Krishna-Milana Nagraj ದಂಪತಿಗೆ ರೋಮಿಯೋ ಕಾಟ: ಹೆಂಡ್ತಿಗೆ ಕಿಸ್​ ಮಾಡೋಕೂ ಬಿಡ್ತಿಲ್ವಂತೆ!

ಕೃಷ್ಣ ಅವರು ಮಿಲನಾಗೆ ಮುತ್ತು (Kiss) ಕೊಡಲು ಮುಂದಾದರೆ ಮಧ್ಯೆ ಬಂದು ತಡೆಯುತ್ತಿದ್ದಾನೆ, ನಾನ್ ಸ್ಟಾಪ್ ಬೊಗಳುತ್ತಿದ್ದಾನೆ. ಈ ವಿಡಿಯೋವನ್ನು ಸ್ವತಃ ಕೃಷ್ಣ ಅವರೇ ಹಂಚಿಕೊಡಿದ್ದು, ಕೃಷ್ಣ ಅವರ ಪಾಡಿಗೆ ನೆಟ್ಟಿಗರು ಅಯ್ಯೋ ಎನ್ನುತ್ತಿದ್ದಾರೆ. ಯಾಕೋ ರೋಮಿಯೋ ಅಂತ ಬರೆದು ಡಾರ್ಲಿಂಗ್​ ಕೃಷ್ಣ ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ

ಕೃಷ್ಣ, ಮಿಲನ ನಾಗರಾಜ್​, ರೋಮಿಯೋ

ಕೃಷ್ಣ, ಮಿಲನ ನಾಗರಾಜ್​, ರೋಮಿಯೋ

  • Share this:
‘ನಾನ್​ ಏನು ಮಾಡ್ಲಿ ಸ್ವಾಮಿ.. ನಮ್​ ಹುಡುಗಿ ನಾಯಿ  ಪ್ರೇಮಿ’ ಹಾಡು ಎಲ್ಲರಿಗೂ ನೆನಪಿದೆ ಇಲ್ವಾ. ಇರಲಿ ಆಮೇಲೆ ಅಲ್ಲಿಗೆ ಬರುತ್ತೇನೆ. ಪ್ರೇಮಿಗಳ ದಿನ(Valentines Day)ದಂದೇ ಈ ಪ್ರೇಮಿಗಳು ಮದುವೆಯಾಗಿದ್ದರು. ಲವ್​ ಮಾಕ್​ಟೈಲ್​(Lovemocktail) ಸಿನಿಮಾ ಮೂಲಕ ಸಖತ್​ ಫೇಮಸ್​ ಆದರು. ಅದಕ್ಕೂ ಮುಂಚೆ ಹಲವಾರು ಸಿನಿಮಾಗಳಲ್ಲಿ ಈ ಜೋಡಿ ನಟಿಸಿದ್ದರು. ಆದರೂ, ಲವ್​ ಮಾಕ್​ಟೈಲ್​ ತಂದುಕೊಟ್ಟ ಹೆಸರು ಮಾತ್ರ ಬೇರೆ. ಈಗ ಆ ನಾಯಿ ಹಾಡಿಗೆ ಬರೋಣ. ಎಲ್ಲರಿಗೂ ನಾಯಿ ಸಾಕುವ ಆಸೆ ಇರುತ್ತೆ. ಅದರಲ್ಲೂ ಕೆಲ ಹೆಣ್ಣುಮಕ್ಕಳಿಗೆ ನಾಯಿ ಅಂದರೆ ಪಂಚಪ್ರಾಣ. ನಟ ಡಾರ್ಲಿಂಗ್ ಕೃಷ್ಣ (Darling Krishna) ಮತ್ತು ನಟಿ ಮಿಲನಾ ನಾಗರಾಜ್ (Milana Nagaraj) ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೆಲವೇ ತಿಂಗಳಲ್ಲಿ ರೊಮಿಯೋ ಹೆಸರಿನ ಶಿಟ್‌ ಜು (Shih Tzu) ನಾಯಿ ಮರಿಯನ್ನು ತಂದರು. ಈ ನಾಯಿಯನ್ನು ಇಬ್ಬರು ನೋಡಿಕೊಂಡು ಮುದ್ದಾಡಿದ್ದರು. ಇದೀಗ ಈ ನಾಯಿ ಡಾರ್ಲಿಂಗ್​ ಕೃಷ್ಣ ಅವರಿಗೆ ಸಖತ್ ಕಾಟ ಕೊಡುತ್ತಿದೆಯಂತೆ. ಎಷ್ಟರ ಮಟ್ಟಿಗೆ ಅಂದರೆ, ರೋಮಿಯೋ(Romeo) ಕಾಟದ ಬಗ್ಗೆ ವಿಡಿಯೋ ಮಾಡಿ ಡಾರ್ಲಿಂಗ್​ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ರೋಮಿಯೋ ಕಾಟ ಕಂಡು ನೆಟ್ಟಿಗರು ಶಾಕ್​ ಆಗಿದ್ದಾರೆ. ಅದೇನಿದೆ ಅಂಥದ್ದು ಅಂತೀರಾ? ಮುಂದೆ ನೋಡಿ!

ಹೆಂಡ್ತಿಗೆ ಮುದ್ದು ಮಾಡೋಕೂ ಬಿಡ್ತಿಲ್ವಂತೆ ರೋಮಿಯೋ!

ಲಾಕ್​ಡೌನ್‌ ಸಮಯದಲ್ಲಿ ಇವರಿಬ್ಬರಿಗೂ ಒಳ್ಳೆಯ ಕಂಪನಿ ಕೊಟ್ಟ ನಾಯಿ ಇದೀಗ ಅವರಿಬ್ಬರು ಮುದ್ದು ಮಾಡಲು ಬಿಡುತ್ತಿಲ್ಲ. ಕೃಷ್ಣ ಅವರು ಮಿಲನಾಗೆ ಮುತ್ತು (Kiss) ಕೊಡಲು ಮುಂದಾದರೆ ಮಧ್ಯೆ ಬಂದು ತಡೆಯುತ್ತಿದ್ದಾನೆ, ನಾನ್ ಸ್ಟಾಪ್ ಬೊಗಳುತ್ತಿದ್ದಾನೆ. ಈ ವಿಡಿಯೋವನ್ನು ಸ್ವತಃ ಕೃಷ್ಣ ಅವರೇ ಹಂಚಿಕೊಡಿದ್ದು, ಕೃಷ್ಣ ಅವರ ಪಾಡಿಗೆ ನೆಟ್ಟಿಗರು ಅಯ್ಯೋ ಎನ್ನುತ್ತಿದ್ದಾರೆ. ಯಾಕೋ ರೋಮಿಯೋ ಅಂತ ಬರೆದು ಡಾರ್ಲಿಂಗ್​ ಕೃಷ್ಣ ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ಇದಕ್ಕೆ ಮಿಲನಾ ನಾಗರಾಜ್​ ನಗುವ ಎಮೋಜಿ ಕಮೆಂಟ್ ಮಾಡಿದ್ದಾರೆಇದನ್ನು ಓದಿ : ಫೆಬ್ರವರಿ 11ಕ್ಕೆ ಲವ್​ ಮಾಕ್​ಟೈಲ್​ 2 ರಿಲೀಸ್​: ಮತ್ತೆ ಕಮಾಲ್​ ಮಾಡೋಕೆ ನಿಧಿಮಾ-ಆದಿ ರೆಡಿ!

ಸಾಮಾಜಿಕ ಜಾಲತಾಣದಲ್ಲಿ ರೋಮಿಯೋ ಗಲಾಟೆ ಜೋರು!

ಡಾರ್ಲಿಂಗ್​ ಕೃಷ್ಣ ಅವರು ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆ ವಿಡಿಯೋ ಸಖತ್​ ವೈರಲ್​ ಆಗಿದೆ. ನೆಟ್ಟಿಗರು ಡಿಫ್ರೆಂಟ್​ ಡಿಫ್ರೆಂಟ್ ಕಮೆಂಟ್​ ಮಾಡುತ್ತಿದ್ದಾರೆ. ಏನ್​ ಮಾಡ್ತೀರಾ ಸ್ವಾಮಿ ನಿಮ್​ ಹೆಂಡ್ರಿ ನಾಯಿ ಪ್ರೇಮಿ ಅಂತ ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೂ ಈ ವಿಡಿಯೋಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಲೈಕ್​ ಕೊಟ್ಟಿದ್ದಾರೆ.  ನಿಮ್ಮ ಕಥೆ ಇನ್ನೂ ಅಷ್ಟೇ ಬಿಡಿ ರೋಮಿಯೋ ಮುಂದೆ ಶರಣಾಗಿ ಎಂದು ಮತ್ತೊಬ್ಬ ಕಮೆಂಟ್​ ಮಾಡಿದ್ದಾರೆ.

ಇದನ್ನು ಓದಿ : ಸೀರೆ ತೊಟ್ಟು ಪೋಸ್​ ಕೊಟ್ಟ ಕೊಡಗಿನ ಕುವರಿ: ಏನೂ ವೈನಾಗ್ ಕಾಣಸ್ತಾಳೆ ರನ್ನನ್ನೋ ಎಂದ ಫ್ಯಾನ್ಸ್​!

ಫೆಬ್ರವರಿ 11ಕ್ಕೆ ಲವ್​ ಮಾಕ್​ಟೈಲ್ - 2 ರಿಲೀಸ್​!​ 

ಇನ್ನೂ ಗಂಡ ಹೆಂಡತಿ ಅಭಿನಯದ ಸಿನಿಮಾ, ಶೀರ್ಷಿಕೆಯೇ ಸೂಚಿಸುವಂತೆ ಇದು ಲವ್​ ಸ್ಟೋರಿ ಸಿನಿಮಾ. ಪ್ರೇಮಿಗಳಿಗೆ ಸೂಕ್ತವಾಗುವಂತಹ ಕಥೆಯನ್ನು ನಿರೀಕ್ಷಿಸಲಾಗುತ್ತಿದೆ. ಹಾಗಾಗಿ ಫೆ.14ರ ಪ್ರೇಮಿಗಳ ದಿನದಂದು ಈ ಸಿನಿಮಾ ರಿಲೀಸ್​ ಆಗಬಹುದು ಎಂದು ಸಿನಿಪ್ರಿಯರು ಊಹಿಸಿದ್ದರು. ಆದರೆ, ಆ ದಿನಕ್ಕಿಂದ ಮೂರು ದಿನ ಮುನ್ನವೇ ಸಿನಿಮಾ ಬಿಡುಗಡೆಯಾಗುತ್ತಿದೆ . ‘ಲವ್​ ಮಾಕ್ಟೇಲ್​ 2’ ಚಿತ್ರಕ್ಕೆ ನಕುಲ್​ ಅಭ್ಯಂಕರ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಕೇಳುಗರಿಗೆ ಇಷ್ಟ ಆಗಿವೆ. ಚಿತ್ರದ ಸೆನ್ಸಾರ್​ ಪ್ರಕ್ರಿಯೆ ಕೂಡ ಮುಗಿದಿದೆ. ಸೆನ್ಸಾರ್​ ಮಂಡಳಿಯಿಂದ ‘ಯು’ ಪ್ರಮಾಣ ಪತ್ರ ಸಿಕ್ಕಿದೆ.

Published by:Vasudeva M
First published: