HOME » NEWS » Entertainment » DARLING KRISHNAS SRIKRISHNAGMAILCOM MOVIE LAUNCHED ZP

ಡಾರ್ಲಿಂಗ್ ಕೃಷ್ಣನ ಹೊಸ​ ಚಿತ್ರಕ್ಕೆ ಮುಹೂರ್ತ..!

ಸಂಜು ವೆಡ್ಸ್ ಗೀತಾ ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ನಾಗಶೇಖರ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕವಿರಾಜ್ ಈ ಚಿತ್ರದ ಹಾಡುಗಳನ್ನು ಬರೆಯುತ್ತಿದ್ದು, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

news18-kannada
Updated:June 18, 2020, 5:58 PM IST
ಡಾರ್ಲಿಂಗ್ ಕೃಷ್ಣನ ಹೊಸ​ ಚಿತ್ರಕ್ಕೆ ಮುಹೂರ್ತ..!
darling krishna
  • Share this:
ಸದಭಿರುಚಿಯ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ srikrishna@gmail.com ಚಿತ್ರದ ಮುಹೂರ್ತ ಸಮಾರಂಭ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಸರಳವಾಗಿ ನೆರವೇರಿತು. ನಾಗಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಡಾರ್ಲಿಂಗ್ ‌ಕೃಷ್ಣ ಅಭಿನಯಿಸುತ್ತಿದ್ದಾರೆ.

ನಟಸಾರ್ವಭೌಮ ಡಾ|| ರಾಜಕುಮಾರ್ ಅವರ ಭಾವಚಿತ್ರದ ಮೇಲೆ ಚಿತ್ರದ ಪ್ರಥಮ ಸನ್ನಿವೇಶವನ್ನು ಸೆರೆಹಿಡಿಯಲಾಯಿತು. ಮೊದಲ ದೃಶ್ಯಕ್ಕೆ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಪುತ್ರಿ ಬೃಂದಾ ಜಯರಾಂ ಆರಂಭ ಫಲಕ ತೋರಿದರೆ, ಪುತ್ರ ಸಂದೇಶ್ .ಎನ್(ನಿರ್ಮಾಪಕ)  ಕ್ಯಾಮೆರಾ ಚಾಲನೆ ಮಾಡಿದರು. 

ಬೃಂದಾ ಜಯರಾಂ


ಸಂದೇಶ್ ನಾಗರಾಜ್, ನಿರ್ದೇಶಕ ನಾಗಶೇಖರ್, ನಾಯಕ ಡಾರ್ಲಿಂಗ್ ಕೃಷ್ಣ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗೀತರಚನೆಕಾರ ಕವಿರಾಜ್, ಛಾಯಾಗ್ರಾಹಕ ಸತ್ಯ ಹೆಗಡೆ, ನಟಿ ಮಿಲನ‌ ನಾಗರಾಜ್ ಮುಂತಾದ ಗಣ್ಯರು ಈ ಸರಳ ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾದರು.

ನಿರ್ಮಾಪಕ ಸಂದೇಶ್ ನಾಗರಾಜ್ ಮತ್ತು ನಟ ಕೃಷ್ಣ


ಈ ಹಿಂದೆ ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿದ್ದ ಅಮರ್ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸಿದ್ದು, ನಾಗಶೇಖರ್ ಅವರೇ ನಿರ್ದೇಶಿಸಿದ್ದರು. ಈಗ ಮತ್ತೊಮ್ಮೆ ಇವರಿಬ್ಬರು ಒಂದಾಗಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಸರ್ಕಾರದ ಅನುಮತಿ ದೊರಕಿದ ಕೂಡಲೆ, ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ.

srikrishna@gmail.com ಟೀಮ್
'ಸಂಜು ವೆಡ್ಸ್ ಗೀತಾ' ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ನಾಗಶೇಖರ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕವಿರಾಜ್ ಈ ಚಿತ್ರದ ಹಾಡುಗಳನ್ನು ಬರೆಯುತ್ತಿದ್ದು, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.
First published: June 18, 2020, 5:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading