ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ಸ್ಟಾರ್ ಜೋಡಿ ನಟಿ ಮಿಲನಾ ನಾಗರಾಜ್ (Milana Nagaraj)- ಡಾರ್ಲಿಂಗ್ ಕೃಷ್ಣ (Darling Krishna) ಮದುವೆ ಯಾವಾಗ ಎಂಬ ಸುದ್ದಿಗೆ ಇತ್ತೀಚೆಗಷ್ಟೆ ತೆರೆ ಬಿದ್ದಿದೆ. ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ ತಮ್ಮ ಮದುವೆ ದಿನಾಂಕವನ್ನು ವಿಶೇಷವಾಗಿ ಪ್ರಕಟ ಮಾಡುವ ಮೂಲಕ ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದ್ದರು. ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಪ್ರೇಮಿಗಳ ದಿನದಂದು ಈ ಪ್ರೇಮಿಗಳು ಹಸೆಮಣೆ ಏರಲು ನಿರ್ಧರಿಸಿದ್ದಾರೆ. ಫೆ. 14ರಂದು ಇವರ ಮದುವೆ ಮುಹೂರ್ತ ಕೂಡಿ ಬಂದಿದೆ. ಆದರೆ, ಲವ್ ಮಾಕ್ಟೇಲ್ ಸಿನಿಮಾ ಮುಗಿದಾಕ್ಷಣವೇ ಈ ಜೋಡಿ ಮದುವೆಯಾಗಲು ನಿರ್ಧರಿಸಿದ್ದರು. ಆದರೆ, ಕೊರೋನಾ ಕಾರಣದಿಂದ ಮದುವೆಯನ್ನು ಮುಂದೂಡಿದ್ದರು. ನಂತರ ಲವ್ ಮಾಕ್ಟೇಲ್-2 ಬಳಿಕ ಈ ಜೋಡಿ ಮದುವೆಯಾಗುವುದಾಗಿ ತಿಳಿದ್ದರು. ಆದರೆ ಈಗ ಈ ಜೋಡಿ ಫೆ. 14ರಂದು ತಮ್ಮ ಹೊಸ ಜೀವನವನ್ನು ಶುರು ಮಾಡಲಿದ್ದಾರೆ.
ಲವ್ ಮಾಕ್ಟೇಲ್ ಸಿನಿಮಾದ ಮೂಲಕ ಸಿನಿಪ್ರೇಮಿಗಳ ಮೆಚ್ಚಿನ ಜೋಡಿಯಾಗಿ ಮನೆ ಮಾತಾದವರು ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅವರ ಲಗ್ನ ಪತ್ರಿಕೆಯ ಪ್ರತಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇನ್ನೇನು ಇವರ ಮದುವೆಗೆ ದಿನ ಗಣನೆ ಆರಂಭವಾಗಿದ್ದು, ಸೆಲೆಬ್ರಿಟಿ ಕಪಲ್ ಮದುವೆಗೆ ಆಹ್ವಾನ ನೀಡಲಾರಂಭಿಸಿದ್ದಾರೆ.
View this post on Instagram
View this post on Instagram
View this post on Instagram
ಇದನ್ನೂ ಓದಿ: ದರ್ಶನ್ -ಜೋಗಿ ಪ್ರೇಮ್ ತೋಟದ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ..!
ಇವರ ಮದುವೆ ತಯಾರಿಯ ನಡುವೆಯೇ ಲವ್ ಮಾಕ್ಟೇಲ್-2 ಸಿನಿಮಾದ ಚಿತ್ರೀಕರಣವೂ ಸಹ ಸಾಗುತ್ತಿದೆ. ಇಬ್ಬರೂ ಸಹ ಚಿತ್ರೀಕರಣದಲ್ಲಿ ಕೊಂಚ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷಿತ ಲವ್ ಮಾಕ್ಟೇಲ್-2 ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದೆ ಎನ್ನಲಾಗಿದೆ. ಅಂತಿಮ ಹಂತದ ಚಿತ್ರೀಕರಣದಲ್ಲಿ ಈ ಸಿನಿಮಾ ತಂಡವಿದೆ.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ