• Home
  • »
  • News
  • »
  • entertainment
  • »
  • Darling Krishna-Milana Nagaraj: ಡಾರ್ಲಿಂಗ್ ಕೃಷ್ಣ, ಮಿಲನಾ ಮುಖಾ-ಮುಖಿ! ಒಂದೇ ದಿನ ಪತಿ-ಪತ್ನಿ ಪ್ರತ್ಯೇಕ ಚಿತ್ರ ರಿಲೀಸ್

Darling Krishna-Milana Nagaraj: ಡಾರ್ಲಿಂಗ್ ಕೃಷ್ಣ, ಮಿಲನಾ ಮುಖಾ-ಮುಖಿ! ಒಂದೇ ದಿನ ಪತಿ-ಪತ್ನಿ ಪ್ರತ್ಯೇಕ ಚಿತ್ರ ರಿಲೀಸ್

ಓ ಎಂಬ ಸಿನಿಮಾದಲ್ಲಿ ಮಿಲನಾ ನಾಗರಾಜ್ ದೆವ್ವವೇ?

ಓ ಎಂಬ ಸಿನಿಮಾದಲ್ಲಿ ಮಿಲನಾ ನಾಗರಾಜ್ ದೆವ್ವವೇ?

ಸ್ಯಾಂಡಲ್​​ವುಡ್​ನ ರಿಯಲ್ ಲೈಫ್ ಪತಿ ಮತ್ತು ಪತ್ನಿಯ ಸಿನಿಮಾ ಒಟ್ಟಿಗೆ ಬರೋದು ತುಂಬಾ ವಿರಳ. ಆದರೆ ಈ ಶುಕ್ರವಾರ ತುಂಬಾ ಸ್ಪೆಷಲ್ ಆಗಿದೆ. ರಿಯಲ್ ಲೈಫ್ ನ ಪತಿ ಮತ್ತು ಪತ್ನಿಯ ಸಿನಿಮಾಗಳು ಮುಖಾ-ಮುಖಿ ಆಗಿವೆ. ಒಂದೇ ದಿನ ಎರಡು ಸಿನಿಮಾ ಬರ್ತಿರೋದು ವಿಶೇಷ ಅಷ್ಟೇ ಅಲ್ಲ. ವಿಭಿನ್ನವಾಗಿಯೂ ಇವೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಸ್ಯಾಂಡಲ್​​ವುಡ್​ನ ರಿಯಲ್ (Real Life) ಲೈಫ್ ಪತಿ ಮತ್ತು ಪತ್ನಿಯ ಸಿನಿಮಾ ಒಟ್ಟಿಗೆ ಬರೋದು ತುಂಬಾ ವಿರಳ. ಆದರೆ ಈ ಶುಕ್ರವಾರ (Friday) ತುಂಬಾ ಸ್ಪೆಷಲ್ ಆಗಿದೆ. ರಿಯಲ್ ಲೈಫ್ ನ ಪತಿ ಮತ್ತು ಪತ್ನಿಯ ಸಿನಿಮಾಗಳು ಮುಖಾ-ಮುಖಿ ಆಗಿವೆ. ಒಂದೇ ದಿನ ಎರಡು (Two Cinema) ಸಿನಿಮಾ ಬರ್ತಿರೋದು ವಿಶೇಷ ಅಷ್ಟೇ ಅಲ್ಲ. ವಿಭಿನ್ನವಾಗಿಯೂ ಇವೆ. ಪತಿ ರೋಮ್ಯಾಂಟಿಕ್ (Romantic Content) ಕಂಟೆಂಟ್ ಇರೋ ಚಿತ್ರದೊಂದಿಗೆ ಬರ್ತಿದ್ದಾರೆ. ಪತ್ನಿಯ ಸಿನಿಮಾದಲ್ಲಿರೋ ಕಂಟೆಂಟ್ ಹಾರರ್ ಆಗಿದೆ. ಈ ಎರಡು ಸಿನಿಮಾಗಳು ವಿಶೇಷವಾಗಿಯೇ ಇವೆ.  ಎರಡು ಸಿನಿಮಾ ಬಗ್ಗೆ ಒಂದು ನಿರೀಕ್ಷೆ ಇದ್ದೇ ಇದೆ.  ಇನ್ನು ಕನ್ನಡದ ಈ ಜೋಡಿಯ ಈ ವಿಶೇಷ ಸಿನಿಮಾದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.


ಕನ್ನಡದ ಡಾರ್ಲಿಂಗ್ ಜೋಡಿಯ ಸಖತ್ ಮುಖಾ-ಮುಖಿ


ಕನ್ನಡದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಟ್ಟಿಗೆ ಸಿನಿಮಾ ಮಾಡಿರೋದು ಗೊತ್ತೇ ಇದೆ. ಲವ್ ಮಾಕ್ಟೆಲ್ ಸಿನಿಮಾದ ಮೂಲಕ ಸಿನಿ ಲೈಫ್​​ ನಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ರು. ಇವರ ಲವ್ ಮಾಕ್ಟೆಲ್-2 ಸಿನಿಮಾ ಕೂಡ ಹಿಟ್ ಆಗಿದೆ.




ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಈ ಸಲ ಬೇರೆ ಬೇರೆ ಜಾನರ್​ ನ ಪ್ರತ್ಯೇಕ ಚಿತ್ರದಲ್ಲಿ ಬರ್ತಿದ್ದಾರೆ. ಇದನ್ನ ಈ ವಾರದ ವಿಶೇಷ ಅಂದ್ರೂ ತಪ್ಪಿಲ್ಲ. ಮಿಲನಾ ನಾಗರಾಜ್ ಅಭಿನಯದ ಚಿತ್ರದಲ್ಲಿ ಹಾರರ್ ಕಂಟೆಂಟ್ ಇದೆ. ಡಾರ್ಲಿಂಗ್ ಕೃಷ್ಣ ನಟನೆಯ ಚಿತ್ರದಲ್ಲಿ ರೋಮ್ಯಾಂಟಿಕ್ ಕಂಟೆಂಟ್ ಇದೆ.


Darling Krishna and Milana Nagaraj Films are Release this Friday
ಡಾರ್ಲಿಂಗ್ ಕೃಷ್ಣ ದಿಲ್​ಪಸಂದ್ ಅಂತವ್ರೇ


ಡಾರ್ಲಿಂಗ್ ಕೃಷ್ಣ ದಿಲ್​ಪಸಂದ್ ಅಂತವ್ರೇ
ದಿಲ್​ಪಸಂದ್ ಡಾರ್ಲಿಂಗ್ ಕೃಷ್ಣ ಅಭಿನಯದ ಸಿನಿಮಾ. ಈ ಚಿತ್ರದಲ್ಲಿ ಈ ನಾಯಕನಿಗೆ ಇಬ್ಬರು ಹೀರೋಯಿನ್​ಗಳಿದ್ದಾರೆ. ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ನಟಿ ಮೇಘ ಶೆಟ್ಟಿ ಈ ಚಿತ್ರದಲ್ಲಿ ಡಾರ್ಲಿಂಗ್​ ಕೃಷ್ಣನಿಗೆ ಜೋಡಿ ಆಗಿದ್ದಾರೆ.


ಇದನ್ನೂ ಓದಿ: Gana Bajana Season 3: ಸ್ಟಾರ್ ಸುವರ್ಣದಲ್ಲಿ ಮತ್ತೆ ಗಾನಬಜಾನ, ಸೀಸನ್ 3ಗೆ ರಿಷಬ್ ಶೆಟ್ಟಿ ಆ್ಯಂಡ್ ಟೀಮ್ ಆಗಮನ!


ಗುರು ಶಿಷ್ಯರು ಸಿನಿಮಾ ಖ್ಯಾತಿಯ ನಟಿ ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ನವರಸಗಳನ್ನ ಇಲ್ಲಿ ಅಭಿನಯಿಸಿ ತೋರಿಸಿದ್ದಾರೆ.
ಅಷ್ಟು ವಿಶೇಷವಾದ ಈ ಚಿತ್ರದಲ್ಲಿ ರೋಮ್ಯಾನ್ಸ್ ಇದೆ. ಹಾಸ್ಯದ ಹೊನಲು ಇರುತ್ತದೆ. ಎಮೋಷನ್ಸ್ ಕೂಡ ಇದೆ. ಈ ಎಲ್ಲ ವಿಷಯಗಳನ್ನ ಒಳಗೊಂಡ ಈ ಚಿತ್ರವನ್ನ, ಟ್ರೆಂಡಿಯಾಗಿಯೇ ಡೈರೆಕ್ಟರ್ ಶಿವತೇಜಸ್ ತೆಗೆದಿದ್ದಾರೆ.


ಡಾರ್ಲಿಂಗ್ ಕೃಷ್ಣನ ಸಿನಿಮಾದಲ್ಲಿ ಕೃಷ್ಣ ಅಜಯ್ ರಾವ್


ದಿಲ್​ಪಸಂದ್ ವಿಶೇಷತೆಗಳಲ್ಲಿ ಅಜಯ್ ರಾವ್ ಪಾತ್ರವೂ ವಿಶೇಷವಾಗಿಯೇ ಇದೆ. ದಿಲ್​ಪಸಂದ್ ಕಥೆ ಮೆಚ್ಚಿಕೊಂಡು ಅಜಯ್ ರಾವ್ ಇಲ್ಲಿ ಅಭಿನಯ ಮಾಡಿದ್ದಾರೆ. ಅದಕ್ಕೂ ಹೆಚ್ಚಾಗಿಯೇ ಈ ಚಿತ್ರದಲ್ಲಿ ಅಜಯ್ ರಾವ್ ಮಹತ್ವದ ಪಾತ್ರದಲ್ಲಿಯೇ ಕಾಣಿಕೊಳ್ಳುತ್ತಿದ್ದಾರೆ.


Darling Krishna and Milana Nagaraj Films are Release this Friday
ಒಂದೇ ದಿನ ಪತಿ ಪತ್ನಿ ಪ್ರತ್ಯೇಕ ಚಿತ್ರ ಈ ಶುಕ್ರವಾರ ರಿಲೀಸ್


ಓ ಎಂಬ ಸಿನಿಮಾದಲ್ಲಿ ಮಿಲನಾ ನಾಗರಾಜ್ ದೆವ್ವವೇ?


ಕನ್ನಡದಲ್ಲಿ ಹಾರರ್ ಸಿನಿಮಾ ಬರ್ತಾನೇ ಇವೆ. ಹಾರರ್ ಕಂಟೆಂಟ್ ನಂಬಿದ ನಿರ್ಮಾಪಕರು ಗೆಲುವು ಕಂಡಿದ್ದಾರೆ. ಅದರಂತೆ ಓ ಸಿನಿಮಾ ಕೂಡ ವಿಶೇಷವಾಗಿಯೇ ಕಾಣುತ್ತಿದೆ. ದೆವ್ವದ ಕಂಟೆಂಟ್ ಇರೋ ಈ ಚಿತ್ರದಲ್ಲಿ ಮಿಲನಾ ನಾಗರಾಜ್ ವಿಶೇಷವಾಗಿಯೇ ಅಭಿನಯಿಸಿದ್ದಾರೆ.


ಮಿಲನಾ ನಾಗರಾಜ್ ಮೇಲೆ ಈ ಚಿತ್ರದಲ್ಲಿ ದೆವ್ವ ಬರುತ್ತದೆ. ಅದನ್ನ ಇಲ್ಲಿ ಅಷ್ಟೇ ಅದ್ಭುತವಾಗಿಯೇ ಮಿಲನಾ ನಾಗರಾಜ್ ಅಭಿನಯಿಸಿ ತೋರಿದ್ದಾರೆ. ಅದನ್ನ ಒಮ್ಮೆ ನೋಡಿದ್ರೆ, ನಿಮಗೆ ಕಂಡಿತವಾಗಿಯೂ ಭಯ ಹುಟ್ಟುತ್ತದೆ. ಅಷ್ಟು ನೈಜವಾಗಿಯೇ ಮಿಲನಾ ನಾಗರಾಜ್ ಇಲ್ಲಿ ಅಭಿನಯಿಸಿದ್ದಾರೆ.


ಓ ಚಿತ್ರದ ಟ್ರೈಲರ್ ಈ ಎಲ್ಲ ಸತ್ಯವನ್ನ ಈಗ ಹೇಳುತ್ತಿದೆ. ಮಿಲನಾ ನಾಗರಾಜ್ ಪಾತ್ರಕ್ಕೆ ಪೂರಕ ಅನ್ನೋ ಹಾಗೆ ಚಿತ್ರದಲ್ಲಿ ಇನ್ನೂ ಒಂದಷ್ಟು ಪಾತ್ರಗಳೂ ಇವೆ. ಆ ರೋಲ್​​ನಲ್ಲಿ ಅಮೃತಾ ಅಯ್ಯರ್ ನಟಿಸಿದ್ದಾರೆ. ಕಿರುತೆರೆಯಲ್ಲಿ ಹೆಸರಾಗಿರೋ ಯುವ ನಟ ಸಿದ್ದು ಮೂಲಿಮನಿ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.


ಇದನ್ನೂ ಓದಿ: Kantara: ಮತ್ತೊಂದು ರೆಕಾರ್ಡ್ ಬ್ರೇಕ್ ಮಾಡಿದ ಕಾಂತಾರ, ರಾಜ್ಯದಲ್ಲಿ ಈವರೆಗೂ 1 ಕೋಟಿ ಟಿಕೆಟ್‌ಗಳು ಸೇಲ್!


ಮಹೇಶ್ ಸಿ. ಅಮ್ಮಳ್ಳಿದೊಡ್ಡಿ ಈ ಚಿತ್ರವನ್ನ ನಿರ್ದೇಶನದ ಮಾಡಿದ್ದಾರೆ. ಈ ಹಾರರ್ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್ ಕೂಡ ಅಭಿನಯಿಸಿದ್ದಾರೆ. ನಟಿ ಸಂಗೀತಾ ಅನಿಲ್ ಕೂಡ ಇದ್ದಾರೆ. ಎಲ್ಲರೂ ಇರೋ ಈ ಚಿತ್ರ ತನ್ನ ಟ್ರೈಲರ್ ನಿಂದಲೇ ಈಗ ಭರವಸೆ ಮೂಡಿಸಿದೆ.

First published: