರೆ. ಇತ್ತೀಚೆಗೆ ಪೋಸ್ಟರ್​ ರಿಲೀಸ್​ ಮಾಡಿಕೊಂಡಿತ್ತು ಚಿತ್ರತಂಡ. ಪೋಸ್ಟರ್​ನಲ್ಲಿ ರಾಮ,ರಾವಣನ ವಿಚಾರಗಳು ಉಲ್ಲೇಖಿಸಲ್ಪಟ್ಟಿದ್ದವು. ಈಗ ಕೇಳಿ ಬರುತ್ತಿರುವ ಲೇಟೆಸ್ಟ್​ ಮಾಹಿತಿ ಏನೆಂದರೆ ಉತ್ತರ ಪ್ರದೇಶದಲ್ಲೇ ಈ ಚಿತ್ರದ ಶೂಟಿಂಗ್​ ನಡೆಯಲಿದೆಯಂತೆ. ಹಾಗಾಗಿ ಡಿ-ಬಾಸ್​ ಚಿತ್ರಕ್ಕೂ ಅಯೋಧ್ಯೆಗೂ ನಂಟಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

53ನೇ ಚಿತ್ರದ ಪೋಸ್ಟರ್​ನಲ್ಲಿ ದರ್ಶನ್​ ಬಾಲಕನ ಕೈ ಹಿಡಿದು ನಿಂತಿದ್ದಾರೆ. ‘ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು. ರಾವಣನ ಮುಂದೆ ಗೆಲ್ಲೋಕು ಗೊತ್ತು’ ಎನ್ನುವ ವಾಕ್ಯ ಇದೆ. ಜೊತೆಗೆ ಅಲ್ಲಿ ರಾವಣನ ಫೋಟೋ ಕೂಡ ಕಾಣುತ್ತದೆ. ಹಾಗಾಗಿ ಈ ಚಿತ್ರಕ್ಕೂ ರಾಮನಿಗೂ ಏನಾದರೂ ಸಂಬಂಧ ಇದೆಯಾ ಎನ್ನುವ ಪ್ರಶ್ನೆ ಮೂಡಿತ್ತು. ಈಗ ನಿರ್ದೇಶಕರು ಶೂಟಿಂಗ್​ಗೆ ಉತ್ತರ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ದರ್ಶನ್​ರ ಕನ್ನಡ ಪ್ರೀತಿ: 'ಒಡೆಯ' ಸಿನಿಮಾದಲ್ಲಿ ಕನ್ನಡಿಗರಿಗೆ ಮಾತ್ರ ಅವಕಾಶ ನೀಡಿದ ದಾಸ..!

ಉತ್ತರ ಪ್ರದೇಶದ ಅಯೋಧ್ಯೆ ರಾಮನ ಜನ್ಮಸ್ಥಳ. ರಾಮಾಯಣಕ್ಕೆ ಸಂಬಂಧಿಸಿದ ಸಾಕಷ್ಟು ಪ್ರದೇಶಗಳು ಉತ್ತರ ಪ್ರದೇಶದಲ್ಲಿವೆ. ಶೂಟಿಂಗ್​ಗೆ ಉತ್ತರ ಪ್ರದೇಶ ಆಯ್ದುಕೊಂಡಿರುವುದರಿಂದ ಸಿನಿಮಾಗೂ ಅಯೋಧ್ಯೆಗೂ ಕನೆಕ್ಷನ್​ ಇದೆ ಎನ್ನಲಾಗುತ್ತಿದೆ. ಈಗಾಗಲೇ ತರುಣ್​ ಸುಧೀರ್​ ಉತ್ತರ ಪ್ರದೇಶಕ್ಕೆ ತೆರಳಿ ಕೆಲ ಪ್ರದೇಶಗಳನ್ನು ಗೊತ್ತು ಮಾಡಿಕೊಂಡು ಬಂದಿದ್ದಾರಂತೆ. ಸಂಕ್ರಾಂತಿಯಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.

ಉಮಾಪತಿ ಶ್ರೀನಿವಾಸ್ ನಿರ್ಮಾಣದ ಈ ಚಿತ್ರದ ಶೀರ್ಷಿಕೆ ಕ್ರಿಸ್​ಮಸ್​ ದಿನದಂದು ಅನಾವರಣಗೊಳ್ಳಲಿದೆ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಸಿನಿಮಾ ಶೀರ್ಷೆಕೆ ಯಾವ ರೀತಿ ಇರಲಿದೆ ಎಂಬುದು ಸದ್ಯದ ಕುತೂಹಲ. ಸದ್ಯ, ದರ್ಶನ್​ 'ಯಜಮಾನ' ಚಿತ್ರದ ಶೂಟಿಂಗ್​ನಲ್ಲಿದ್ದಾರೆ. ಶೀಘ್ರದಲ್ಲೇ ಅವರು ಹಾಡಿನ ಚಿತ್ರೀಕರಣ ಪೂರ್ಣಗೊಳಿಸಿಕೊಳ್ಳಲಿದ್ದಾರೆ. ಅವರ ಅಭಿನಯದ 'ಕುರುಕ್ಷೇತ್ರ'  ಬಿಡುಗಡೆಗೆ ಸಜ್ಜಾಗಿದೆ.

ಇದನ್ನೂ ಓದಿ: ಪ್ರಯೋಗಾತ್ಮಕ ಸಿನಿಮಾಗಳ ಬೆನ್ನು ತಟ್ಟುವ ಕಾಯಕದಲ್ಲಿ ಬ್ಯುಸಿಯಾದ್ರು ‘ಚಾಲೆಂಜಿಂಗ್ ಸ್ಟಾರ್’ ದರ್ಶನ್

First published:December 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading