Love Mocktail 2 ಟ್ರೈಲರ್​ ರಿಲೀಸ್​, ಮತ್ತೊಂದು ಮದ್ವೆಗೆ ರೆಡಿಯಾಗ್ತಿದ್ದಾರೆ ಆದಿ.. ಆದ್ರೆ, ನಿಧಿಮಾ ಬಿಡ್ತಾರಾ?

ಸಿನಿಮಾದ ಟ್ರೈಲರ್​ ಕೂಡ ಇಂದು ರಿಲೀಸ್​ ಆಗಿದೆ. ಈ ಟ್ರೈಲರ್​​ನಲ್ಲಿ ಮತ್ತೆ ಆದಿ ನೆನೆಪು ಆವರಿಸಿದೆ. ನಿಧಿಮಾ ನೆನಪಲ್ಲೇ ಆದಿ ಇದ್ದಾರೆ ಎಂಬುಂದು ಈ ಟ್ರೈಲರ್​ನಲ್ಲೇ ತಿಳಿದು ಬರುತ್ತೆ. ಅಷ್ಟೇ ಅಲ್ಲದೇ ಮತ್ತೊಂದು ಮದ್ವೆಗೆ ಆದಿ ರೆಡಿಯಾಗುತ್ತಿದ್ದಾರೆ.

ಡಾರ್ಲಿಂಗ್​ ಕೃಷ್ಣ, ಮಿಲನಾ ನಾಗರಾಜ್​

ಡಾರ್ಲಿಂಗ್​ ಕೃಷ್ಣ, ಮಿಲನಾ ನಾಗರಾಜ್​

  • Share this:
ಲವ್​ ಮಾಕ್​ಟೈಲ್(Love Mocktail)​.. ಪ್ರೇಮಿಗಳಿಗೆ ಈ ಸಿನಿಮಾ ಒಂದು ಪಾಠವನ್ನೇ ಕಲಿಸಿತ್ತು ಅಂದರೆ ತಪ್ಪಾಗಲ್ಲ. 2020ರ ಆರಂಭದಲ್ಲಿ ರಿಲೀಸ್​ ಆದ ‘ಲವ್​ ಮಾಕ್ಟೇಲ್​’ (Love Mocktail)ಸಿನಿಮಾ ಸೂಪರ್​ ಹಿಟ್​ ಆಗಿತ್ತು. ರಿಲೀಸ್​ ಆದ ದಿನ ಚಿತ್ರಮಂದಿರಗಳಿಗೆ ಜನ ಬರಲಿಲ್ಲ. ದಿನಗಳೆದಂತೆ ಈ ಸಿನಿಮಾ ಮಾಡಿದ ಕ್ರೇಜ್(Craze)​ ಇದೆಯಲ್ಲಾ, ಯಾವ ಕನ್ನಡ ಸಿನಿಮಾಗೂ ಆಗಿಲ್ಲ. ಸಿನಿಮಾ ಸೋತೇ ಹೋಯಿತು ಅಂದುಕೊಳ್ಳುವಾಗಲೇ ಲವ್​ಮಾಕ್​ಟೈಲ್​ ಸೂಪರ್​ ಡೂಪರ್(Super Duper Hit)​ ಹಿಟ್​ ಆಗಿತ್ತು. ನೋಡ ನೋಡುತ್ತಲೇ ಚಿತ್ರ ಬಾಕ್ಸಾಫೀಸ್​(Box Office)ನಲ್ಲಿ ಕಮಾಲ್​ ಮಾಡಿತ್ತು. ಕೊರೋನಾ ಕೊಂಚ ಬ್ರೇಕ್​ ಕೊಟ್ಟಿದ್ದಾಗ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಇದಾದ ಬಳಿಕ ಒಟಿಟಿಯಲ್ಲೂ ಈ ಸಿನಿಮಾ ಸಖತ್​ ಸೌಂಡ್​ ಮಾಡಿತ್ತು. ಲವ್​ ಮಾಕ್​ಟೈಲ್​ 1 ಸಿನಿಮಾದ ಯಶಸ್ಸಿನಲ್ಲಿರುವಾಗಲೇ ಚಿತ್ರತಂಡ, ಲವ್​ ಮಾಕ್​ಟೈಲ್​ 2 ಸಿನಿಮಾ ಮಾಡುವುದಾಗಿ ಹೇಳಿದ್ದರು. ಇದೀಗ ಸಿನಿಮಾ ಕೂಡ ರೆಡಿಯಾಗಿದೆ. ಸಿನಿಮಾದ ಟ್ರೈಲರ್​ ಕೂಡ ಇಂದು ರಿಲೀಸ್​ ಆಗಿದೆ. ಈ ಟ್ರೈಲರ್​​ನಲ್ಲಿ ಮತ್ತೆ ಆದಿ ನೆನೆಪು ಆವರಿಸಿದೆ. ನಿಧಿಮಾ ನೆನಪಲ್ಲೇ ಆದಿ ಇದ್ದಾರೆ ಎಂಬುಂದು ಈ ಟ್ರೈಲರ್​ನಲ್ಲೇ ತಿಳಿದು ಬರುತ್ತೆ. ಅಷ್ಟೇ ಅಲ್ಲದೇ ಮತ್ತೊಂದು ಮದ್ವೆಗೆ ಆದಿ ರೆಡಿಯಾಗುತ್ತಿದ್ದಾರೆ. ಚಿತ್ರದ ಕಥೆಯನ್ನ ಟ್ರೈಲರ್​ನಲ್ಲಿ ತೋರಿಸಲಾಗಿದೆ. ಮತ್ತೆ ಕಮಾಲ್​ ಮಾಡೋದರಲ್ಲಿ ಯಾವುದೆ ಅನುಮಾನ ಇಲ್ಲ. 

ಲವ್​​ ಮಾಕ್​ಟೈಲ್​ 2 ನಲ್ಲೂ ನಿಧಿಮಾ ಜೀವಂತ!

ಲವ್​ ಮಾಕ್​ಟೈಲ್​ ಒಂದರಲ್ಲಿ ನಿಧಿಮಾ ಪಾತ್ರ ಸಾಕಷ್ಟು ಸದ್ದು ಮಾಡಿತ್ತು. ನಿಧಿಮಾ ರೀತಿಯ ಹೆಂಡತಿ ಸಿಗಬೇಕೆಂದು ಎಲ್ಲರೂ ಜಪ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಿಧಿಮಾ ಪಾತ್ರ ಮೃತಪಡುತ್ತೆ. ಲವ್​ ಮಾಕ್​ಟೈಲ್​ 2ನಲ್ಲಿ ಈ ಪಾತ್ರ ಇರುವುದಿಲ್ಲ ಅಂತ ಚಿತ್ರತಂಡ ಹೇಳಿತ್ತು. ಆದರೂ, ಲವ್​ ಮಾಕ್​ಟೈಲ್​ 2 ಟ್ರೈಲರ್​ ತುಂಬಾ ಆ ಪಾತ್ರ ಜೀವಂತವಾಗಿ ಇಲ್ಲದಿದ್ದರೂ ಇಡೀ ಸಿನಿಮಾವನ್ನೇ ಆವರಿಸಿಕೊಳ್ಳಲಿದೆ. ಹೌದು, ನಿಧಿಮಾ ನೆನಪಲ್ಲಿ ಆದಿ ಪಾತ್ರ ಕಾಲ ಕಳೆಯುತ್ತೆ. ನಂತರ ಮತ್ತೊಂದು ಮದುವೆ ಆಗುವುದಕ್ಕೆ ತೀರ್ಮಾನ ಮಾಡುತ್ತಾರೆ. ಆಮೇಲೆ ಏನಾಗುತ್ತೆ? ಅನ್ನುವುದೇ ಕಥೆಯ ಜೀವಾಂಶ ಎಂಬುಂದು ಟ್ರೈಲರ್​ನಲ್ಲೇ ತಿಳಿಯಲಿದೆ.

ಇದನ್ನೂ ಓದಿ: ಜೇಮ್ಸ್ ‘ಪವರ್’ ಮುಂದೆ ನಡೀಲಿಲ್ಲ ಪರಭಾಷಾ ಖದರ್! ಮಾರ್ಚ್ 17ಕ್ಕೆ ರಿಲೀಸ್ ಆಗಲ್ಲ ‘ಆರ್​ಆರ್​ಆರ್​'

ಫೆಬ್ರವರಿ 11ಕ್ಕೆ ಲವ್​ ಮಾಕ್​ಟೈಲ್ - 2 ರಿಲೀಸ್​!​ 

ಶೀರ್ಷಿಕೆಯೇ ಸೂಚಿಸುವಂತೆ ಇದು ಲವ್​ ಸ್ಟೋರಿ ಸಿನಿಮಾ. ಪ್ರೇಮಿಗಳಿಗೆ ಸೂಕ್ತವಾಗುವಂತಹ ಕಥೆಯನ್ನು ನಿರೀಕ್ಷಿಸಲಾಗುತ್ತಿದೆ. ಹಾಗಾಗಿ ಫೆ.14ರ ಪ್ರೇಮಿಗಳ ದಿನದಂದು ಈ ಸಿನಿಮಾ ರಿಲೀಸ್​ ಆಗಬಹುದು ಎಂದು ಸಿನಿಪ್ರಿಯರು ಊಹಿಸಿದ್ದರು. ಆದರೆ, ಆ ದಿನಕ್ಕಿಂದ ಮೂರು ದಿನ ಮುನ್ನವೇ ಸಿನಿಮಾ ಬಿಡುಗಡೆಯಾಗುತ್ತಿದೆ . ‘ಲವ್​ ಮಾಕ್ಟೇಲ್​ 2’ ಚಿತ್ರಕ್ಕೆ ನಕುಲ್​ ಅಭ್ಯಂಕರ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಕೇಳುಗರಿಗೆ ಇಷ್ಟ ಆಗಿವೆ. ಚಿತ್ರದ ಸೆನ್ಸಾರ್​ ಪ್ರಕ್ರಿಯೆ ಕೂಡ ಮುಗಿದಿದೆ. ಸೆನ್ಸಾರ್​ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಸಿಕ್ಕಿದೆ.


ಇದನ್ನೂ ಓದಿ: ಆಹಾ.. ಏನ್​ ಮಸ್ತ್​​​ ಆಟ ಆಡ್ತಾರೆ ರಾಕಿಭಾಯ್​, ವಿಜಯ್​ ಅವ್ರೇ ಬೌಲರ್​, ಇವ್ರೇ ಬ್ಯಾಟ್ಸ್​ಮ್ಯಾನ್​.. ವಿಡಿಯೋ ವೈರಲ್​!


ರಿಲೀಸ್​ ಡೇಟ್​ ಪೋಸ್ಟ್​ಪೋನ್​ ಆಗುತ್ತಾ?

ಕೊರೋನಾದಿಂದಾಗಿ ಎಲ್ಲ ದೊಡ್ಡ ಸಿನಿಮಾಗಳು ಕೂಡ ತಮ್ಮ ರಿಲೀಸ್​ ದಿನಾಂಕವನ್ನು ಮುಂದೂಡುತ್ತಿದ್ದಾರೆ. ಇದೇ ಹಾದಿಯಲ್ಲಿ ಲವ್​ ಮಾಕ್​ಟೈಲ್ 2 ಸಿನಿಮಾ ಕೂಡ ಸಾಗುತ್ತಾ ಎಂಬ ಪ್ರಶ್ನೆ ಎದುರಾಗಿದೆ. ​ಕಾರಣ ಕೊರೋನಾದಿಂದ ಈಗಾಗಲೇ ಚಿತ್ರರಂಗ ನಲುಗಿಹೋಗಿದೆ. ಹೀಗಾಗಿ ಕೊರೋನಾ ಆತಂಕ ಕಡಿಮೆಯಾದ ಮೇಲೆ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್​ ಮಾಡಲಾಗಿದೆ.

Published by:Vasudeva M
First published: