Release Date: ಅಕ್ಟೋಬರ್​ನಲ್ಲಿ ಕನ್ನಡ-ಮಲಯಾಳಂನಲ್ಲಿ ತೆರೆ ಕಾಣಲಿದೆ ಡಾರ್ಲಿಂಗ್ ಕೃಷ್ಣ ಅಭಿನಯದ ಈ ಸಿನಿಮಾ..!

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಾರ್ಲಿಂಗ್ ಕೃಷ್ಣ ಅಭಿನಯದ ಸಿನಿಮಾ ಒಂದು ರಿಲೀಸ್​ಗೆ ರೆಡಿಯಾಗಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ srikrishna@gmail.com ಚಿತ್ರದ ರಿಲೀಸ್​ ದಿನಾಂಕ ಪ್ರಕಟವಾಗಿದೆ.

srikrishna@gmail.com ಸಿನಿಮಾ ರಿಲೀಸ್ ದಿನಾಂಕ ಪ್ರಕಟ

srikrishna@gmail.com ಸಿನಿಮಾ ರಿಲೀಸ್ ದಿನಾಂಕ ಪ್ರಕಟ

  • Share this:
ಸ್ಯಾಂಡಲ್​ವುಡ್​ನಲ್ಲಿ ಸದಭಿರುಚಿಯ ಸಿನಿಮಾಗಳನ್ನು ನಿರ್ಮಿಸುತ್ತಿರುವ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ  srikrishna@gmail.com ಚಿತ್ರದಲ್ಲಿ  ನಾಯಕರಾಗಿ ಡಾರ್ಲಿಂಗ್ ‌ಕೃಷ್ಣ (Darling Krishna) ಅಭಿನಯಿಸುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ಭಾವನಾ ಮೆನನ್ (Bhavana Menon)​ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಕಳೆದ ವರ್ಷ ಜೂನ್​ನಲ್ಲಿ ಈ ಸಿನಿಮಾ ಮುಹೂರ್ತ ಸಮಾರಂಭ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ಸರಳವಾಗಿ ನೆರವೇರಿತ್ತು. ನಾಗಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ದೃಶ್ಯವನ್ನು ನಟಸಾರ್ವಭೌಮ ಡಾ|| ರಾಜಕುಮಾರ್ ಅವರ ಭಾವಚಿತ್ರದ ಮೇಲೆ ಚಿತ್ರವನ್ನು ಸೆರೆಹಿಡಿಯುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಈ ಸಿನಿಮಾದ ಮೊದಲ ದೃಶ್ಯಕ್ಕೆ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಮಗಳು ಬೃಂದಾ ಜಯರಾಂ ಆರಂಭ ಫಲಕ ತೋರಿದರೆ, ಪುತ್ರ ಸಂದೇಶ್ .ಎನ್(ನಿರ್ಮಾಪಕ) ಕ್ಯಾಮೆರಾಗೆ ಚಾಲನೆ ನೀಡಿದ್ದರು.

'ಸಂಜು ವೆಡ್ಸ್ ಗೀತಾ' ಸೇರಿದಂತೆ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ನಾಗಶೇಖರ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕವಿರಾಜ್ ಈ ಚಿತ್ರದ ಹಾಡುಗಳನ್ನು ಬರೆಯುತ್ತಿದ್ದು, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಈ ಸಿನಿಮಾ ಕನ್ನಡ ಹಾಗೂ ಮಲಯಾಳಂನಲ್ಲಿ ತೆರೆ ಕಾಣಲಿದ್ದು, ಮುಂದಿನ ತಿಂಗಳು ಅಂದರೆ, ಅಕ್ಟೋಬರ್​ 14ರಂದು ಚಿತ್ರಮಂದಿರಕ್ಕೆ ಅಪ್ಪಳಿಸಲಿದೆ. ಈ ವಿಷಯವನ್ನು ಡಾರ್ಲಿಂಗ್ ಕೃಷ್ಣ ಹಾಗೂ ನಿರ್ದೇಶಕ ನಾಗಶೇರ್​ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಪದೇ ಪದೇ ಕ್ಷಮೆ ಕೇಳಿದ ನಟಿ Rashmika Mandanna: ಕಾರಣ ಏನು ಗೊತ್ತಾ..?

ಸಂದೇಶ್ ನಾಗರಾಜ್ ನಿರ್ಮಾಣದ ಈ ಸಿನಿಮಾಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಸಂಗೀತ ನೀಡಲಿದ್ದು, ಗೀತರಚನೆಕಾರ ಕವಿರಾಜ್ ಅವರು ಸಾಹಿತ್ಯ ಕೊಟ್ಟಿದ್ದಾರೆ. ಈ ಹಿಂದೆ ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿದ್ದ ಅಮರ್ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸಿದ್ದು, ನಾಗಶೇಖರ್ ಅವರೇ ನಿರ್ದೇಶಿಸಿದ್ದರು. ಆದರೆ, ಅಮರ್ ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡಲೇ ಇಲ್ಲ. ಈಗ ಮತ್ತೊಮ್ಮೆ ಸಂದೇಶ್ ಹಾಗೂ ನಾಗಶೇಖರ್​ ಅವರು srikrishna@gmail.com ಸಿನಿಮಾಗಾಗಿ ಒಂದಾಗಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣಕ್ಕೆ ಸರ್ಕಾರದ ಅನುಮತಿ ದೊರಕಿದ ಕೂಡಲೆ, ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭಿಸಲಾಗಿತ್ತು.

ಇದನ್ನೂ ಓದಿ: Sudharani ಮನೆಯಲ್ಲಿ ರಾಗಿ ಮುದ್ದೆ ಪಾರ್ಟಿ: ಎಂಜಾಯ್​ ಮಾಡಿದ ಶ್ರುತಿ-ಮಾಳವಿಕಾ ಅವಿನಾಶ್​..!

ಇನ್ನು ಲವ್​ ಮಾಕ್ಟೇಲ್​ ಸಿನಿಮಾ ಹಿಟ್​ ಆದ ನಂತರ ಡಾರ್ಲಿಂಗ್ ಕೃಷ್ಣ ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಹೆಚ್ಚಿದೆ. ಸದ್ಯ ಡಾರ್ಲಿಂಗ್ ಕೃಷ್ಣ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಲವ್​ ಮಾಕ್ಟೇಲ್​ 2, ಲವ್​ ಮಿ ಆರ್​ ಹೇಟ್​ ಮಿ, ಶುಗರ್ ಫ್ಯಾಕ್ಟರಿ, ಮಿ. ಬ್ಯಾಚುಲರ್​ ಚಿತ್ರಗಳಲ್ಲಿ ಕೃಷ್ಣ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ: KGF 2 Star Yash: ಸಿನಿಮಾದಿಂದ ಹೊರ ಬಂದ ನಂತರ ನಿರ್ಮಾಪಕರಿಗೆ ಹಣ ಹಿಂತಿರುಗಿಸಿದ್ದಾರಂತೆ ಯಶ್​..!

ಇತ್ತೀಚೆಗಷ್ಟೆ ಬೆಂಗಳೂರಿನ ಬನಶಂಕರಿಯಲ್ಲಿರುವ ದೇವಾಲಯ ಒಂದರಲ್ಲಿ ಲವ್​ ಮಿ ಆರ್ ಹೇಟ್​ ಮಿ ಸಿನಿಮಾದ ಮುಹೂರ್ತ ನೆರವೇರಿತು. ಕೃಷ್ಣ ಅವರ ಮಡದಿ ಮಿಲನಾ ನಾಗರಾಜ್ ಅವರೇ ಕ್ಲ್ಯಾಪ್​ ಮಾಡಿದ್ದಾರೆ. ಈ ಸಿನಿಮಾದಲ್ಲಿ ನಾಯಕಿಯಾಗಿ ರಚಿತಾ ರಾಮ್ ಅವರು ನಟಿಸಲಿದ್ದಾರೆ.
Published by:Anitha E
First published: