ತಮ್ಮ ಮದುವೆಯ ದಿನವೇ ಅಭಿಮಾನಿಗಳಿಗೆ ಸರ್​ಪ್ರೈಸ್ ನೀಡಲಿದ್ದಾರೆ ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​

ಈಗಾಗಲೇ ರಿಲೀಸ್ ಆಗಿ ಜನಮೆಚ್ಚುಗೆ ಗಳಿಸಿರುವ ಪಾರ್ಟ್​-1 ಲವ್​ ಮಾಕ್ಟೇಲ್​ ಸಿನಿಮಾ ಈಗ ಎರಡನೇ ಭಾಗವಾಗಿ ಬರುತ್ತಿದೆ. ಇದು ಭಾಗ-1ಕ್ಕಿಂತ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಸಿರುವುದಂತೂ ಸುಳ್ಳಲ್ಲ.

ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​

ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​

 • Share this:
  ಲವ್​ ಮಾಕ್ಟೇಲ್​ ಸಿನಿಮಾದ ಮೂಲಕ ಸಿನಿಪ್ರೇಮಿಗಳ ಮೆಚ್ಚಿನ ಜೋಡಿಯಾಗಿ ಮನೆ ಮಾತಾದವರು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ಸ್ಯಾಂಡಲ್​ವುಡ್​ನ ಈ ಜೋಡಿ ಇದೇ ಫೆಬ್ರವರಿ 14ರಂದು ಅಂದರೆ ಪ್ರೇಮಿಗಳ ದಿನದಂದು ಈ ಪ್ರೇಮಿಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಶುಭದಿನದಂದು ಕೃಷ್ಣ-ಮಿಲನಾ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್​ ಕೊಡಲು ನಿರ್ಧರಿಸಿದ್ದಾರೆ.

  ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​ ಲವ್​ ಮಾಕ್ಟೇಲ್​ ಸಿನಿಮಾ ಅದ್ಭುತ ಯಶಸ್ಸು ಗಳಿಸಿದ ಬಳಿಕ ಜನರ ಅಚ್ಚುಮೆಚ್ಚಿನ ಜೋಡಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಪರದೆ ಮೇಲೆ ಕಾಣಿಸಿಕೊಂಡ ಈ ಜೋಡಿ ನಿಜ ಜೀವನದಲ್ಲೂ ಸಪ್ತಪದಿ ತುಳಿಯಲಿ ಎಂಬ ಹಾರೈಕೆ ಹಲವರದ್ದು. ಈಗ ಪ್ರೇಮಿಗಳು ಎಂಬ ಪಟ್ಟದಿಂದ ದಂಪತಿಗಳು ಎಂಬ ಪಟ್ಟಕ್ಕೆ ಪ್ರಮೋಷನ್ ಹೊಂದಲು ಕಾತುರರಾಗಿದ್ದಾರೆ. ಹೀಗಾಗಿ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

  ತಮಿಳುನಾಡು ಗಡಿಯಲ್ಲಿ 60 ಕ್ಕೂ ಹೆಚ್ಚು ಕಾಡಾನೆಗಳ ದಂಡು; ಬೆಳೆ ನಾಶದ ಆತಂಕದಲ್ಲಿ ರೈತರು

  ಈ ನಡುವೆಯೇ ಲವ್​ ಮಾಕ್ಟೇಲ್​-2 ಸಿನಿಮಾದ ಚಿತ್ರೀಕರಣವೂ ಸಹ ಸಾಗುತ್ತಿದೆ. ಇಬ್ಬರೂ ಸಹ ಚಿತ್ರೀಕರಣದಲ್ಲಿ ಕೊಂಚ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷಿತ ಲವ್​ ಮಾಕ್ಟೇಲ್-2 ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದೆ ಎನ್ನಲಾಗಿದೆ. ಅಂತಿಮ ಹಂತದ ಚಿತ್ರೀಕರಣದಲ್ಲಿ ಈ ಸಿನಿಮಾ ತಂಡವಿದೆ.

  ಸ್ಯಾಂಡಲ್​ವುಡ್​ನ ಈ ಕ್ಯೂಟ್​ ಜೋಡಿ ತಮ್ಮ ಮದುವೆಯ ದಿನದಂದು ಅಭಿಮಾನಿಗಳಿಗೆ ಕೊಡುತ್ತಿರುವ ಸರ್​​ಪ್ರೈಸ್​ ಗಿಫ್ಟ್​ ಏನು ಅಂತೀರಾ? ಬಹುತೇಕ ಚಿತ್ರೀಕರಣ ಮುಗಿಸಿರುವ ಲವ್​ ಮಾಕ್ಟೇಲ್​-2 ಸಿನಿಮಾದ ಹಾಡನ್ನು ತಮ್ಮ ಮದುವೆ ದಿನವೇ ಅಂದರೆ ಫೆ.14ರಂದು ಬಿಡುಗಡೆ ಮಾಡಲಿದ್ದಾರಂತೆ. ಲವ್​ ಮಾಕ್ಟೇಲ್ -2 ಸಿನಿಮಾ ತಂಡ ಹೀಗೊಂದು ಪ್ಲಾನ್ ಮಾಡಿಕೊಂಡಿದೆಯಂತೆ. ಅದು ಕೃಷ್ಣ-ಮಿಲನಾ ಮದುವೆ ದಿನವೇ ಹಾಡು ರಿಲೀಸ್ ಆಗುತ್ತಿರುವುದು ಮತ್ತಷ್ಟು ವಿಶೇಷವಾಗಿದೆ.

  ಈಗಾಗಲೇ ರಿಲೀಸ್ ಆಗಿ ಜನಮೆಚ್ಚುಗೆ ಗಳಿಸಿರುವ ಪಾರ್ಟ್​-1 ಲವ್​ ಮಾಕ್ಟೇಲ್​ ಸಿನಿಮಾ ಈಗ ಎರಡನೇ ಭಾಗವಾಗಿ ಬರುತ್ತಿದೆ. ಇದು ಭಾಗ-1ಕ್ಕಿಂತ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟಿಸಿರುವುದಂತೂ ಸುಳ್ಳಲ್ಲ. ಸಿನಿ ಪ್ರೇಮಿಗಳು ಮತ್ತು ಪ್ರೇಕ್ಷಕರು ಲವ್​ ಮಾಕ್ಟೇಲ್​-1 ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ ಎಂದರೆ ತಪ್ಪಾಗಲಾರದು.

  ಈ ಲವ್​ ಮಾಕ್ಟೇಲ್-2 ಚಿತ್ರದಲ್ಲಿ ಮಿಲನಾ ನಾಗರಾಜ್ ಪಾತ್ರ ಇಲ್ಲ. ಪಾರ್ಟ್​-1ರಲ್ಲಿ ನಿಧಿಮಾ ಆಗಿ ಮಿಂಚಿದ್ದ ಮಿಲನಾ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಇನ್ನು, ಡಾರ್ಲಿಂಗ್​ ಕೃಷ್ಣ ಸಿನಿಮಾದ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ರಾಚೆಲ್ ಡೇವಿಡ್ ಮಿಂಚಿದ್ದು, ಇದು ಇವರಿಗೆ ಮೊದಲ ಸಿನಿಮಾವಾಗಿದೆ.
  Published by:Latha CG
  First published: